ಬೆಂಗಳೂರು : ಸ್ಯಾಂಡಲ್‌ವುಡ್ ನಲ್ಲಿ ನಿರ್ದೇಶಕನಾಗಿ ಮತ್ತು ನಟನಾಗಿ ಟ್ರೆಂಡ್ ಸೃಷ್ಟಿ ಮಾಡಿದ್ದವರಂದರೆ ರಕ್ಷಿತ್ ಶೆಟ್ಟಿ. ಯಾವಾಗಲೂ ಕಂಟೆಟ್ ಫಿಲ್ಮ್ ಗೆ ಆದ್ಯತೆ ನೀಡೋ ರಕ್ಷಿತ್ ಶೆಟ್ಟಿ ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಈಗ ರಕ್ಷಿತ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನಿಮಾ 777 ಚಾರ್ಲಿ ಇದೇ ಜೂನ್ 8 ರಂದು ತೆರೆ ಕಾಣುತ್ತಿದೆ. ಚಾರ್ಲಿ ಸಿನಿಮಾವನ್ನು ಹಿಂದಿಯಲ್ಲಿ ವಿತರಣೆ ಮಾಡುವವರು ಯಾರು ಎಂಬ ವಿಚಾರ ತಿಳಿದು ಬಂದಿದೆ. ದೇಶದಲ್ಲಿ ಅತಿ ದೊಡ್ಡ ವಿತರಣಾ ಜಾಲ ಹೊಂದಿರುವ ಯುಎಫ್‌ಒ(UFO). ಸಂಸ್ಥೆ ಹಿಂದಿ ಅವತರಣಿಕೆಯ ವಿತರಣೆ ಹೊಣೆ ಹೊತ್ತಿದ್ದು, ಚಾರ್ಲಿ ಸಿನಿಮಾ ಸಕ್ಸೆಸ್ ಸಾಧ್ಯತೆ ಮತ್ತಷ್ಟು ನಿಚ್ಚಳವಾಗಿದೆ.ಮೇ 16ರ ಮದ್ಯಾಹ್ನ 12.12ಕ್ಕೆ ಅಫಿಷಿಯಲ್ ಟ್ರೈಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
ಪಂಚ ಭಾಷೆಗಳಲ್ಲಿ ತೆರೆ ಕಾಣ್ತೀರೋ ಚಾರ್ಲಿ :
ಕನ್ನಡದ ಜೊತೆಗೆ ಮಲಯಾಳಂ, ತೆಲುಗು , ಹಿಂದಿ, ತಲಿಳು ಭಾಷೆಯಲ್ಲಿ ತೆರೆ ಬರುತ್ತಿರುವ ಚಾರ್ಲಿ , ಈಗಾಗಲೇ ಟೀಸರ್ ಮೂಲಕ ಬೇರೆ ಬೇರೆ ಭಾಷಿಗರನ್ನು ಸೆಳೆದಿದೆ. ತೆಲಗುವಿನಲ್ಲಿ ನಟ ರಾಣಾ ದಗ್ಗುಬಾಟಿ, ತಮಿಳಿನಲ್ಲಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ಮಲೆಯಾಳಂನಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ವಿತರಣೆ ಮಾಡುವ ಜವಬ್ದಾರಿ ಹೊಂದಿದ್ದು, ಅದೇ ರೀತಿಯಲ್ಲಿ ಹಿಂದಿಯಲ್ಲಿ ಖ್ಯಾತ ಸಂಸ್ಥೆ UFO ವಿತರಣೆ ಮಾಡಲಿದೆ.
