ಬೆಂಗಳೂರು: ಮಂಗಳೂರಿನ ಖ್ಯಾತ ನ್ಯಾಯವಾದಿ ಬಿ. ಜಿನೇಂದ್ರ ಕುಮಾರ್ (Advocate Jinendra Kumar) ಅವರು ತಮ್ಮ ಕಾರ್ಯ ಚಟುವಟಿಕೆಗಳನ್ನು (Lawyers office) ಬೆಂಗಳೂರಿಗೆ ವಿಸ್ತರಿಸಿದ್ದಾರೆ. ಹೈಕೋರ್ಟ್ ನ್ಯಾಯವಾದಿಯಾಗಿರುವ (High court Advocate) ಜಿನೇಂದ್ರ ಕುಮಾರ್ ಮತ್ತು ವಸುಧಾ ಬಿ ಹಾಗೂ ತಂಡದವರ ನೂತನ ಕಚೇರಿಯನ್ನು (Bangalore office) ಬೆಂಗಳೂರಿನ ಮಲ್ಲೇಶ್ವರದ ಮಂತ್ರಿ ಮಾಲ್ ಎದುರುಗಡೆ ಇರುವ ಶಿರೂರ್ ಪಾರ್ಕ್ ಪಕ್ಕ ಆರಂಭಿಸಲಾಗಿದೆ.
ಕರ್ನಾಟಕ ಸರ್ಕಾರದ ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಕಾನೂನು ಪ್ರಧಾನ ಕಾರ್ಯದರ್ಶಿಯಾಗಿದ್ದ ಎನ್.ಸಿ ಶ್ರೀನಿವಾಸ್ ಕಚೇರಿಯನ್ನು ಉದ್ಘಾಟಿಸಿದರು. ಈ ವೇಳೆ, ಮಂಗಳೂರ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಪೃಥ್ವಿರಾಜ್ ರೈ, ಆಂತರಿಕ ಭದ್ರತೆಯ ಎಸ್ಪಿ ಐಪಿಎಸ್ ಅಧಿಕಾರಿ ಜಿನೇಂದ್ರ ಖನಗಾವಿ, ರೇಡಿಯೋಲಾಜಿಸ್ಟ್, ಮಣಿಪಾಲ್ ಹೆಲ್ತ್ ಮ್ಯಾಪ್ ಡಯಾಗ್ನಾಸ್ಟಿಕ್ ಮುಖ್ಯಸ್ಥ ಸಂದೀಪ್ ಬಲ್ಲಾಳ್, ಖ್ಯಾತ ಜ್ಯೋತಿಷಿ ಹಾಗೂ ಹಿರಿಯ ಲೆಕ್ಕಪರಿಶೋಧಕ ಎಚ್ ಟಿ ರಾಧಾಕೃಷ್ಣ ಶಾಸ್ತ್ರಿ, ಮತ್ತು ಆದಾಯ ಇಲಾಖೆಯ ಜಂಟಿ ಆಯುಕ್ತಾರಾದ ಸುಧೀಂದ್ರ ರಾವ್ ಉಪಸ್ಥಿತರಿದ್ದರು.
ಕಾನೂನಿನ ಸೇವೆಗೆ ವ್ಯಾಪ್ತಿಯಿಲ್ಲ: ಎನ್ ಸಿ ಶ್ರೀನಿವಾಸ್
ಕಚೇರಿ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತ ಎನ್.ಸಿ ಶ್ರೀನಿವಾಸ್ ಅವರು, “ಕಾನೂನಿನ ಸೇವೆಗೆ ಯಾವುದೇ ವ್ಯಾಪ್ತಿಗಳಿಲ್ಲ. ವಿದ್ಯಾರ್ಥಿ ಜೀವನದಿಂದ ಹಲವು ಸಮಾಜಮುಖಿ ಹೋರಾಟ ಮಾಡುತ್ತಾ ಬಂದಿರುವ ಜಿನೇಂದ್ರ ಕುಮಾರ್ ಮತ್ತು ತಂಡದರವರು ಸತತವಾಗಿ ಮಂಗಳೂರಿನಲ್ಲಿ ಮೂರು ದಶಕಗಳಿಂದ ಕಾನೂನು ಸೇವೆಯಲ್ಲಿ ಜನಾನುರಾಗಿಯಾಗಿದ್ದಾರೆ. ಈಗ ತಮ್ಮ ಸೇವೆಯನ್ನು ಹೈಕೋರ್ಟ್ ನ್ಯಾಯವಾದಿಗಳ ಅವರ ತಂಡ ಬೆಂಗಳೂರಿಗೆ ವಿಸ್ತರಿಸಿದೆʼʼ ಎಂದರು. ಕಳೆದ ಒಂದು ದಶಕಗಳ ಹಿಂದೆ ತಾವು ಮಂಗಳೂರಿನಲ್ಲಿ ನ್ಯಾಯಾಧೀಶರಾಗಿ ಸೇವೆ ಮಾಡಿದ ಸಂದರ್ಭದಲ್ಲಿ ಜಿನೇಂದ್ರ ಅವರ ಒಡನಾಟದ ಬಗ್ಗೆ ನೆನಪು ಮಾಡಿಕೊಂಡರು.
