Site icon Vistara News

Kannada Sahitya Parishat | ಡಿ.30ರಿಂದ ಕನ್ನಡ ಸಾಹಿತ್ಯ ಪರಿಷತ್‌ ಸಾಹಿತ್ಯ ಪರೀಕ್ಷೆ

Kannada Sahitya Parishat

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ನಡೆಸುವ ೨೦೨೨-೨೩ನೇ ಸಾಲಿನ ಸಾಹಿತ್ಯ ಪರೀಕ್ಷೆಗೆ ದಿನಾಂಕವನ್ನು ಪ್ರಕಟಿಸಲಾಗಿದೆ. ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳನ್ನು ಡಿಸೆಂಬರ್ ೩೦, ೩೧ ಮತ್ತು ೨೦೨೩ರ ಜನವರಿ ೧ರಂದು ಒಟ್ಟು ೩ ದಿನಗಳ ಕಾಲ ರಾಜ್ಯದ ೧೮ ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಸಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ (Kannada Sahitya Parishat) ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ ತಿಳಿಸಿದ್ದಾರೆ.

ಈಗಾಗಲೇ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಮತ್ತು ಪರೀಕ್ಷಾ ವೇಳಾಪಟ್ಟಿಯನ್ನು ಅಂಚೆ ಮೂಲಕ ಕಳುಹಿಸಲಾಗಿದೆ. ಪರೀಕ್ಷಾ ಅಭ್ಯರ್ಥಿಗಳಿಗೆ ಡಿಸೆಂಬರ್ ೨೦ರ ನಂತರವೂ ಪ್ರವೇಶ ಪತ್ರ ಹಾಗೂ ವೇಳಾಪಟ್ಟಿ ತಲುಪದಿದ್ದ ಪಕ್ಷದಲ್ಲಿ ಅಂತಹ ಅಭ್ಯರ್ಥಿಗಳು, ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿಗಳನ್ನು ವಿಚಾರಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೦-೨೬೬೨೩೫೮೪ / ೨೬೬೧೨೯೯೧ ಹಾಗೂ ಮೊ. ೮೬೬೦೭೭೭೬೪೩ / ೯೭೩೯೬೬೬೮೩೪. ಅಂತರ್ಜಾಲ ತಾಣ www.kasapa.in ಮೂಲಕ ಸಹ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Nursing college | 10 ಸಾವಿರ ಕೊಟ್ಟವರಿಗೆ ನರ್ಸಿಂಗ್‌ ಕಾಲೇಜಲ್ಲಿ ಸಾಮೂಹಿಕ ನಕಲು: ಕ್ಯಾಮೆರಾ ಕಂಡಾಗ ಏನೂ ಆಗಿಲ್ಲವೆಂದರು

Exit mobile version