Site icon Vistara News

Bus Charge increase : ಹಬ್ಬದ ಹೆಸರಲ್ಲಿ ಲೂಟಿ ಮಾಡುವ Travel Appಗಳ ವಿರುದ್ಧ ಹಿಂದು ಸಂಘಟನೆ ಆಕ್ರೋಶ

Bus Charge Increase

ಬೆಂಗಳೂರು: ಹಿಂದೂ ಹಬ್ಬಗಳ (Hindu Festivals) ಸಂದರ್ಭದಲ್ಲಿ ಬಸ್‌ ಪ್ರಯಾಣ ದರವನ್ನು (Bus charge Increase) ವಿಪರೀತ ಹೆಚ್ಚಿಸುವ ಟ್ರಾವೆಲ್‌ ಆ್ಯಪ್‌ಗಳ (Travel Apps) ವಿರುದ್ಧ ಹಿಂದೂ ಜನಜಾಗೃತಿ ಸಮಿತಿ (Hindu Jana Jagruti Samithi) ಆಕ್ರೋಶ ವ್ಯಕ್ತಪಡಿಸಿದೆ.

‘ಮೇಕ್ ಮೈ ಟ್ರಿಪ್’, ‘ರೆಡ್ ಬಸ್’, ‘ಗೋಯಿಬಿಬೋ’, ‘ಸವಾರಿ’, ‘ಇನ್ ಡ್ರೈವ್’, ‘ರ‍್ಯಾಪಿಡೊ’, ‘ಕ್ವಿಕ್ ರೈಡ್’, ನಂತಹ 18 ಖಾಸಗಿ ಪ್ರವಾಸಿ ಆ್ಯಪ್‌ಗಳು ಕೇಂದ್ರ ಸರಕಾರದ ಅನುಮತಿ ಪಡೆಯದೆ ಅಗ್ರಿಗೇಟರ್‌ನ ವ್ಯವಹಾರ ನಡೆಸುತ್ತಿವೆ. ಅವುಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ದ ವತಿಯಿಂದ ಮಾನ್ಯ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ (RamaLinga Reddy) ಅವರಿಗೆ ಮನವಿ ನೀಡಲಾಯಿತು.

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ, ಶಿವರಾಮ್, ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿಗಳಾದ ಡಾ. ಬಿ.ಎನ್. ಮಹೇಶ್ ಕುಮಾರ, ಕಾರ್ಮಿಕ ಪ್ರತಿಷ್ಠಾನದ ಮಲ್ಲಿಕಾರ್ಜುನ್, ನ್ಯಾಯವಾದಿ ಶಕುಂತಲಾ ಶೆಟ್ಟಿ, ಯುವ ಮುಖಂಡ ವಿನಯ್ ಹಾಗೂ ರಘುನಾಥ್ ನಾವಡ ಮತ್ತಿತರರು ಉಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಮೋಹನ್ ಗೌಡ, ಸಮಿತಿಯ ಸುರಾಜ್ಯ ಅಭಿಯಾನದ ವತಿಯಿಂದ ಈಗಾಗಲೇ ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಬೆಂಬತ್ತುವಿಕೆ ಮಾಡಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವ ಈ ಟ್ರಾವೆಲ್ ಆ್ಯಪ್‌ಗಳು ಮತ್ತು ಟ್ರಾವೆಲ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನೇಕ ಆಂದೋಲನಗಳು ನಡೆಸಿದ್ದೇವೆ. ಅದರ ಫಲವಾಗಿ ಅಲ್ಲಿನ ಸರಕಾರ ಕೇವಲ ಅಪ್ಲಿಕೇಶನ್ ಅನ್ನು ಮುಚ್ಚುವ ಅಧಿಸೂಚನೆಯನ್ನು ನೀಡಲಾಗಿದೆ. ಕೋಟಿಗಟ್ಟಲೆ ಪ್ರಯಾಣಿಕರನ್ನು ಲೂಟಿ ಮಾಡುತ್ತಿರುವ ಈ ಅಕ್ರಮ ಅಗ್ರಿಗೇಟರ್ ಆ್ಯಪ್ ವಿರುದ್ಧ ಈ ಕ್ರಮ ಸಾಕಾಗುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ ; Kashmir Travel: ಕಾಶ್ಮೀರದಲ್ಲಿ ಈ ಬಾರಿ ಹಿಮವೇ ಇಲ್ಲ! ಜನವರಿಯಲ್ಲೂ ಒಣಕಲಾದ ʻಭೂಮಿ ಮೇಲಿನ ಸ್ವರ್ಗʼ!

