Site icon Vistara News

‌Karnataka Election : ಕಾಂಗ್ರೆಸ್‌ ಸೋಲಿಸಲು ಸುಪಾರಿ ಪಡೆದಿದ್ದು ಚಾಮರಾಜಪೇಟೆ ಶಾಸಕರ? ರಾಜಕೀಯ ವಲಯದಲ್ಲಿ ಚರ್ಚೆ

congress-mla-zameer-meeting-telangana-cm-kcr

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲು ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್‌) ಸಂಸ್ಥಾಪಕ ಕೆ. ಚಂದ್ರಶೇಖರ ರಾವ್‌ ಅವರಿಂದ 500 ಕೋಟಿ ರೂ. ಡೀಲ್‌ ಮಾಡಲಾಗಿದೆ ಎಂದು ತೆಲಂಗಾಣದ ಕಾಂಗ್ರೆಸ್‌ ನಾಯಕನ ಆರೋಪ ಇದೀಗ ಕರ್ನಾಟಕದಲ್ಲಿ ಭಾರೀ ಚರ್ಚೆಯ ವಿಷಯ.

ಕರ್ನಾಟಕದ ಕಾಂಗ್ರೆಸ್‌ ನಾಯಕರೊಂದಿಗೆ ಈ ಡೀಲ್‌ ಮಾಡಿಕೊಳ್ಳಲಾಗಿದೆ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸೋಲಿಸಲು ಕಾಂಗ್ರೆಸ್ ನಾಯಕನಿಗೇ ಆಫರ್ ನೀಡಲಾಗಿದೆ. ಕರ್ನಾಟಕ ಕಾಂಗ್ರೆಸ್‌ನ ಪ್ರಮುಖ ನಾಯಕನಿಗೆ ಆಮಿಷ ಒಡ್ಡಲಾಗಿದೆ ಎಂದು ಹೇಳಿದ್ದಾರೆ.

ಹೈದರಾಬಾದ್​ನಲ್ಲಿ ವ್ಯವಹಾರ ಹೊಂದಿರುವ ‘ಕೈ’ ನಾಯಕ, ಕೆಸಿಆರ್‌ ಅವರ ಫಾರ್ಮ್‌ ಹೌಸ್‌ನಲ್ಲಿ ಮೂರು ಬಾರಿ ಸಭೆ ನಡೆಸಿದ್ದಾರೆ ಎಂದು ಹೇಳಿರುವುದು ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಅವರ ಮೇಲೆ ಬೆಟ್ಟು ತೋರಿಸುತ್ತಿವೆ. ಈ ಹಿಂದೆ ಕೆಸಿಆರ್‌ ಅವರನ್ನು ಜಮೀರ್‌ ಅಹ್ಮದ್‌ ಭೇಟಿ ಮಾಡಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು. ಇದು ರಾಜಕೀಯ ಭೇಟಿ ಅಲ್ಲ ಎಂದು ಆ ಸಮಯದಲ್ಲಿ ಜಮೀರ್‌ ಹೇಳಿದ್ದರು. ಈ ವಿಚಾರ ಈಗ ಮುನ್ನೆಲೆಗೆ ಬಂದಿದೆ.

ಈ ಬಗ್ಗೆ ‌ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್‌, ನನಗೆ ಇದರ ಬಗ್ಗೆ ಮಾಹಿತಿ ಇಲ್ಲ. ಪೇಪರ್ ಒಂದರಲ್ಲಿ ಬಂದಿತ್ತು ನೋಡಿದೆ. ನಾನು ನೋಡಿ ಪ್ರತಿಕ್ರಿಯೆ ಕೊಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ | Revanth Reddy | ಕರ್ನಾಟಕದಲ್ಲಿ ಬಿಜೆಪಿಗೆ ಸಹಕರಿಸಲು ಕಾಂಗ್ರೆಸ್‌ ನಾಯಕನಿಗೆ ಸಿಎಂ ಕೆಸಿಆರ್‌ 500 ಕೋಟಿ ರೂ. ಆಫರ್, ಕೈ ನಾಯಕನಿಂದಲೇ ಆರೋಪ

Exit mobile version