ಬೆಂಗಳೂರು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮತದಾರರನ್ನು ಸೆಳೆಯುವ ಉದ್ದೇಶದಿಂದ ಚುನಾವಣಾ ಲಂಚ ಹಾಗೂ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುತ್ತಿರುವ ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಂಎಲ್‌ಸಿ ಟಿ.ಎ.ಶರವಣ ಅವರ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಕಾಂಗ್ರೆಸ್ ಹಲವಾರು ಭರವಸೆಗಳು ಮತ್ತು ಆಶ್ವಾಸನೆಗಳನ್ನು ಘೋಷಿಸುವ ಮೂಲಕ ಸಮಾಜದ ವಿವಿಧ ಗುಂಪುಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಇದು ಗ್ಯಾರಂಟಿ ಕಾರ್ಡ್‌ಗಳು ಚುನಾವಣಾ ಆಮಿಷವಾಗಿದ್ದು, ಇಂತಹವುಗಳ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಎಂಎಲ್‌ಸಿ ಟಿ.ಎ.ಶರವಣ ಒತ್ತಾಯಿಸಿದ್ದಾರೆ. ಈ ವೇಳೆ ಮುಖಂಡರಾದ ರಮೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | Neha Murder Case: ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಗಳ ರಕ್ತಕ್ಕೆ ಬೆಲೆ ಇಲ್ಲದಂತಾಗಿದೆ: ಆರ್.ಅಶೋಕ್ ಕಿಡಿ
ರಾಜ್ಯ ಸರ್ಕಾರದ ಖಜಾನೆ ಖಾಲಿ ಮಾಡಿ ಚೊಂಬು ಪ್ರದರ್ಶನ ಮಾಡುತ್ತಿದ್ದಾರೆ: ಎಚ್‌ಡಿಕೆ ಟೀಕೆ
ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕರು ಚೊಂಬು ಪ್ರದರ್ಶನ ವಿಚಾರಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ. ಅದೆಲ್ಲಾ ಏನೂ ಉಪಯೋಗಕ್ಕೆ ಬರಲ್ಲ. ದೇವೇಗೌಡ್ರು, ಅಕ್ಷಯ ಪಾತ್ರೆ ಈಗ ನರೇಂದ್ರ ಮೋದಿ ಕೈಯಲ್ಲಿ ಇದೆ ಎಂದು ಹೇಳಿದ್ದಾರೆ. ಆದರೆ, ಈಗ ರಾಜ್ಯ ಸರ್ಕಾರ ಖಜಾನೆ ಖಾಲಿ ಮಾಡಿರುವ ಚೊಂಬು ಪ್ರದರ್ಶನ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ 11 ತಿಂಗಳಲ್ಲಿ ಏನು ಅಭಿವೃದ್ಧಿ ಕಾರ್ಯಕ್ರಮ ಕೊಟ್ಟಿದ್ದಾರೆ. ಚೊಂಬಿನ ಚಿತ್ರ ಈ ಸರ್ಕಾರದ ಹಣೆ ಬರಹವಾಗಿದೆ ಎಂದು ಟೀಕಿಸಿದರು.
ಎಚ್‌ಡಿಕೆ, ಡಾ.ಸಿಎನ್. ಮಂಜುನಾಥ್ ಸೋಲ್ತಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಕೋಲಾರದಲ್ಲಿ ದಲಿತ ಸಮಾಜಕ್ಕೆ ಹಠ ಮಾಡಿ ಟಿಕೆಟ್ ತಗೊಂಡಿದ್ದೇವೆ. ನಾನು ನಮ್ಮ ಕುಟುಂಬದವರನ್ನು ನಿಲ್ಲಿಸಲು ಟಿಕೆಟ್ ತಗೊಂಡಿಲ್ಲ, ಅಂತಹುದರಲ್ಲಿ ಫೈಟ್ ಮಾಡಿ ಆ ಸೀಟು ತೆಗೆದುಕೊಂಡೆ. ಸಿಎಂ ಸಿದ್ದರಾಮಯ್ಯ ಅವರ ಮಗನನ್ನು ರಾಜಕಾರಣಕ್ಕೆ ಯಾಕೆ ತಂದರು. ಇವರು ಏನು ಬೇಕಾದರೂ ಮಾಡಬಹುದು, ನಾವು ಮಾಡಬಾರದಾ? ಎಂದು ಪ್ರಶ್ನಿಸಿದರು.
