Site icon Vistara News

ಮಹಿಳಾ ಹೆಡ್ ಕಾನ್ಸ್‌ಟೇಬಲ್‌ಗೆ ಡ್ಯಾಗರ್‌ನಿಂದ ಇರಿದ ರೌಡಿ

ಅಲಿಯಾಸ್‌ ಶರೀಫ್

ಬೆಂಗಳೂರು: ರೌಡಿ ಶೀಟರ್‌ ಒಬ್ಬನನ್ನು ಪೊಲೀಸ್‌ ಠಾಣೆಗೆ ಕರೆತರಲು ಹೋದ ಮಹಿಳಾ ಹೆಡ್‌ಕಾನ್ಸ್‌ಟೇಬಲ್‌ ಮೇಲೆ ದಾಳಿ ನಡೆಸಿ ಡ್ಯಾಗರ್‌ನಿಂದ ಇರಿದ ಘಟನೆ ಹೆಚ್ಎಎಲ್ ಬಳಿಯ ಜ್ಯೋತಿನಗರದಲ್ಲಿ ನಡೆದಿದೆ.

ರೌಡಿ ಶೀಟರ್‌ ಶೇಕ್ ಶರೀಫ್ ಅಲಿಯಾಸ್‌ ಶರೀಫ್ (25) ನಿಂದ ಕೃತ್ಯ ನಡೆದಿದೆ. ವಿನುತಾ (45) ಇರಿತಕ್ಕೆ ಒಳಗಾದ ಮಹಿಳಾ ಪೊಲೀಸ್ ಹೆಡ್ ಕಾನ್ಸ್‌ಟೇಬಲ್. ಆಗಸ್ಟ್ 6ರಂದು ಹೆಚ್ಎಎಲ್ ಸಮೀಪದ ಜ್ಯೋತಿನಗರ ಬಳಿ ಘಟನೆ ನಡೆದಿದ್ದು, ಚಿಕಿತ್ಸೆಯ ಮೂರು ದಿನಗಳ ಬಳಿಕ ದೂರು ದಾಖಲಿಸಲಾಗಿದೆ.

ಆರೋಪಿ ಮೇಲೆ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳು ಎಚ್‌ಎಎಲ್ ಠಾಣೆಯಲ್ಲಿ ದಾಖಲಾಗಿವೆ. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದ ಶರೀಫ್‌ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಅಲ್ಲದೆ ಮತ್ತೆ ಕೊಲೆ ಮಾಡಲು ಸಂಚು ರೂಪಿಸಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಠಾಣೆಗೆ ಕರೆತರಲು WHC ವಿನುತಾ ಮತ್ತು ತಂಡ ಹೋಗಿತ್ತು.

ಜ್ಯೋತಿನಗರದಿಂದ ರೆಡ್ಡಿ ಪಾಳ್ಯಕ್ಕೆ ರೌಡಿ ತೆರಳುತ್ತಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ರಾತ್ರಿ 9.30ಕ್ಕೆ ಆತನನ್ನು ಕರೆದುಕೊಂಡು ಹೋಗಲು ತಂಡ ಮುಂದಾದಾಗ, ಮಹಿಳಾ ಪೊಲೀಸ್ ಸಿಬ್ಬಂದಿಗೆ ಆತ ಡ್ಯಾಗರ್‌ನಿಂದ ಇರಿದು ಪರಾರಿಯಾಗಲು ಯತ್ನಿಸಿದ. ಸ್ಥಳೀಯರ ಸಹಾಯದಿಂದ ಆತನನ್ನು ಹಿಡಿದು ಠಾಣೆಗೆ ಕರೆತರಲಾಗಿದೆ. ಗಾಯಾಳು ಕಾನ್ಸ್‌ಟೇಬಲ್‌ ಚಿಕಿತ್ಸೆ ಪಡೆದು ಡಿಸ್‌ಚಾರ್ಜ್ ಆಗಿದ್ದಾರೆ. ಘಟನೆ ಸಂಬಂದ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Bus accident | ಖಾಸಗಿ ಬಸ್‌ ಪಲ್ಟಿಯಾಗಿ ಇಬ್ಬರು ಸಾವು, 15 ಮಂದಿಗೆ ಗಾಯ

Exit mobile version