Site icon Vistara News

ಬೆಂಗಳೂರಿನಲ್ಲಿ ನಡೆಯುವ ಭಾರತ-ಆಸೀಸ್​ ಟಿ20 ಪಂದ್ಯದ ಟಿಕೆಟ್‌ ಸೇಲ್ ದಿನಾಂಕ ಪ್ರಕಟ

Australia vs India T20 series

ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯಾ(Australia tour of India, 2023) ಮತ್ತು ಭಾರತ ನಡುವೆ ಸಾಗುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. ಇನ್ನು 4 ಪಂದ್ಯಗಳು ಬಾಕಿ ಉಳಿದಿವೆ. ಸರಣಿಯ ಅಂತಿಮ ಪಂದ್ಯ ಡಿ.3ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್​ ಮಾರಾಟದ ದಿನಾಂಕ ಪ್ರಕಟಗೊಂಡಿದೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯದ ಟಿಕೆಟ್‌ ಮಾರಾಟ ಆನ್‌ಲೈನ್‌ನಲ್ಲಿ ನವೆಂಬರ್​ 25ರಿಂದ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ತಿಳಿಸಿದೆ. ಆನ್‌ಲೈನ್‌ನಲ್ಲಿ ಖರೀದಿಸಿದ ಟಿಕೆಟ್‌ನ ಪ್ರತಿಗಳನ್ನು ನವೆಂಬರ್​ 30, ಡಿಸೆಂಬರ್​ 1 ಹಾಗೂ ಡಿಸೆಂಬರ್​ 2ರಂದು ಕ್ರೀಡಾಂಗಣದ ಬಳಿ ಇರುವ ಕೌಂಟರ್‌ಗಳಲ್ಲಿ ಪಡೆಯಬಹುದು ಎಂದು ಕೆಎಸ್‌ಸಿಎ ಮಾಹಿತಿ ನೀಡಿದೆ. ಕೌಂಟರ್​ ಟಿಕೆಟ್​ಗಳು ಪಂದ್ಯದ ಒಂದು ದಿನ ಮುಂಚಿತವಾಗಿ ಅಥವಾ ಪಂದ್ಯ ನಡೆಯುವ ದಿನಂದೇ ನೀಡುವ ಸಾಧ್ಯತೆ ಇದೆ. ಇದರ ಬಗ್ಗೆ ಕೆಎಸ್‌ಸಿಎ ಯಾವುದೇ ಮಾಹಿತಿ ನೀಡಿಲ್ಲ. ಸದ್ಯ ಆನ್‌ಲೈನ್‌ ಟಿಕೆಟ್​ ಖರೀದಿ ಬಗ್ಗೆ ಮಾತ್ರ ಮಾಹಿತಿ ನೀಡಿದೆ.

ಇದನ್ನೂ ಓದಿ IND vs AUS: ಭಾರತ ತಂಡ ಗೆದ್ದದ್ದು ರಿಂಕು ಬಾರಿಸಿದ ಸಿಕ್ಸರ್​ನಿಂದಲ್ಲ; ಮತ್ತೆ ಹೇಗೆ?

ಪೂರ್ವ ನಿಗದಿಯ ವೇಳಾಪಟ್ಟಿ ಪ್ರಕಾರ 5ನೇ ಟಿ20 ಪಂದ್ಯ ಹೈದರಾಬಾದ್​ನಲ್ಲಿ ನಿಗದಿಯಾಗಿತ್ತು. ಆದರೆ ಇಲ್ಲಿ ವಿಧಾನಸಭೆ ಚುನಾವಣೆ ಇರುವ ನಿಟ್ಟಿನಲ್ಲಿ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಹೀಗಾಗಿ ಪಂದ್ಯದ ಆತಿಥ್ಯ ಸಿಕ್ಕಿತು.

ಭಾರತದ ಉಳಿದಿರುವ 4 ಟಿ20 ಪಂದ್ಯಗಳ ವೇಳಾಪಟ್ಟಿ

ದ್ವಿತೀಯ ಟಿ20 ಪಂದ್ಯ. ನ.26, ತಿರುವನಂತಪುರಂ. ಆರಂಭ, ಸಂಜೆ 7 ಗಂಟೆ.

ಮೂರನೇ ಟಿ20, ನ.28,ಗುವಾಹಟಿ. ಆರಂಭ, ಸಂಜೆ 7 ಗಂಟೆ.

ನಾಲ್ಕನೇ ಟಿ20, ಡಿ.1, ರಾಯ್​ಪುರ್​. ಆರಂಭ, ಸಂಜೆ 7 ಗಂಟೆ.

ಐದನೇ ಟಿ20, ಡಿ.3, ಬೆಂಗಳೂರು​. ಆರಂಭ, ಸಂಜೆ 7 ಗಂಟೆ.

ಇದನ್ನೂ ಓದಿ ಟೀಮ್​ ಇಂಡಿಯಾದ ಬಗ್ಗೆ ವ್ಯಂಗ್ಯವಾಡಿದ ಪಾಕ್​ ಮಾಜಿ ಕ್ರಿಕೆಟಿಗ ಅಬ್ದುಲ್‌ ರಜಾಕ್‌

ಮೊದಲ ಪಂದ್ಯ ಗೆದ್ದ ಭಾರತ

ಸರಣಿಯ ಮೊದಲ ಪಂದ್ಯ ಗುರುವಾರ ರಾತ್ರಿ ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ 2 ವಿಕೆಟ್​ಗಳ ಅಂತರದ ರೋಚಕ ಗೆಲುವು ಸಾಧಿಸಿತು. ಈ ಮೂಲಕ 1-0 ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆಸ್ಟ್ರೇಲಿಯಾ ಜೋಶ್​ ಇಂಗ್ಲಿಸ್(110)​ ಅವರ ಆಕರ್ಷಕ ಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ ​ ಮೂರು ವಿಕೆಟ್​ ಕಳೆದುಕೊಂಡು 208 ರನ್​ ಗಳಿಸಿತು. ಬೃಹತ್​ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿಕೊಂಡು ಹೋದ ಭಾರತಕ್ಕೆ ಅಂತಿಮ ಓವರ್​ನಲ್ಲಿ ಗೆಲುವಿಗೆ 7 ರನ್​ ಬೇಕಿತ್ತು. ಈ ವೇಳೆ ನಾಟಕೀಯ ಕುಸಿತ ಕಂಡ ಭಾರತ ಸತತವಾಗಿ ಮೂರು ವಿಕಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ಆತ್ಮವಿಶ್ವಾಸ ಕಳೆದುಕೊಳ್ಳದ ರಿಂಕು ಸಿಂಗ್​ ಸಿಕ್ಸರ್​ ಬಾರಿಸಿ ವಿಜಯ ಪತಾಕೆ ಹಾರಿಸಿದರು. ಅಚ್ಚರಿ ಎಂದರೆ ಇದು ನೋಬಾಲ್​ ಕೂಡ ಆಗಿತ್ತು. ವಿಕೆಟ್​ ಪತನಗೊಂಡರೂ ಭಾರತ ಗೆಲುವು ಸಾಧಿಸುತ್ತಿತ್ತು. ನೋ ಬಾಲ್​ ಆದ ಕಾರಣ ಸಿಕ್ಸರ್​ನ ಮೊತ್ತ ಪರಿಗಣನೆಗೆ ಬರಲಿಲ್ಲ.

Exit mobile version