Site icon Vistara News

Krishna Janmashtami: ಬೆಂಗಳೂರಿಗರೇ ಗಮನಿಸಿ, ಕೃಷ್ಣ ಜನ್ಮಾಷ್ಟಮಿ ನಿಮಿತ್ತ 2 ದಿನ ಈ ರಸ್ತೆಗಳಲ್ಲಿ ಬಸ್‌ ಓಡಾಡಲ್ಲ!

ISKCON temple

ಬೆಂಗಳೂರು: ಸೆಪ್ಟೆಂಬರ್‌ 6 ಮತ್ತು 7ರಂದು (ಬುಧವಾರ ಮತ್ತು ಗುರುವಾರ) ಶ್ರೀ ಕೃಷ್ಣ ಜನ್ಮಾಷ್ಟಮಿ (Krishna Janmastami), ಮೊಸರುಕುಡಿಕೆ ಸಂಭ್ರಮ. ಬೆಂಗಳೂರು (Bangalore news) ಸೇರಿದಂತೆ ರಾಜ್ಯಾದ್ಯಂತ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆಯಲ್ಲಿ ಬಗೆ ಬಗೆಯ ತಿಂಡಿ ತಿನಿಸು ಮಾಡಿ ದೇವರಿಗೆ ಸಮರ್ಪಿಸುವುದರ ಜತೆಗೆ ತಮ್ಮ ಮಕ್ಕಳಿಗೆ ಕೃಷ್ಣ ವೇಷ ಹಾಕಿ ಸಂಭ್ರಮಿಸುವುದು ಈಗ ಹೆಚ್ಚಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಂತೂ ಕೃಷ್ಣ ಜನ್ಮಾಷ್ಟಮಿ ಎಲ್ಲೆಡೆ ಸಂಭ್ರಮದಿಂದ ನಡೆಯುತ್ತಿದೆ. ಈ ಸಂಭ್ರಮಕ್ಕೆ ಪೂರಕವಾಗಿ ಸರ್ಕಾರವೂ ಕೆಲವೊಂದು ಕ್ರಮಗಳನ್ನು ಕೈಗೊಂಡಿದೆ.

ದೇವಸ್ಥಾನಗಳಿಗೆ ಹೋಗುವವರ ಸಂಚಾರಕ್ಕೆ ಅನುಕೂಲವಾಗುವಂತೆ ಕೆಲವೊಂದು ಸಂಚಾರ ಬದಲಾವಣೆಗಳನ್ನು ಕೂಡ ಮಾಡಲಾಗಿದೆ. ರಾಜ್ಯದಲ್ಲಿ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್​​ಗಳ ಸಂಚಾರ ಬದಲಾವಣೆ ಎಲ್ಲೆಲ್ಲಿದೆ ಎಂಬುದರ ವಿವರ ಇಲ್ಲಿದೆ.

ಬೆಂಗಳೂರಿನ ಪ್ರಮುಖ ಆಕರ್ಷಣೆಯ ಕೇಂದ್ರ, ಶ್ರದ್ಧಾಭಕ್ತಿಯ ಕೇಂದ್ರವಾಗಿರುವ ರಾಜಾಜಿ ನಗರದ ಇಸ್ಕಾನ್‌ ದೇವಾಲಯಕ್ಕೆ (ISKCON Temple) ದೊಡ್ಡ ಪ್ರಮಾಣದಲ್ಲಿ ಭಕ್ತರು, ಗಣ್ಯರು ಭೇಟಿ ನೀಡುತ್ತಿರುವುದರಿಂದ ಅವರಿಗೆ ಸಮರ್ಪಕ ವ್ಯವಸ್ಥೆಗಳನ್ನು ಮಾಡುವುದಕ್ಕಾಗಿ ಕೆಲವು ಕೈಗೊಳ್ಳಲಾಗಿದೆ.

ಏನೇನು ಬದಲಾವಣೆ?

  1. ಇಸ್ಕಾನ್ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಇಂದು ಮತ್ತು ನಾಳೆ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದ್ದು, ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.
  2. ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ಭಕ್ತರು, ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಬಸ್ ಸಂಚಾರ ನಿಷೇಧಿಸಲಾಗಿದೆ.
  3. ರಾಜ್ ಕುಮಾರ್ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
  4. ಯಶವಂತಪುರ ಕಡೆಯಿಂದ ರಾಜ್ ಕುಮಾರ್ ರಸ್ತೆ-ಮೆಜೆಸ್ಟಿಕ್ ಕಡೆಗೆ ಮಾಮೂಲು ಮಾರ್ಗದಲ್ಲಿ ಸಂಚರಿಸುವ ಬದಲು ಯಶವಂತಪುರ-ಮಾರಪ್ಪನಹಳ್ಳಿ ಫ್ಲೈ ಓವರ್ ಮೂಲಕ BHEL ಅಂಡರ್ ಪಾಸ್, ಕೆ.ಸಿ.ಜನರಲ್ ಆಸ್ಪತ್ರೆಯ ಮಾರ್ಗವಾಗಿ ಬಸ್​​ಗಳು ಸಂಚಾರ ಮಾಡಲಿವೆ.
  5. ಯಶವಂತಪುರ, ವೆಸ್ಟ್ ಆಫ್ ಕಾರ್ಡ್ ರೋಡ್, ಮಹಾಲಕ್ಷ್ಮಿ ಲೇ ಔಟ್ ಕಡೆಯೂ ಮಾರ್ಗ ಬದಲಾವಣೆ ಮಾಡಲಾಗಿದೆ.
  6. ರಾಜ್ ಕುಮಾರ್ ರಸ್ತೆ ಮೂಲಕ ಸಾಗಿ 10 ನೇ ಕ್ರಾಸ್ ನಲ್ಲಿ ತಿರುವು ಪಡೆಯಲು ಸೂಚನೆ ನಿಡಲಾಗಿದೆ.
Exit mobile version