ಬೆಂಗಳೂರು : ಹನಿಟ್ರ್ಯಾಪ್ ತಂತ್ರ ಬಳಸಿ ಕಲಬುರಗಿ ಡಾಕ್ಟರ್ ಒಬ್ಬರ ಬಳಿ ಒಂದೂವರೆ ಕೋಟಿ ರೂ. ಹಣ ಪಡೆಯುವುದಕ್ಕೆ ಮುಂದಾಗಿದ್ದ ತಂಡವೊಂದ್ದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ರೂಂ ಒಳಗೆ ಏಕಾಂತದಲ್ಲಿದ್ದ ಡಾಕ್ಟರ್ ಬಳಿಗೆ ಯುವತಿಯನ್ನು ಬಿಟ್ಟು ಬಸವರಾಜ್ ಎಂಬ ವ್ಯಕ್ತಿಯ ನೇತೃತ್ವದ ತಂಡ ಬಲೆ ಬೀಸಿದೆ. ಡಾಕ್ಟ್‌ರ್‌ನನ್ನು ಲಾಕ್ ಮಾಡಿದ ನಂತರ ನಾವು ಪೊಲೀಸರು ಹೆಚ್ಚಿಗೆ ಮಾತನಾಡಿದ್ದರೆ ಒದ್ದು ಒಳಗೆ ಹಾಕುತ್ತೇವೆ. ಠಾಣೆ ಸಹವಾಸ ಬೇಡ ಅಂದರೆ ಒಂದುವರೆ ಕೋಟಿ ಹಣ ನೀಡಬೇಕು ಎಂದು ಬೆದರಿಕೆ ಒಡ್ಡಿದ್ದಾರೆ. ಇದರಿಂದ ಹೆದರಿದ ಡಾಕ್ಟರ್ ಒಂದು ಕೋಟಿ ರೂ.ವರೆಗೂ ಹಣವನ್ನು ಬಸವರಾಜನ ಟೀಂಗೆ ನೀಡಿದ್ದಾರೆ.
ಇದನ್ನು ಓದಿ | Drug peddlers | ಎರಡು ಪ್ರಕರಣದಲ್ಲಿ ನಾಲ್ವರ ಬಂಧನ
ಹಣ ಕೊಟ್ಟಷ್ಟು ಟೀಂ ಡಿಮ್ಯಾಂಡ್ ಮಾಡುತ್ತಾ ಹೋದಂತೆ ಡಾಕ್ಟ್‌ರ್ ಸಿಸಿಬಿ ಮೊರೆಹೋಗಿದ್ದಾರೆ. ಇದೀಗ ಬಸವರಾಜ ಸೇರಿ ಮೂವರನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | ಜ್ಞಾನವಾಪಿ ಮಸೀದಿ ಕೇಸ್; ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದ ಪ್ರೊಫೆಸರ್ ಬಂಧನ