ಯುಎಫ್‌ಒ ಸಂಸ್ಥೆ, ಎಲೆಕ್ಟ್ರಾನಿಕ್ ತಂತ್ರಜ್ಞಾನ ಬಳಸಿ ಸಿನಿಮಾ ವಿತರಣೆ ಮಾಡುವ ದೇಶದ ಪ್ರಮುಖ ಸಂಸ್ಥೆ. ಅನೇಕ ಸಿಂಗಲ್ ಸ್ಕ್ರೀನ್‌ಗಳಿಗೂ ಮರುಜೀವ ನೀಡಿದ, ಪೈರಸಿಗೆ ಸಾಕಷ್ಟು ಕಡಿವಾಣ ಹಾಕಿದ ಯುಎಫ್‌ಒ ಉತ್ತರ ಭಾರತದಲ್ಲಿ ಉತ್ತಮ ವಿತರಣಾ ಜಾಲ ಹೊಂದಿದೆ. ಯಾವುದೇ ಸಿನಿಮಾ ಸಕ್ಸೆಸ್ ಆಗಬೇಕೆಂದರೆ ಉತ್ತಮ ವಿತರಕರು ದೊರಕಬೇಕು. ಈಗಾಗಲೆ 22ಭಾಷೆಗಳ 11 ಸಾವಿರಕ್ಕೂ ಹೆಚ್ಚು ಸಿನಿಮಾಗಳನ್ನು ಬಿಡುಗಡೆ ಮಾಡಿರುವ ಯುಎಫ್‌ಒ ಇದೀಗ ಚಾರ್ಲಿ ವಿತರಣೆ ಹೊಣೆ ಹೊತ್ತಿದೆ.
ಶ್ವಾನ ಪ್ರೇಮಿಗಳು ಕಾತುರತೆಯಿಂದ ಕಾಯುತ್ತಿರುವ ಈ ಸಿನಿಮಾ ನಾಯಕನಾಗಿ ರಕ್ಷಿತ್ ಶೆಟ್ಟಿ ನಟಿಸಿದರೆ, ರಾಜ್ ಬಿ ಶೆಟ್ಟಿ, ದಾನಿಶ್ ಸೇಠ್, ಸಂಗೀತಾ ಶೃಂಗೇರಿ, ತಮಿಳಿನ ಬಾಬಿ ಸಿಂಹ ನಟಿಸಿದ್ದಾರೆ. ಕಿರಣ್ ರಾಜ್ ಈ ಚಿತ್ರದ ನಿರ್ದೇಶಕರಾಗಿದ್ದು, ರಕ್ಷಿತ್ ಶೆಟ್ಟಿ ತಮ್ಮ ಹೋಮ್ ಬ್ಯಾನರ್ ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ಚಿತ್ರ ನಿರ್ದೇಶಿಸಿದ್ದಾರೆ. ನೋಬಿನ್ ಪೌಲ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ಪ್ರತೀಕ್ ಶೆಟ್ಟಿ ಸಂಕಲನ, ಪ್ರಗತಿ ರಿಷಬ್ ಶೆಟ್ಟಿ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ. ಚಿತ್ರದ ಹಿಂದಿ ಅವತರಣಿಕೆಗೆ ಸಂಜಯ್ ಉಪಾಧ್ಯ ಸಂಭಾಷಣೆ ನೀಡಿದ್ದು, ಹಾಡುಗಳಿಗೆ ಹಿಂದಿಯಲ್ಲಿ ಶೈನಿ ದಾಸ್, ಕಾರ್ತಿಕಾ ನೈನನ್ ದುಬೆ, ಮಾನ್ಸಾ ಪಾಂಡೆ, ಅಲೆಕ್ಸ್ ಡಿಸೋಜಾ, ಸಾಯೇಶ್ ಪೈ ಪನಂಡಿಕರ್ ಸಾಹಿತ್ಯ ನೀಡಿದ್ದಾರೆ.
ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರೂ.21 ಕೋಟಿಗೆ ಕಲರ್ಸ್ ಕನ್ನಡಕ್ಕೆ ಸೇಲ್ ಆಗಿರೋದು ಇನ್ನೂ ವಿಶೇಷ. ಏನೇ ಆಗಲಿ ಇದೇ ಜೂನ್ 10 ರಂದು ಚಾರ್ಲಿ ರಿಲೀಸ್ ಆಗ್ತಾ ಇದ್ದು. ಒಂದೆ ದಿನದಲ್ಲಿ ಪಂಚಭಾಷೆಗಳಲ್ಲಿ ತೆರೆ ಕಾಣುತ್ತಿರುವು ಅಭಿಮಾನಿಗಳಿಗೆ ಖುಷಿ ತರ್ತಾ ಇದ್ದು ಹೇಗೆ ರಂಜಿಸಲಿದೆ ಅನ್ನೋದು ಕಾದು ನೋಡಬೇಕಿದೆ.
ಇದನ್ನೂ ಓದಿ | ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..!