ಬೆಂಗಳೂರು: ವಿಶ್ವದ ನರ್ಸಿಂಗ್ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಸಾಧನೆಗಾಗಿ ಮೀಸಲಾಗಿರುವ ಪ್ರತಿಷ್ಠಿತ ಶ್ರೀ ನಗರೀಂದ್ರ ನಾಮಾಂಕಿತ ಗ್ಲೋಬಲ್ ಪುರಸ್ಕಾರಕ್ಕೆ ಚಿತ್ರದುರ್ಗ ಮೂಲದ ಡಾ. ದಿಲೀಪ್ ಕುಮಾರ್ ತಿಮ್ಮಪ್ಪ ಭಾಜನರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ತುಮ್ಮಿ ಗ್ರಾಮದವರಾದ ಡಾ.ದಿಲೀಪ್ ಕುಮಾರ್ ಕಳೆದ ನಾಲ್ಕು ದಶಕಗಳಿಂದ ನರ್ಸಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಡಿಯನ್ ನರ್ಸಿಂಗ್ ಕೌನ್ಸಿಲ್‌ನ ಅಧ್ಯಕ್ಷರಾಗಿ ಡಾ. ದಿಲೀಪ್ ಕುಮಾರ್ ಭಾರತದ ನರ್ಸಿಂಗ್ ವ್ಯವಸ್ಥೆಗೆ ಹೊಸ ಆಯಾಮವನ್ನು ಮೂಡಿಸಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ತಂದುಕೊಟ್ಟಿದ್ದಾರೆ.
ಇವರಿಗೆ ಥಾಯ್ಲೆಂಡಿನ ಅರಮನೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಣಿ ಮಹಾಸ್ಚತ್ರಿ ಸಿರಿಡೋನ್ ಅಕ್ಟೋಬರ್ 16ರಂದು ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಶಸ್ತಿಯು 22 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ಎನ್‌ಸಿಸಿ ಸಹ ಅಧಿಕಾರಿಗಳಿಗೆ ಪದೋನ್ನತಿ; ಮುತುವರ್ಜಿಯಿಂದ ಕೆಲಸ ಮಾಡಲು ಗ್ರೂಪ್ ಕ್ಯಾಪ್ಟನ್ ರಾಜೇಶ್ ಚಂದ್ರ ಕರೆ
ಬೆಂಗಳೂರು: ಇತ್ತೀಚೆಗೆ ಕಮ್ಯಾಂಡಿಂಗ್ ಅಧಿಕಾರಿಯಾಗಿ ಗ್ರೂಪ್ ಕ್ಯಾಪ್ಟನ್ ರಾಜೇಶ್ ಚಂದ್ರ ಯುನಿಟ್‌ನ ಅಧಿಕಾರ ವಹಿಸಿಕೊಂಡಿದ್ದಾರೆ. ಇವರ ನೇತೃತ್ವದಲ್ಲಿ ಪಂಜಾಬ್‌ನ ಎನ್‌ಸಿಸಿ ಅಕಾಡೆಮಿಯಲ್ಲಿ ತರಬೇತಿ ಪಡೆದ ಸೆಕಂಡ್ ಆಫೀಸರ್ ನಜೀರ್ ಅಹಮದ್, ಸೆಕಂಡ್ ಆಫೀಸರ್ ಬಾಲಕೃಷ್ಣ ವಿ.ಎಚ್ ಹಾಗೂ ಚೆನ್ನೈನ ತಾಂಬರಮ್ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಇತ್ತೀಚೆಗೆ ತರಬೇತಿ ಪಡೆದು ಬಂದ ಸೆಕಂಡ್ ಆಫೀಸರ್ ಮೀನಾಕ್ಷಿ ಹಾಗೂ ಧರ್ಮೇಂದ್ರ ಕುಮಾರ್ ಭಗತ್, ಕೀರ್ತಿಕುಮಾರ್, ಆದರ್ಶ್ ಹಾಗೂ ಆನಂದ್‌ರವರಿಗೆ ಪದೋನ್ನತಿಯನ್ನು (NCC Promotion) ನೀಡಲಾಗಿದೆ.
ಯುನಿಟ್‌ನ ಅಧಿಕಾರಿಯಾಗಿ ನಿಯೋಜನೆಗೊಂಡ ಗ್ರೂಪ್ ಕ್ಯಾಪ್ಟನ್ ರಾಜೇಶ್ ಚಂದ್ರ ಅವರು ಯುನಿಟ್‌ನ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಸಲಿದ್ದೇವೆ ಎಂದರು. ಎಲ್ಲಾ ಎನ್‌ಸಿಸಿ ಸಹ ಅಧಿಕಾರಿಗಳನ್ನು ಕುರಿತು ಮಾತನಾಡಿದ ಅವರು ತಮ್ಮ ತಮ್ಮ ವಿದ್ಯಾ ಸಂಸ್ಥೆಗಳಲ್ಲಿ ಎನ್‌ಸಿಸಿ ಚಟುವಟಿಕೆಗಳನ್ನು ಅತ್ಯಂತ ಮುತುವರ್ಜಿಯಿಂದ ಮಾಡುವಂತೆ ಕರೆ ನೀಡಿದರು.
ಎನ್‌ಸಿಸಿ ಕೆಡೆಟ್‌ಗಳಲ್ಲಿ ಶಿಸ್ತು, ಸಂಯಮ, ದೇಶ ಭಕ್ತಿಯನ್ನು ಮೂಡಿಸುವುದರೊಂದಿಗೆ ಡಿಫೆನ್ಸ್‌ನ ಭಾಗವಾಗುವಂತೆ ಉತ್ತೇಜಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಉರಿದುಂಬಿಸಿದರು. ಕಾರ್ಯಕ್ರಮದಲ್ಲಿ ಯುನಿಟ್‌ನ ಅಡ್ಜಟೆಂಟ್ ಜೂನಿಯರ್ ವಾರೆಂಟ್ ಆಫೀಸರ್ ಮೊಹಂತಿ ಹಾಗೂ ಇತರ ಸಿಬ್ಬಂದಿ ವರ್ಗ ಹಾಜರಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