Site icon Vistara News

Karnataka Live News: ಕೊನೆಗೂ ನಿಗಮ ಮಂಡಳಿ ಪಟ್ಟಿ ಬಿಡುಗಡೆ; 32 ಶಾಸಕರಿಗೆ ಅಧಿಕಾರ

Nigama Mandali AppointMent NA Haris Shivalinge gowda

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೊನೆಗೂ ನಿಗಮ-ಮಂಡಳಿಗಳ ನೇಮಕದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಶಾಂತಿನಗರ ಶಾಸಕ ಎನ್‌.ಎ ಹ್ಯಾರಿಸ್‌ಗೆ ಬಿಡಿಎ ಅಧ್ಯಕ್ಷತೆ ನೀಡಲಾಗಿದೆ. ಇದರೊಂದಿಗೆ ರಾಜ್ಯದ ಇಂದಿನ ಮಹತ್ವದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸುದ್ದಿ ಬೆಳವಣಿಗೆಗಳನ್ನು (Karnataka Live News) ಇಲ್ಲಿ ಗಮನಿಸಿ.

Harish Kera

ರಾಜ್ಯಪಾಲರ ಭಾಷಣ ಅಂತ್ಯ

ಬೆಂಗಳೂರು: ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಹಿಂದಿನ ಬಜೆಟ್ ಮತ್ತು ಈಗಾಗಲೇ ಘೋಷಣೆ ಮಾಡಿರುವ ಯೋಜನೆಗಳ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ, ಯಾವುದೇ ಹೊಸ ಘೋಷಣೆಗಳಿಲ್ಲದ ಭಾಷಣವನ್ನು ಮುಗಿಸಿದರು.

Harish Kera

ಜಗದೀಶ್ ಶೆಟ್ಟರ್ ನಡೆಗೆ ಖರ್ಗೆ ಆಕ್ರೋಶ

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಜಗದೀಶ್‌ ಶೆಟ್ಟರ್‌ ಅವರ ನಡೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇವತ್ತು ಬಂದು ನಾಳೆ ಹೋಗೋದು ಅಂದ್ರೆ ಏನು? ಇದು ರಾಜ್ಯ ರಾಜಕಾರಣ ವಿಚಾರ ಆದ್ದರಿಂದ ಇದರ ಬಗ್ಗೆ ನಾನು ಹೆಚ್ಚಾಗಿ ಮಾತನ್ನಾಡೋದಿಲ್ಲ” ಎಂದಿದ್ದಾರೆ.

Harish Kera

ಚಿಂತಾಮಣಿಯಲ್ಲಿ ಬೃಹತ್‌ ರಾಷ್ಟ್ರಧ್ವಜ ಪ್ರದರ್ಶನ

75ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಚಿಂತಾಮಣಿಯಲ್ಲಿ ಅತ್ಯಂತ ಉದ್ದದ ರಾಷ್ಟ್ರ ದ್ವಜ ಪ್ರದರ್ಶಿಸಿ ದಾಖಲೆ ನಿರ್ಮಿಸಲಾಯಿತು. ಬರೋಬ್ಬರಿ 2200 ಅಡಿ ಉದ್ದದ ರಾಷ್ಟ್ರ ದ್ವಜ ಪ್ರದರ್ಶನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಚಾಲನೆ ನೀಡಿದರು. ಚಿಂತಾಮಣಿಯ ಅರ್ಯವೈಶ್ಯ ಮಂಡಳಿ ಮಾಡಿಸಿರುವ ಈ ಧ್ವಜವನ್ನು ಆಂಧ್ರಪ್ರದೇಶದ ರೊದ್ದಂ ಲಕ್ಷ್ಮಿನಾರಾಯಣ ಗುಪ್ತಾ ಸಿದ್ಧಪಡಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಧ್ವಜ ಸಾಗಿತು.

Exit mobile version