Site icon Vistara News

Saree Trend | ವರಮಹಾಲಕ್ಷ್ಮಿ ಹಬ್ಬಕ್ಕೆ ಬಂತು ಲೈಟ್‌ವೇಟ್‌ ರೇಷ್ಮೆ ಸೀರೆಗಳು

Saree Trend

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವರಮಹಾಲಕ್ಷ್ಮಿ ಹಬ್ಬಕ್ಕೆ ನಾನಾ ವಿನ್ಯಾಸದ ಪ್ರಿಂಟೆಡ್‌, ಚೆಕ್ಸ್‌ ಸೇರಿದಂತೆ ನಾನಾ ಬಗೆಯ ಲೈಟ್‌ವೇಟ್‌ ರೇಷ್ಮೆ ಸೀರೆಗಳು (Saree Trend) ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿವೆ.

ಉಡಲು ಹಗುರವಾಗಿರುವ, ನೋಡಲು ಅತ್ಯಾಕರ್ಷಕವಾಗಿ ಕಾಣುವ ಈ ರೇಷ್ಮೆ ಸೀರೆಗಳು ಎಲ್ಲಾ ವಯೋಮಾನದ ಮಹಿಳೆಯರಿಗೆ ಹಾಗೂ ಮೈಬಣ್ಣಕ್ಕೆ ಸೂಟ್‌ ಆಗುವಂತೆ ಲೆಕ್ಕವಿಲ್ಲದಷ್ಟು ಶೇಡ್‌ಗಳಲ್ಲಿ ಬಿಡುಗಡೆಗೊಂಡಿವೆ. ಅಷ್ಟು ಮಾತ್ರವಲ್ಲ, ಕಾಂಟ್ರಸ್ಟ್‌ ವರ್ಣದ ಬಾರ್ಡರ್‌ ಸೀರೆಗಳು ಊಹೆಗೂ ಮೀರಿದ ಕಾಂಟೆಂಪರರಿ ಡಿಸೈನ್ಸ್‌ ಸೇರಿದಂತೆ ಕಲರ್‌ ಕಾಂಬೀನೇಷನ್‌ ಹೊಂದಿದ ಮಿಶ್ರ ಹೊಂದಿದ ರೇಷ್ಮೆ ಸೀರೆಗಳೂ ಹಬ್ಬದ ಸೀಸನ್‌ನ ರಂಗೇರಿಸಿವೆ.

ಹಬ್ಬಕ್ಕೆ ರೇಷ್ಮೆ ಸೀರೆ ಉಡದ ಹೆಣ್ಣುಮಕ್ಕಳು ಕಾಣ ಸಿಗುವುದೇ ಅಪರೂಪ. ಅಷ್ಟೊಂದು ಪ್ರಾಮುಖ್ಯತೆ ಈ ರೇಷ್ಮೆ ಸೀರೆಗಳಿಗೆ ಇಂದಿಗೂ ಇದೆ. ಇದಕ್ಕೆ ಪೂರಕ ಎಂಬಂತೆ ಫ್ಯಾಷನ್‌ಲೋಕದಲ್ಲಿ ವೆರೈಟಿ ಲೈಟ್‌ವೇಟ್‌ ರೇಷ್ಮೆ ಸೀರೆಗಳು ದೊರಕುತ್ತಿವೆ ಎನ್ನುತ್ತಾರೆ ಮಿಸೆಸ್‌ ಗ್ಲೋಬಲ್‌ ಯುನಿವರ್ಸ್ (೨೦೧೯) ಸವಿತಾ ರೆಡ್ಡಿ.

ಇದನ್ನೂ ಓದಿ | Holiday Outfit: ಸಂಡೇ ಔಟಿಂಗ್‌ ಫ್ಯಾಷನ್‌ಗೆ ಸೈ ಎನ್ನಿ!

