ಬೆಂಗಳೂರು: ಟ್ವಿಟರ್ ಮತ್ತಿತರ ಜಾಲತಾಣಗಳಲ್ಲಿ ತನ್ನನ್ನು ಅಶ್ಲೀಲ ಚಿತ್ರದ ನಾಯಕಿ ಎಂದು ಅವಹೇಳನ ಮಾಡುತ್ತಿರುವ(cyber crime) ಕೆಲ ಪುಂಡರ ಮೇಲೆ ಖ್ಯಾತ ನಟಿ (kannada actress) ಅನಿತಾ ಭಟ್ ಗರಂ ಆಗಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿರುವ ಅವರು ಬೆಂಗಳೂರು ಸಿಟಿ ಪೊಲೀಸರಿಗೆ ಅದನ್ನು ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
ನಟಿ ಅನಿತಾ ಭಟ್ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿರುವ ರಂಗನ್ ಮಾತು ಎಂಬ ಪೇಜ್, ಈಕೆ ಪೋರ್ನ್ ಮೂವಿ ಆಕ್ಟರ್ ಎಂದು ಪೋಸ್ಟ್ ಮಾಡಿದೆ. ಇಂಥವರಿಂದ ರಕ್ಷಣೆ ಸಿಗುತ್ತಾ ಎಂದು ಪೊಲೀಸರಿಗೆ ಟ್ವೀಟ್ ಮಾಡಿ ಅನಿತಾ ಪ್ರಶ್ನಿಸಿದ್ದಾರೆ. ಪೋಲೀಸರು ಕ್ರಮ ತೆಗೆದುಕೊಳ್ಳದೆ ಇದ್ದರೆ ಇಂತಹವರು ಅಪಾಯಕಾರಿಯಾಗಿ ಬೆಳೆಯಬಹುದು. ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಿ ಎಂದು ಅನಿತಾ ಭಟ್ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಸ್ಥಳೀಯ ಸೆನ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡುವಂತೆ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.