ಟ್ರಾವೆಲ್‌ ಆ್ಯಪ್‌ಗಳ ವಿರುದ್ಧ ಏನು ಮಾಡಬೇಕು? ಹಿಂದೂ ಜನಜಾಗೃತಿ ಸಮಿತಿ ಸಲಹೆ

  1. ರಾಜ್ಯದಲ್ಲಿ ಈ ಕಂಪನಿಗಳ ಭಾರಿ ಲೂಟಿಯ ಬಗ್ಗೆ ವಿಶೇಷ ಲೆಕ್ಕಪರಿಶೋಧನೆ ನಡೆಸಿ, ಈ ಕಂಪನಿಗಳಿಗೆ ಭಾರೀ ಆರ್ಥಿಕ ದಂಡ ವಿಧಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
  2. ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 93(1)ರ ನಿಬಂಧನೆಗಳ ಪ್ರಕಾರ, ಆಪ್ ಮತ್ತು ವೆಬ್‌ಸೈಟ್‌ಗಳ ಮೂಲಕ ಪ್ರಯಾಣಿಕರ ಸಾರಿಗೆ ವ್ಯವಹಾರವನ್ನು ನಡೆಸಲು ಕೇಂದ್ರ ಸರಕಾರದ ಮಾರ್ಗಸೂಚಿಗಳಿಗೆ ಒಳಪಟ್ಟಿರುವ ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಅಗತ್ಯವಿದೆ; ಆದರೆ, ಈ ರೀತಿ ಮಾಡದೆ ವರ್ಷಗಳೇ ಅಕ್ರಮ ವ್ಯವಸಾಯ ನಡೆಯುತ್ತಿದೆ.
  3. ಮೂಲತಃ, ಈ ಅಗ್ರಿಗೇಟರ್ ಅಪ್ಲಿಕೇಶನ್‌ಗಳು ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ವಂಚನೆ ಮಾಡಿವೆ. ಹೀಗಾಗಿ ದೇಶಾದ್ಯಂತ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ.
  4. ಇದುವರೆಗೆ ಅಕ್ರಮವಾಗಿ ಎಷ್ಟು ರೂಪಾಯಿ ಸಂಗ್ರಹಿಸಿದೆ ? ಇದರಲ್ಲಿ ಬೇರೆ ಯಾರು ಭಾಗಿಯಾಗಿದ್ದಾರೆ ? ಇದು ’ಮಹದೇವ್ ಬೆಟ್ಟಿಂಗ್ ಆಪ್’ ನಂತಹ ದೊಡ್ಡ ಹಗರಣವೇ?
  5. ಈ ಪ್ರಕರಣವನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಿಂದ (ಈಡಿಯಿಂದ) ಆಳವಾಗಿ ತನಿಖೆ ನಡೆಸುವಂತೆ ಆಗ್ರಹಿಸಿದ್ದು, ಈ ಬಗ್ಗೆ ಮಾನ್ಯ ಗೃಹಸಚಿವ ಹಾಗೂ ಮುಖ್ಯಮಂತ್ರಿ ಸಹಿತ ಪ್ರಧಾನಿ ಹಾಗೂ ಕೇಂದ್ರ ಪ್ರವಾಸೋದ್ಯಮ ಸಚಿವರ ಬಳಿಯೂ ಮತ್ತೊಮ್ಮೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
Exit mobile version