Site icon Vistara News

ಜುಗುರಾಜ್‌ ಕೊಲೆ ಪ್ರಕರಣ: ರಾಜಾ ಬಿಷ್ಣೋಯಿ ಫ್ಯಾನ್ ಅಂದರ್‌

ಜುಗುರಾಜ್‌ ಕೊಲೆ ಪ್ರಕರಣ

ಬೆಂಗಳೂರು : ಚಾಮರಾಜಪೇಟೆಯ ನಾಲ್ಕನೇ ಕ್ರಾಸ್‌ನಲ್ಲಿರುವ ಕಿಂಗ್ಸ್ ಎನ್‌ಕ್ಲೇವ್‌ ಅಪಾರ್ಟ್‌ಮೆಂಟ್‌ನಲ್ಲಿ ಜುಗುರಾಜ್‌ ಕೊಲೆ‌ಯನ್ನು ಬಿಜುರಾಮ್‌ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಜುಗುರಾಜ್‌ ಕೊಲೆ ಕೇಸ್‌ನಲ್ಲಿ ಪೋರನ್‌ ಅರೆಸ್ಟ್‌ ಆಗಿದ್ದು, ಆರೋಪಿ ಬಿಜುರಾಮ್‌ಗೆ ಪೊರನ್ ಸಾತ್‌ ಕೊಟ್ಟಿದ್ದ. ಈತನ ಕತೆ ಈಗ ಪಂಜಾಬ್‌ನಲ್ಲಿ ಇತ್ತೀಚೆಗೆ ಹತ್ಯೆಯಾದ ಗಾಯಕ ಸಿಧು ಮೂಸೆವಾಲಾ ಪ್ರಕರಣದವರೆಗೆ ಸಾಗಿದೆ.

ಗೋವಾದಲ್ಲಿ ದೊಡ್ಡ ಹಾರ್ಡ್‌ವೇರ್ ಶಾಪ್ ಇಟ್ಟುಕೊಂಡಿರುವ ಪೊರನ್‌ ಜುಗುರಾಜ್ ಕೊಲೆ ನಂತರ ಆರೋಪಿಗಳನ್ನು ಗೋವಾಗೆ ಕರೆಸಿಕೊಂಡಿದ್ದ. ರಾಜಸ್ಥಾನದಲ್ಲಿ ಗನ್, ಮಚ್ಚು ಹಿಡಿದು ಬಿಲ್ಡಪ್‌ ಕೊಡುತ್ತಿದ್ದ ಪೊರನ್, ಗ್ಯಾಂಗ್ ಸ್ಟಾರ್ ರಾಜಾ ಬಿಷ್ಣೋಯಿ ಫ್ಯಾನ್ ಆಗಿದ್ದ. ಈ ರಾಜಾ ಬಿಶ್ನೋಯ್‌ ಮತ್ಯಾರೂ ಅಲ್ಲ, ಇತ್ತೀಚೆಗೆ ಪಂಜಾಬ್‌ನಲ್ಲಿ ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ. ಈತನ ನಿಜವಾದ ಹೆಸರು ಲಾರೆನ್ಸ್‌ ಬಿಷ್ಣೋಯಿ.

ರಾಜಾ ಬಿಷ್ಣೋಯಿ ಫ್ಯಾನ್‌ ಆಗಿದ್ದ ಪೊರನ್‌, RDX KING ಎಂದು ಅಡ್ಡ ಹೆಸರು ಇಟ್ಕೊಂಡು ಹಾವಳಿ ಕೊಡುತ್ತಿದ್ದ. ಓಪನ್‌ ಪ್ಲೇಸ್‌ನಲ್ಲಿ ಗನ್ ಫೈರ್ ಮಾಡಿ ದರ್ಪ ತೋರುತ್ತಿದ್ದ. ಸಾಮಾಜಿಕ ಜಾಲತಾಣದಲ್ಲಿ ಗನ್ ಹಿಡಿದು ವಿಡಿಯೋ ಹರಿಬಿಡುತ್ತಿದ್ದ. ಸದ್ಯ ಜುಗುರಾಜ್ ಕೊಲೆ ಕೇಸಲ್ಲಿ ಪೊರನ್ ಅರೆಸ್ಟ್‌ ಆಗಿದ್ದಾನೆ.

ಇದನ್ನೂ ಓದಿ | ಜುಗುರಾಜ್‌ ಹತ್ಯೆ ಮಾಡಲು ಹೆಂಡತಿಯೇ ಕಾರಣ ಎಂದ ಆರೋಪಿ: ಹಾಗಿದ್ರೆ ಬಿಜುರಾಮ್‌ ಪತ್ನಿ ಮಾಡಿದ್ದೇನು?

ರಾಜಾ ಬಿಶ್ನೋಯ್

8kg ಚಿನ್ನವನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ಪೊರನ್‌. ಮಹೇಂದ್ರನ ಮೂಲಕ ಪೊರನ್‌ನ್ನನ್ನು ಕಾಂಟ್ಯಾಕ್ಟ್ ಮಾಡಿಕೊಂಡಿದ್ದ ಬಿಜುರಾಮ್‌, ಪೊರನ್ ಮತ್ತು ಓಮ್ ರಾವ್ ಇಬ್ಬರು ಬಿಜುರಾಮ್‌ಗೆ ಸಪೋರ್ಟಿವ್ ಆಗಿದ್ದರು. ಸದ್ಯ ಆರೋಪಿ ಓಮ್ ರಾವ್ ಉಳಿದ ಚಿನ್ನ ದೊಂದಿಗೆ ಎಸ್ಕೇಪ್ ಆಗಿದ್ದಾನೆ. ಉಳಿದಂತೆ ಬಿಜುರಾಮ್‌, ಒಮ್ ಪ್ರಕಾಶ್,ಮಹೇಂದ್ರ, ಪೊರನ್‌ನ್ನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿತರಿಂದ 8.75 ಕೆಜಿ ಚಿನ್ನ, 4 kg ಬೆಳ್ಳಿ, 53 ಲಕ್ಷ ಹಣ ವಶಕ್ಕೆ ಪಡೆದುಕೊಂಡು ಆರೋಪಿ ಓಮ್ ರಾಮ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಚಾಮರಾಜಪೇಟೆ ವೃದ್ಧ ಉದ್ಯಮಿಯ ಹಂತಕ ಗುಜರಾತ್‌ನಲ್ಲಿ ಪೊಲೀಸ್‌ ಬಲೆಗೆ

Exit mobile version