Site icon Vistara News

Lecco Cucina: ಬೆಂಗಳೂರಿನ ಎಚ್‍.ಎಸ್.ಆರ್‌. ಲೇಔಟ್‍ನಲ್ಲಿ ಲೆಕ್ಕೊ ಕುಚಿನಾ ಹೊಸ ಶೋರೂಂ

Lecco Cucina new showroom at HSR Lay out, Bangalore

ಬೆಂಗಳೂರು: ಭಾರತದ ಐಟಿ ಸಿಟಿ ಎಂದೇ ಜನಪ್ರಿಯವಾಗಿರುವ ಬೆಂಗಳೂರು(IT City Bengaluru), ಇಟಾಲಿಯನ್‍ (Italian) ಕರಕುಶಲತೆಯನ್ನು ಪ್ರತಿಬಿಂಬಿಸುವ ಮನೆ ಮತ್ತು ಅಡುಗೆ ಪೀಠೋಪಕರಣಗಳಿಗೆ ಪ್ರಮುಖ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿದೆ. ಈ ಹಿನ್ನೆಲೆಯಲ್ಲಿ ಇಟಾಲಿಯನ್‍ ವಿನ್ಯಾಸ ಪ್ರೇರಿತ ಮಾಡ್ಯುಲರ್‍ ಕಿಚನ್‍ಗಳು (modular kitchen) ಮತ್ತು ವಾರ್ಡ್‍ರೋಬ್‍ಗಳ ತಯಾರಕರಾದ ಲೆಕ್ಕೊ ಕುಚಿನಾ(Lecco Cucina), ಬೆಂಗಳೂರು ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಮುಂದಾಗಿದೆ. ಸ್ಟಾರ್ಟ್‍-ಅಪ್‍ಗಳು ಮತ್ತು ಐಟಿ ಕಂಪೆನಿಗಳ ನೆಲೆಯಾಗಿರುವ ಎಚ್‍.ಎಸ್‍.ಆರ್‍ ಲೇಔಟ್‍ನಲ್ಲಿ (HSR Lay Out) ಬೃಹತ್‍ ಶೋರೂಂ ಪ್ರಾರಂಭಿಸಿ, ಆ ಮೂಲಕ ಗ್ರಾಹಕರಿಗೆ ಅತ್ಯುತ್ತಮ ವಿನ್ಯಾಸಗಳನ್ನು ಪ್ರದರ್ಶಿಸುತ್ತಿದೆ.

ಒರಾಯನ್‍ ಅಪ್‍ಟೌನ್‍ ಮಾಲನ್‍ನ ನಂತರ ಬೆಂಗಳೂರಿನಲ್ಲಿ ಇದು ಲೆಕ್ಕೊ ಕುಚಿನಾದ ಎರಡನೆಯ ಮಳಿಗೆಯಾಗಿದ್ದು, 1500 ಚದುರಡಿ ವಿಶಾಲವಾದ ಜಾಗದಲ್ಲಿ ಈ ಶೋರೂಮ್‍ ಪ್ರಾರಂಭವಾಗಿದೆ. ಈ ಶೂರೂಮ್‍ನಲ್ಲಿ ಆಕರ್ಷಕ ಶ್ರೇಣಿಯ ವಿನ್ಯಾಸಗಳು ಗ್ರಾಹಕರಿಗೆ ಲಭ್ಯವಿದೆ.

ಲ್ಯಾವೆಲ್ಲೆ ರಸ್ತೆಯಲ್ಲಿ ಶೂರೂಂ ಪ್ರಾರಂಭಿಸುವ ಮೂಲಕ ಬೆಂಗಳೂರಿಗೆ ಪದಾರ್ಪಣೆ ಮಾಡಿದ ಲೆಕ್ಕೊ ಕುಚಿನಾ, ಒಂದು ವರ್ಷದ ಅವಧಿಯಲ್ಲಿ ತ್ವರಿತವಾಗಿ ಕೆಲವು ಔಟ್‍ಲೆಟ್‍ಗಳನ್ನು ಪ್ರಾರಂಭಿಸಿರುವುದು ವಿಶೇಷ. ದಕ್ಷಿಣ ಭಾರತದ ನಾಲ್ಕು ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳು ನಾಡು, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಏಳು ಲೆಕ್ಕೊ ಕುಚಿನಾ ಔಟ್‍ಲೆಟ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಇಟಾಲಿಯನ್‍ ಮಾಡ್ಯುಲರ್‍ ಕಿಚನ್‍ಗಳು ಮತ್ತು ವಾರ್ಡ್‍ರೋಬ್‍ಗಳನ್ನು ಜನರಿಗೆ ನೀಡುತ್ತಿವೆ.

