Site icon Vistara News

B. C. Nagesh | ರಾಷ್ಟ್ರಧ್ವಜಕ್ಕೆ ಅವಮಾನ: ಶಿಕ್ಷಣ ಸಚಿವರ ವಜಾಗೆ ಕಾಂಗ್ರೆಸ್ ಆಗ್ರಹ

Karnataka Congress

ಬೆಂಗಳೂರು : ಕೇಸರಿ ಧ್ವಜದ ಮುಂದೆ ರಾಷ್ಟ್ರಧ್ವಜದ ಘನತೆ ಕುಗ್ಗಿಸಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (B. C. Nagesh) ಅವರನ್ನು ವಜಾಗೊಳಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಈಶ್ವರಪ್ಪ ಭಗವಾಧ್ವಜವನ್ನು ರಾಷ್ಟ್ರಧ್ವಜ ಮಾಡುತ್ತೇವೆ ಎಂದಿದ್ದರು. ಈಗ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಕೇಸರಿ ಧ್ವಜದ ಮುಂದೆ ರಾಷ್ಟ್ರಧ್ವಜದ ಗೌರವವನ್ನು ತಗ್ಗಿಸಿದ್ದಾರೆ ಎಂದು ಆಪಾದಿಸಿದೆ.

ಇದನ್ನೂ ಓದಿ | ಅವಿವೇಕಿ ಶಿಕ್ಷಣ ಸಚಿವ ರಾಜೀನಾಮೆ ನೀಡಲಿ: ಬಿ.ಸಿ. ನಾಗೇಶ್‌ ವಿರುದ್ಧ ಸಿದ್ದರಾಮಯ್ಯ ಆಕ್ರೊಶ

ಬಿಜೆಪಿಯವರೇ, ಇದು ಭಗವಾಧ್ವಜವನ್ನು ರಾಷ್ಟ್ರಧ್ವಜವನ್ನಾಗಿಸುವ ಪ್ರಯತ್ನದ ಮುನ್ಸೂಚನೆಯೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿರಂಗಾದ ಮೇಲೆ ಗೌರವ ಇದ್ದಿದ್ದೇ ಆದರೆ ವಿವೇಕವಿಲ್ಲದ ಶಿಕ್ಷಣ ಸಚಿವರನ್ನು ತಕ್ಷಣ ವಜಾಗೊಳಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಆಗ್ರಹಿಸಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಪದವಿಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ೧೮೦ ಅಡಿ ಉದ್ದದ ತ್ರಿವರ್ಣ ಧ್ವಜದ ಮೆರವಣಿಗೆ ನಡೆದಿತ್ತು. ಈ ಸಂದರ್ಭದಲ್ಲಿ ಸಚಿವ ಬಿ ಸಿ ನಾಗೇಶ್ ಅವರು ರಾಷ್ಟ್ರಧ್ವಜಕ್ಕಿಂತ ಮೇಲೆ ಕೇಸರಿ ಧ್ವಜ ಹಿಡಿದಿರುವುದು ಕಂಡು ಬಂದಿತ್ತು.
ಇದನ್ನೂ ಓದಿ | Amrit Mahotsav | ಹೈದರಾಬಾದ್‌ ಬ್ರಿಟಿಷ್‌ ರೆಸಿಡೆನ್ಸಿ ಮೇಲೆ ದಾಳಿ ನಡೆಸಿದ ಮೌಲ್ವಿ ಸೈಯದ್‌ ಅಲ್ಲಾವುದ್ದೀನ್‌

Exit mobile version