Site icon Vistara News

Karnataka Election: ಡಿಕೆ ಬ್ರದರ್ಸ್ ಒಕ್ಕಲಿಗ ಜನಾಂಗಕ್ಕೆ ಕಳಂಕ: ಟಿಕೆಟ್ ವಂಚಿತ ಪಿ.ಎನ್ ಕೃಷ್ಣಮೂರ್ತಿ ಕಿಡಿ

pn krishnamuthy dasarahalli

ದಾಸರಹಳ್ಳಿ: ಒಕ್ಕಲಿಗ ಸಮುದಾಯಕ್ಕೆ ಡಿಕೆ ಬ್ರದರ್ಸ್ ಕಳಂಕ ಎಂದು ದಾಸರಹಳ್ಳಿ ಕಾಂಗ್ರೆಸ್‌ ಟಿಕೆಟ್ ವಂಚಿತ ಅಭ್ಯರ್ಥಿ ಪಿ.ಎನ್ ಕೃಷ್ಣಮೂರ್ತಿ ಕಿಡಿ ಕಾರಿದ್ದಾರೆ. ಡಿಕೆ ಶಿವಕುಮಾರ್‌ ಹಣ ಪಡೆದು ಟಿಕೆಟ್ ವಿತರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಟಿ.ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಭ್ಯರ್ಥಿ ಕೃಷ್ಣಮೂರ್ತಿ ಮಾತನಾಡಿ, ಕಳೆದ 5 ವರ್ಷದಲ್ಲಿ ಡಿ.ಕೆ ಸುರೇಶ ನಮ್ಮ ಕ್ಷೇತ್ರಕ್ಕೆ ಬಂದಿಲ್ಲ. ಕ್ಷೇತ್ರದ ಜನರ ಕಷ್ಟ ಸುಖ ಕೇಳಲು ಯಾರೂ ಬಂದಿಲ್ಲ. ಕೋವಿಡ್ ಸಂದರ್ಭದಲ್ಲಿ 35 ಸಾವಿರ ಜನರಿಗೆ ಕಿಟ್‌ಗಳನ್ನು ನೀಡಿದ್ದೇನೆ‌. ಟಿಕೆಟ್‌ಗೆ ನನ್ನನ್ನು ಪರಿಗಣಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನೀರಿಗೆ ಪಾಚಿ ವೈರಿ ಇದ್ದ ಹಾಗೆ ಡಿಕೆ ಶಿವಕುಮಾರ್ ಒಕ್ಕಲಿಗ ಜನಾಂಗಕ್ಕೆ ಕಳಂಕ. ಈ ಬಾರಿ ಟಿಕೆಟ್ ಪಡೆದ ಧನಂಜಯ್ಯಗೆ 2 ಲಕ್ಷ ಹಣ ಪಡೆದು ತಕ್ಷಣ ಟಿಕೆಟ್ ಕೊಟ್ಟಿದ್ದಾರೆ. ದಾಸರಹಳ್ಳಿ ಜನ ಟಿಕೆಟ್ ಮಾರಾಟವಾಗಿದೆ ಎಂದು ಹೇಳುತ್ತಿದ್ದಾರೆ. ಬ್ಲಾಕ್ ಅಧ್ಯಕ್ಷರಿಗೆ ಡಿಕೆ ಶಿವಕುಮಾರ್ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುತ್ತೇನೆ ಎಂದು ಧಮಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕ್ಷೇತ್ರದಲ್ಲಿ 2018ರಿಂದ 2023ರ ವರೆಗೂ ಕೆಲಸ ಮಾಡಿಕೊಂಡು ಬಂದಿದ್ದೇನೆ. ಕ್ಷೇತ್ರದಲ್ಲಿ ನೀವೇ ಚುನಾವಣಾ ಸರ್ವೇ ಮಾಡಿಸಿದ್ದೀರಿ. ದಿಲ್ಲಿಯಿಂದ ಸರ್ವೇ ಮಾಡಿದ್ದಾರೆ. ಆ ಸರ್ವೇಯಲ್ಲಿ ನನ್ನ ಹೆಸರೇ ಇದೆ‌. ಕಾಂಗ್ರೆಸ್ ಪಕ್ಷದ ಸರ್ವೇ ಬರೀ ಬೋಗಸ್. ಪಕ್ಷದ ಅಭ್ಯರ್ಥಿಗಳ ಹತ್ತಿರ ಅರ್ಜಿಗಾಗಿ 2 ಲಕ್ಷ ತಗೊಂಡಿದ್ದೀರಿ. 30 ಕೋಟಿ ಹಣ ಸಂಗ್ರಹ ಮಾಡಿದ್ದೀರಿ. ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮನೆಯ ದುಡ್ಡು ಹಾಕಿ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮಂತ್ರಿಗಳಿಗೆ 2 ಕೋಟಿ ಹೇಳಿದ್ದರೆ ತಂದು ಕೊಡುತ್ತಿದ್ದರು. ಅಣ್ಣ ತಮ್ಮಂದಿರಿಬ್ಬರಿಲ್ಲದಿದ್ದರೆ ಈ ಕಾಂಗ್ರೆಸ್ ಪಕ್ಷ ಇಲ್ಲ ಅಂದುಕೊಂಡಿದ್ದೀರಾ? ಕೋಟ್ಯಂತರ ಜನ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದು ಪಿ.ಎನ್ ಕೃಷ್ಣಮೂರ್ತಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Karnataka Elections : ಪಕ್ಷದ್ರೋಹ ಮಾಡಿಲ್ಲ, 10 ಬಾರಿ ಯೋಚಿಸಿ ಕಾಂಗ್ರೆಸ್‌ ಸೇರಿದ್ದೇನೆ; ಬಿ ಫಾರಂ ಸ್ವೀಕರಿಸಿದ ಜಗದೀಶ್‌ ಶೆಟ್ಟರ್‌

Exit mobile version