ಸೌಂದರ್ಯ ಮತ್ತು ಉಪಯುಕ್ತತೆಯ ಸಂಗಮವಾಗಿರುವ ಲೆಕ್ಕೊ ಕುಚಿನಾ, ಹೊಸ ರೀತಿಯ ವಿನ್ಯಾಸಗಳನ್ನು ಮೆಚ್ಚು ಭಾರತೀಯ ಗ್ರಾಹಕರಿಗೆ ಹೊಸ ಮಾದರಿಯ ಪೀಠೋಪಕರಣಗಳನ್ನು ಒದಗಿಸುತ್ತಿದೆ. ಭಾರತೀಯ ಮನೆಗಳಿಗೆ ಅತ್ಯುತ್ತಮವಾದ ಇಟಾಲಿಯನ್‍ ವಿನ್ಯಾಸ ಮತ್ತು ನಾವೀನ್ಯತೆಯನ್ನು ತರುವ ಮೂಲಕ ಲೆಕೊ ಕುಸಿನಾ, ಭಾರತೀಯ ಗ್ರಾಹಕರಿಗೆ ಬಹಳ ಆಪ್ತವಾಗಿದೆ. ಫ್ರಾಂಚೈಸಿಗಳ ಮೂಲಕ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವುದಷ್ಟೇ ಅಲ್ಲ, ಸೊಗಸಾದ ಶ್ರೇಣಿ ಮತ್ತು ಗುಣಮಟ್ಟದ ಉತ್ಪನ್ನಗಳ ಮೂಲಕ ದಕ್ಷಿಣ ಭಾರತದಾದ್ಯಂತ ಬಹಳ ಬೇಗ ಖ್ಯಾತಿ ಗಳಿಸಿದೆ.

ಈ ಕುರಿತು ಮಾತನಾಡುವ ಲೆಕ್ಕೊ ಕುಚಿನಾದ ಬ್ಯುಸಿನೆಸ್‍ ಹೆಡ್‍ ಆದ ತ್ರಿಶೂಲ್‍ ದೇವಾಂಗ, ‘ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಏಳು ಸೇರಿದಂತೆ ಮೂರು ಹೊಸ ಫ್ರಾಂಚೈಸ್ ಸೈನ್‍-ಅಪ್‍ಗಳೊಂದಿಗೆ 2023ರ ಕ್ಯಾಲೆಂಡರ್‍ ವರ್ಷವನ್ನು ಅಂತ್ಯಗೊಳಿಸುತ್ತಿದ್ದೇವೆ. 2024ರಲ್ಲಿ 30 ಹೊಸ ಔಟ್‍ಲೆಟ್‍ಗಳನ್ನು ಪ್ರಾರಂಭಿಸುವ ಯೋಚನೆಯಿದ್ದು, 2027ರ ವೇಳೆಗೆ ದಕ್ಷಿಣ, ಪಶ್ವಿಮ ಮತ್ತು ಮಧ್ಯ ಭಾರತದಾದ್ಯಂತ ಎರಡು ಮತ್ತು ಮೂರನೆಯ ಶ್ರೇಣಿಯ ನಗರಗಳಲ್ಲಿ 100 ಔಟ್‍ಗಳನ್ನು ಪ್ರಾರಂಭಿಸುವ ಗುರಿ ಇದೆ’ ಎಂದು ಹೇಳಿದ್ದಾರೆ.

3 ಬಿಎಚ್‍ಕೆ, 2 ಬಿಎಚ್‍ಕೆ ಮತ್ತು 1 ಬಿಎಚ್‍ಕೆ ಮನೆಗಳಿಗೆ ಅಡುಗೆಮನೆ ಮತ್ತು ವಾರ್ಡ್‍ರೋಬ್‍ಗಳ ವಿಶೇಷವಾದ ಕಾಂಬೋಗಳು ಈಗಾಗಲೇ ಸಾಕಷ್ಟು ಜನಪ್ರಿಯವಾಗಿವೆ. ವಿಶಾಲವಾದ ವಾರ್ಡ್‍ರೋಬ್‍ಗಳು, ಆರಾಮದಾಯಕ ಬೆಡ್‍ಸೆಟ್‍ಗಳು, ಶೂ ರ್ಯಾಕ್‍ಗಳು, ಟಿವಿ ಯೂನಿಟ್‍ಗಳು, ಸುಸಜ್ಜಿತ ಅಡುಗೆಮನೆಗಳ ಮೂಲಕ ಲೆಕೊ ಕುಸಿನಾ, ಕನಸುಗಳನ್ನು ನನಸು ಮಾಡುವುದಕ್ಕೆ ಹೊರಟಿದೆ.

ಭಾರತೀಯ ಮನೆಗಳಿಗೆ ಕೈಗೆಟಕುವ ಬೆಲೆಯಲ್ಲಿ ಇಟಾಲಿಯನ್‍ ಸೊಬಗನ್ನು ತರುವ ದೃಷ್ಟಿ ಮತ್ತು ಮಹ್ವಾಕಾಂಕ್ಷೆಯಿಂದ ಲೆಕ್ಕೊ ಕುಚಿನಾ ಮುಂದಾಗಿದೆ. ಜರ್ಮನ್‍ ತಂತ್ರಜ್ಞಾನದೊಂದಿಗೆ ಇಟಾಲಿಯನ್ ವಿನ್ಯಾಸಗಳ ಆಕರ್ಷಕ, ಸೃಜನಶೀಲ ಮತ್ತು ಕಡಿಮೆ ವೆಚ್ಚದ ಫ್ಯಾಶನ್‍ ಪೀಠೋಪಕರಣಗಳಿಗೆ ಒಮ್ಮೆ ಲೆಕ್ಕೊ ಕುಚಿನಾಗೆ ಭೇಟಿ ಕೊಡಿ.

ಈ ಸುದ್ದಿಯನ್ನೂ ಓದಿ : Vande Bharat Express: ಶೀಘ್ರ ಬೆಂಗಳೂರು-ಕೊಯಮತ್ತೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು

Exit mobile version