ದೇವೇಗೌಡರು ಬಿಜೆಪಿ ಜೊತೆ ಹೋಗಲ್ಲ ಎಂಬ ನಂಬಿಕೆ ಇತ್ತು ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರೇ ಬಿಜೆಪಿ ಜೊತೆ ದೇವೇಗೌಡರನ್ನು ಕಳಿಯಿಸಿರೋದು, ದೇವೇಗೌಡರು ಹೋಗ್ತಾ ಇರಲಿಲ್ಲ. ಬಲವಂತವಾಗಿ ಕಳುಹಿಸಿದ್ದಾರೆ, ಯಾಕೆಂದರೆ ಅವರು ಹೋಗೋಕೆ ಆಗಿಲ್ಲವಲ್ಲ. ಈ ಹಿಂದೆ ಏನು ಪ್ರಯತ್ನ ಮಾಡಿದ್ರು, ಸಿಎಂ ಪ್ರತಿನಿತ್ಯ ಸತ್ಯವನ್ನೆ ಹೇಳೋದು. ಜೆಡಿಎಸ್ ಉಳಿಯುತ್ತೋ ಇಲ್ವೋ ಮುಂದೆ ಆ ಭಗವಂತ ನೋಡ್ತಾನೆ ಎಂದರು.
ಇದನ್ನೂ ಓದಿ | Lok Sabha Election 2024: ಭ್ರಷ್ಟಾಚಾರ ನಿರ್ಮೂಲನೆಗೆ ಮೋದಿ ಸರ್ಕಾರ ಪಣ: ಸಚಿವ ಪ್ರಲ್ಹಾದ್ ಜೋಶಿ
ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎಂಬ ಡಿಕೆಶಿ ಪ್ರಶ್ನೆಗೆ ಉತ್ತರಿಸಿ, ಡಿಕೆಶಿ ಕೊಡುಗೆ ಏನು? ನನ್ನ ಕೊಡುಗೆ ಬಿಟ್ಟು ಬಿಡಿ, ಸರ್ಕಾರದಲ್ಲಿ ಮಾಡಿದ್ದು ಬಿಡಿ, ರೈತರ ಸಾಲ ಮುನ್ನಾ ಮಾಡಿದ್ದು ಬಿಡಿ, ರೈತರು ಆತ್ಮಹತ್ಯೆ ಮಾಡಿಕೊಂಡ ಕೈಯಿಂದ ಆರ್ಥಿಕ ನೆರವು ಕೊಟ್ಟೆ. ಇವರು ಏನು ಕೊಟ್ರು? ಲೂಟಿ ಹೊಡೆದು ಇಟ್ಟುಕೊಂಡಿದ್ದಾರೆ ಅಲ್ಲವೇ, ಡಿ.ಕೆ. ಶಿವಕುಮಾರ್ ಕಷ್ಟ ಪಟ್ಟು ದುಡಿಮೆ ಮಾಡಿದ್ದಾರಾ? ಕೈ ಎತ್ತಿ ಬಡವರು ಕಷ್ಟ ಅಂದಾಗ ಐದು ರೂಪಾಯಿ ಕೊಟ್ಟ ನಿದರ್ಶನ ಇದೆಯಾ? ಇವರಿಂದ ನಾನು ಕಲಿಯಬೇಕಾ ಎಂದು ತಿರುಗೇಟು ನೀಡಿದರು.