ಬೆಂಗಳೂರು: ನಟ ಕಿಚ್ಚ ಸುದೀಪ್ (Kichcha Sudeepa) ತಾಯಿ ಸರೋಜಾ ಅವರು ನಿಧನರಾಗಿದ್ದಾರೆ. ನಿನ್ನೆ ಶನಿವಾರ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರೋಜಾ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ 07.04 ನಿಮಿಷಕ್ಕೆ ಮೃತಪಟ್ಟಿದ್ದಾರೆ. ಭಾನುವಾರ ಮಧ್ಯಾಹ್ನ 12 ಗಂಟೆಗೆ ಪಾರ್ಥಿವ ಶರೀರವನ್ನು ಜೆಪಿ ನಗರದ ನಿವಾಸಕ್ಕೆ ಕುಟುಂಬಸ್ಥರು ತರಲಿದ್ದಾರೆ.
ನಿನ್ನೆಯಷ್ಟೆ ಬಿಗ್ ಬಾಸ್ ವೇದಿಕೆ ಮೇಲೆ ತಾಯಿ ಮಹತ್ವದ ಬಗ್ಗೆ ಸುದೀಪ್ ಮಾತನಾಡಿದ್ದರು. ಚೈತ್ರಾ ಕುಂದಾಪುರ ಜಗದೀಶ್ ವಿರುದ್ಧ ಒಬ್ಬ ಅಪ್ಪನಿಗೆ ಹುಟ್ಟಿದ್ದರೆ ಅನ್ನೋ ಪದ ಬಳಸಿದ್ದರು. ಅದಕ್ಕೆ ಖಡಕ್ ಆಗಿ ಉತ್ತರಿಸಿದ ಸುದೀಪ್, ನೀವು ಅಂದಿರುವುದು ಅಪ್ಪನಿಗಲ್ಲ ಅದು ತಾಯಿಗೆ ಮಾಡಿದ ಅವಮಾನ ಅಂತ ಆಕ್ರೋಶದಲ್ಲಿ ಅರಿವು ಮೂಡಿಸಿದ್ದರು. ನಿನ್ನೆ ಎಪಿಸೋಡ್‌ನಲ್ಲಿ ಚೈತ್ರಗೆ ಕ್ಲಾಸ್ ತಗೆದುಕೊಂಡಿದ್ದರು.
ಸುದೀಪ್ ತಾಯಿ ನಿಧನ ಸುದ್ದಿಗೆ ಚಿತ್ರರಂಗ ಹಾಗು ಫ್ಯಾನ್ಸ್ ಕಂಬನಿ ಮಿಡಿದಿದೆ. ಸುದೀಪ್ ತಾಯಿ ನಿಧನದ ಹಿನ್ನೆಲೆ ಜಗದೀಶ್ ಸುದ್ದಿಗೋಷ್ಟಿ ರದ್ದಾಗಿದೆ. ಸುದೀಪ್ ಅವರಿಗೆ ಜಗದೀಶ್ ಸಾಂತ್ವನ ಹೇಳಿದ್ದಾರೆ.