ಬೆಂಗಳೂರು: ಕುಬೇರ ಕೆಜಿಎಫ್ ಬಾಬು ಅವರ ಮನೆ ಮೇಲೆ ಬುಧವಾರ ಆದಾಯ ತೆರಿಗೆ, ಕಮರ್ಷಿಯಲ್ ಟ್ಯಾಕ್ಸ್, ಚುನಾವಣಾಧಿಕಾರಿಗಳು ದಾಳಿ ಮಾಡಿದ್ದು, ಸುಮಾರು 18 ಗಂಟೆಗಳ ಕಾಲ ಕೆಜಿಎಫ್ ಬಾಬು ನಿವಾಸದಲ್ಲಿ ಶೋಧ ನಡೆಸಿದ್ದಾರೆ.
ಬುಧವಾರ ಸಂಜೆ ಚುನಾವಣಾಧಿಕಾರಿಗಳ ದಾಳಿ ಮುಕ್ತಾಯಗೊಂಡಿದ್ದು, ಐಟಿ ಅಧಿಕಾರಿಗಳ ಶೋಧ ಮುಂದುವರಿದಿದೆ. ಚುನಾವಣಾ ಅಧಿಕಾರಿಗಳು ಅಪಾರ ಪ್ರಮಾಣದ ವಸ್ತು ವಶಕ್ಕೆ ಪಡೆದುಕೊಂಡಿದ್ದಾರೆ.
ತಲಾ 27 ಸಾವಿರ ಬೆಲೆ ಬಾಳುವ 235 ಸೂಟ್ಸ್, ₹5,000 ಮೌಲ್ಯದ 5,000 ಕಂಚಿ ರೇಷ್ಮೆ ಸೀರೆಗಳು, 86 ಶಾಲುಗಳು, ಉಮ್ರಾ ಫೌಂಡೇಷನ್ ಹೆಸರಿನಲ್ಲಿ ತಲಾ ₹1,105 ಮೌಲ್ಯದ ಡಿಡಿಗಳು, 1000ಕ್ಕೂ ಹೆಚ್ಚು 5000 ರೂಪಾಯಿಯ ಚೆಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸೀರೆ, ಡಿಡಿ ಇದ್ದ ಚುನಾವಣಾ ಸಾಮಗ್ರಿಗಳ ಪ್ಯಾಕಿಂಗ್ ಮೇಲೆ ಕೆಜಿಎಫ್ ಬಾಬು ಭಾವಚಿತ್ರವಿದೆ. ಕಚೇರಿಯಲ್ಲಿ ಸಿಕ್ಕ ಚೆಕ್ ಹಾಗೂ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚುನಾವಣಾಧಿಕಾರಿಗಳಿಂದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಕ್ರಮ ವಸ್ತುಗಳ ಸಂಗ್ರಹದ ಬಗ್ಗೆ ದೂರು ದಾಖಲಾಗಿದೆ.
ಇದನ್ನೂ ಓದಿ: IT Raid : ಕೆಜಿಎಫ್ ಬಾಬು ಸಹಿತ 50 ಕಾಂಗ್ರೆಸ್ ನಾಯಕರಿಗೆ ಐಟಿ ಶಾಕ್; ರುಕ್ಸಾನಾ ಪ್ಯಾಲೇಸ್‌ಗೆ ಅಧಿಕಾರಿಗಳ ಲಗ್ಗೆ