ಜನರ ಸೇವೆಗಾಗಿ ಬೆಂಗಳೂರಿನಲ್ಲಿ ಕಚೇರಿ: ಜಿನೇಂದ್ರ ಖನಗಾವಿ
ಕಚೇರಿಯ ಬಗ್ಗೆ ಮಾತನಾಡಿದ ಐಪಿಎಸ್ ಅಧಿಕಾರಿ ಜಿನೇಂದ್ರ ಖನಗಾವಿ ಇತ್ತೀಚಿನ ದಿನಗಳಲ್ಲಿ ಕಾನೂನಿನ ಬಗ್ಗೆ ಸಾರ್ವಜನಿಕರಿಗೆ ಅಪಾರ ನಂಬಿಕೆ ಹಾಗೂ ಗೌರವವನ್ನು ನ್ಯಾಯವಾದಿಗಳು ದೊರಕಿಸಿಕೊಟ್ಟಿದ್ದಾರೆ. ಇದರಲ್ಲಿ ಜಿನೇಂದ್ರ ಕುಮಾರ್ ಹಾಗೂ ತಂಡದವರೂ ಸೇರಿದ್ದಾರೆ ಎಂದರು.
ಇದನ್ನೂ ಓದಿ: High court : ನಿಮಗೆ ಆಗದಿದ್ದರೆ, ಬೇರೆಯವರ ವೀರ್ಯ, ಅಂಡಾಣುನಿಂದ ಮಗು ಮಾಡ್ಕೊಬಹುದು!
ಈ ವೇಳೆ ಮಾತನಾಡಿದ ಬಿಜೆಕೆ ಅಸೋಸಿಯೇಟ್ಸ್ ಮುಖ್ಯಸ್ಥರಾದ ಜಿನೇಂದ್ರ ಕುಮಾರ್, ಕಾನೂನು ಸೇವೆ ನೀಡುವಲ್ಲಿ ನನ್ನ ತಂಡದವರ ಸಾಥ್ ಬಹಳಷ್ಟಿದೆ. ಇದೀಗ ನಮ್ಮಸೇವೆ ರಾಜಧಾನಿಯಲ್ಲೂ ನಡೆಸಲು ಉತ್ಸುಕರಾಗಿದ್ದೇವೆ. ತಮ್ಮೆಲ್ಲರ ಸಹಕಾರ ಬೇಕು ಎಂದು ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ಬಿಜೆಕೆ ಅಸೋಯೇಟ್ಸ್‌ನ ಬಂಧುವರ್ಗ, ಜಿನೇಂದ್ರ ಕುಮಾರ್ ಅವರ ಕುಟುಂಬ, ಸ್ನೇಹಿತರು, ಅಭಿಮಾನಿ ವರ್ಗ ಉಪಸ್ಥಿತರಿದ್ದರು. ಕಚೇರಿಯ ರಚನೆ ಮತ್ತು ವಿನ್ಯಾಸದ ಬಗ್ಗೆ ಮಾತೃಶ್ರೀ ಬಿಲ್ಡರ್ಸ್ ಮತ್ತು ಇಂಟೀರಿಯರ್ಸ್ ಮಾಲಕರಾದ ಮಾಳ ಹರ್ಷೇಂದ್ರ ಜೈನ್ ಮಾತನಾಡಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಹಿತರಕ್ಷಕ ಘಟಕ ನಿರ್ದೇಶಕ ಸೋಮಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.