Site icon Vistara News

Hotels in Bangalore : ಇನ್ನು ಮುಂದೆ ಬೆಂಗಳೂರಿನಲ್ಲಿ ಹೋಟೆಲ್‌ಗಳು 24X7 ಓಪನ್‌

Hotels in Bangalore

ಬೆಂಗಳೂರು: ಬೆಂಗಳೂರಿನಲ್ಲಿ ಸದ್ಯವೇ ಹೋಟೆಲ್‌ಗಳನ್ನು (Hotels in Bangalore) ದಿನದ 24 ಗಂಟೆಯೂ ತೆರೆಯಲು (24X7 Hotel Open) ಅನುಮತಿ ಸಿಗಲಿದೆ. ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Dr. G Parameshwar) ಅವರು ಈ ಬಗ್ಗೆ ಭರವಸೆ ನೀಡಿದ್ದಾರೆ. ಕೆಲವೊಂದು ಮಾರ್ಗಸೂಚಿಗಳ ಮೂಲಕ ಅನುಮತಿ ನೀಡುವ ಸಾಧ್ಯತೆಗಳಿವೆ.

ಹೋಟೆಲ್ ಗಳನ್ನು ದಿನದ 24 ಗಂಟೆಗಳ ಕಾಲ ತೆರೆಯಲು ಅನುಮತಿ ಕೊಡುವಂತೆ ಹೋಟೆಲ್ ಅಸೋಸಿಯೇಷನ್ (Hotel Association) ಹಲವು ಕಾಲದಿಂದ ಸರ್ಕಾರದ ಮುಂದೆ ಬೇಡಿಕೆ ಇಡುತ್ತಿದೆ. ಹಿಂದಿನ ಸರ್ಕಾರಗಳು ಇದಕ್ಕೆ ಸ್ಪಂದಿಸಿರಲಿಲ್ಲ. ಆದರೆ, ಈಗಿನ ಸರ್ಕಾರ ಈ ಬಗ್ಗೆ ಗಮನ ಹರಿಸಲು ಮುಂದಾಗಿದೆ.

ರಾತ್ರಿ ಇಡೀ ಹೋಟೆಲ್‌ ಓಪನ್‌ ಯಾಕಿರಬೇಕು?

ಬೆಂಗಳೂರು ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಿದೆ. ಹಗಲು ರಾತ್ರಿಗಳ ವ್ಯತ್ಯಾಸ ಇಲ್ಲದೆ ವೃತ್ತಿಗಳು ನಡೆಯುತ್ತಿವೆ. ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಪಾಳಿಗಳಲ್ಲಿ ಸಾಕಷ್ಟು ಜನರು ಕೆಲಸ ಮಾಡುತ್ತಿದ್ದಾರೆ. ಈಗ ಹೋಟೆಲ್‌ಗಳು ರಾತ್ರಿ 9ರಿಂದ 10 ಗಂಟೆ‌ ಹೊತ್ತಿಗೆ ಮುಚ್ಚುತ್ತಿವೆ. ಹೀಗಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಊಟ ಸಿಗುತ್ತಿಲ್ಲ. ರಾತ್ರಿ ಊಟ ತಿಂಡಿ ಸರಿಯಾಗಿ ಸಿಗದೆ ಪರದಾಡುತ್ತಿರುವವರನ್ನು ಗಮನಿಸಿ ಹೋಟೆಲ್ ಅಸೋಸಿಯೇಷನ್ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಕೇರಳದಲ್ಲಿ ಈಗಾಗಲೇ 24*7 ಹೋಟೆಲ್‌ ವ್ಯವಸ್ಥೆ

ಕೇರಳದಲ್ಲಿ ಈಗ ಇಡೀ ದಿನ ಮತ್ತು ರಾತ್ರಿ ಹೋಟೆಲ್‌ಗಳನ್ನು ತೆರೆಯಲು ಅವಕಾಶವಿದೆ. ದಿನವಿಡೀ ಹೋಟೆಲ್‌ ತೆರೆದಿಡುವುದರಿಂದ ಹಲವರಿಗೆ ಉದ್ಯೋಗ ಸಿಗಲಿದೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಹುಡುಗರೂ ಸಿಗುತ್ತಾರೆ. ಎಂಬ ಕಾರಣಕ್ಕಾಗಿ ಹೋಟೆಲ್‌ಗಳನ್ನು ತೆರೆಯಲು ಕರ್ನಾಟಕದಲ್ಲೂ ಅನುಮತಿ ಕೇಳಲಾಗಿತ್ತು.

ಇದನ್ನೂ ಓದಿ : Kidwai Hospital : ಕಿದ್ವಾಯಿ ಆಸ್ಪತ್ರೆ ಅವ್ಯವಹಾರ; ನಿರ್ದೇಶಕ ಸ್ಥಾನದಿಂದ ಡಾ. ಲೋಕೇಶ್‌ ವಜಾ

ರಾತ್ರಿ ಇಡೀ ಹೋಟೆಲ್‌ ತೆರೆದರೆ ಮಾರ್ಗಸೂಚಿ ಕೂಡಾ ಇರಲಿದೆ

ಒಂದು ವೇಳೆ ರಾಜ್ಯ ಸರ್ಕಾರ ಸದ್ಯವೇ ರಾತ್ರಿಯೂ ಹೋಟೆಲ್‌ ತೆರೆಯಲು ಅನುಮತಿ ನೀಡಿದರೆ ಕೆಲವೊಂದು ಮಾರ್ಗ ಸೂಚಿಗಳನ್ನು ಕೂಡಾ ಹೊರಡಿಸುವ ಸಾಧ್ಯತೆಗಳು ಇವೆ. ರಾಜ್ಯದಲ್ಲಿ 10ಕ್ಕಿಂತ ಹೆಚ್ಚು ನೌಕರರು ಇರಬೇಕು. ವಾಚ್ ಮ್ಯಾನ್ ಇರಬೇಕು, ಸಿಸಿ ಟಿವಿ ಕ್ಯಾಮೆರಾಗಳು ಇರಬೇಕು, ರಕ್ಷಣಾ ವ್ಯವಸ್ಥೆ ಇರಬೇಕು ಎಂಬ ನಿಯಮಗಳು ಜಾರಿಗೆ ಬರುವ ಸಾಧ್ಯತೆಗಳಿವೆ.

Exit mobile version