ಬೆಂಗಳೂರು: ಆಗಾಗ್ಗೆ ಮನೆಗಳ್ಳತನ ಮಾಡಿ ಪೊಲೀಸರಿಗೆ ತಲೆನೋವಾಗಿದ್ದ ಆಸಾಮಿಯೊಬ್ಬ, ಮುಸುಕಿನ ಜೋಳದ ವ್ಯಾಪಾರದ ಸೋಗಿನಲ್ಲಿ ಅಲೆದು ಸಿಕ್ಕಿಬಿದ್ದಿದ್ದಾನೆ. ಮಂಜುನಾಥ್ ಅಲಿಯಾಸ್ ಮೂರ್ತಿ (House thief) ಎಂಬಾತನೇ ಈ ವ್ಯಕ್ತಿ.
ಈತ ಮನೆಗಳ್ಳತನ ಮಾಡುತ್ತಾ ಮೂರು ತಿಂಗಳಿಗೊಮ್ಮೆ ಪರಪ್ಪನ ಅಗ್ರಹಾರ ಜೈಲು ಪಾಲಾಗುತ್ತಿದ್ದ. ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ. ಆತ ಮೊಬೈಲ್ ಬಳಸುತ್ತಿರಲಿಲ್ಲ. ಓಡಾಡೋದಕ್ಕೆ ಬೈಕು ಬಳಸುತ್ತಿರಲಿಲ್ಲ.
ಆದರೆ ಮುಸುಕಿನಜೋಳದ ವ್ಯಾಪಾರದ ನೆಪದಲ್ಲಿ ಅಲೆದಾಡುತ್ತಿದ್ದ. ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಜಾಡು ಹಿಡಿದ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಸರಿಸುಮಾರು 50 ಸಿಸಿಟಿವಿ ದೃಶ್ಯಾವಳಿಗಳನ್ನ ಜಾಲಾಡಿ ಗುರುತಿಸಿದ್ದರು.
ನೋಡುಗರ ದೃಷ್ಟಿಯಲ್ಲಿ ಮುಸುಕಿನ ಜೋಳ ವ್ಯಾಪಾರ ಮಾಡುತ್ತಿದ್ದ. ಆದರೆ ಮನೆಗಳ್ಳತನ ಮಾಡುತ್ತಿದ್ದ. ವಾಕಿಂಗ್ ವೇಳೆಯೇ ಮನೆಗಳನ್ನ ಹುಡುಕಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ. ಬಳಿಕ ಕದ್ದ ಮಾಲ್ ನೊಂದಿಗೆ ಯಾರಿಗೂ ಅನುಮಾನ ಬರದಂತೆ ಹೊರ ಹೋಗುತ್ತಿದ್ದ. ಸಿಸಿ ಟಿವಿ ಪರಿಶೀಲನೆ ವೇಳೆ ಆರೋಪಿಯ ಚಹರೆ ಪತ್ತೆಯಾಗಿತ್ತು.
ಶ್ರೀರಾಮಪುರದಲ್ಲಿ ಅನುಮಾನ ಬರದಂತೆ ತಿರುಗಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಯಿತು. ಬಂಧಿತನಿಂದ 6. 50 ಲಕ್ಷ ರೂ. ಮೌಲ್ಯದ 131 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.