ಕ್ಲಾಸಿಕ್‌ ಲುಕ್‌

ಕ್ಲಾಸಿಕಲ್‌ ಲುಕ್‌ ನೀಡುವ ಟ್ರೆಂಡಿ ಪ್ಯಾಟರ್ನ್ಸ್‌ ಹೊಂದಿರುವ ವೈವಿಧ್ಯಮಯ ಬಣ್ಣಗಳಲ್ಲಿ ಲಭ್ಯವಿರುವ ಕಾಂಚೀವರಂ ಸಿಲ್ಸ್ಕ್, ನೇಕಾರರ ಕುಸುರಿ ಕೆಲಸ ಒಳಗೊಂಡಿರುವ ಹ್ಯಾಂಡ್‌ಲೂಮ್‌ ಸಿಲ್ಕ್ಸ್‌, ಕುಬೇರಾ ಸಿಲ್ಕ್‌, ಅಪ್ಸರಾ ಸಿಲ್ಕ್ಸ್‌, ಜಾಮ್‌ದಾನಿ ಕಲಾತ್ಮಕತೆಯನ್ನು ಒಳಗೊಂಡ ಭಾರವಿಲ್ಲದ ಉಪ್ಪಾಡಾ ಸಿಲ್ಕ್‌, ಸಾಂಪ್ರದಾಯಿಕ ಮತ್ತು ಆಧುನಿಕ ಸೀರೆ ಡಿಸೈನ್‌ಗಳ ಮಿಶ್ರಣದೊಂದಿಗೆ ಕೈ ಕುಸುರಿ ಹೊಂದಿರುವ ವಸ್ತ್ರಕಲಾ ಸಿಲ್ಕ್‌, ಬನಾರಸ್‌, ಮೈಸೂರ್‌ ಸಿಲ್ಕ್‌ ಸೇರಿದಂತೆ ನಾನಾ ಬ್ರಾಂಡ್‌ನವು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ.

ರೇಷ್ಮೆ ಸೀರೆಯ ಸೆರಗಿನ ಚಿತ್ತಾರ

ರೇಷ್ಮೆ ಸೀರೆಯ ವೈವಿಧ್ಯಮಯ ಥೀಮ್‌ ಒಳಗೊಂಡ ಅಂಚು ರೇಷ್ಮೆ ಸೀರೆಗಳ ಲುಕ್‌ ಅನ್ನು ಮತ್ತಷ್ಟು ಅಂದಗೊಳಿಸುತ್ತಿದೆ. ಕೆಲವು ಬಾರ್ಡರ್‌ಗಳಲ್ಲಿಕಾಂಟ್ರಾಸ್ಟ್‌ ಬಣ್ಣಗಳನ್ನು ಬಳಸಲಾಗುತ್ತಿದ್ದು, ಅದರಲ್ಲೂಸೆರಗಿನ ಅಂದ ಹೆಚ್ಚಿಸುವ ಡಿಸೈನ್‌ಗಳು ಹೆಚ್ಚು ಹೈಲೈಟಾಗುತ್ತಿವೆ. ಈ ಬಾರಿ ಡಬ್ಬಲ್‌ ಕಾಂಟ್ರಸ್ಟ್‌ ಬಣ್ಣಗಳು ಸೆರಗಿನಂಚಿನಲ್ಲಿಕಾಣಿಸಿಕೊಳ್ಳುತ್ತಿರುವುದು ಟ್ರೆಂಡಿಯಾಗಿದೆ. ವಿವಾಹಿತ ಮಹಿಳೆಯರನ್ನಷ್ಟೇ ಅಲ್ಲ, ಟಿನೇಜ್‌ ಹುಡುಗಿಯರೂ ಇಷ್ಟಪಡುವ ಡಿಸೈನ್‌ಗಳು ಬಂದಿವೆ. ಬಾರ್ಡರ್‌-ಪಲ್ಲು ಇವೆರೆಡು ಸುಂದರವಾಗಿರುವ ಈ ಲೈಟ್‌ವೇಟ್‌ ಸೀರೆಗಳಲ್ಲಿ ಮಾನಿನಿಯರು ಸುಂದರವಾಗಿ ಕಾಣುವುದರಲ್ಲಿಸಂಶಯವಿಲ್ಲ ಎನ್ನುವ ಸೀರೆ ಶಾಪ್‌ವೊಂದರ ಸೇಲ್ಸ್‌ ಮ್ಯಾನೇಜರ್‌ ಅವರ ಪ್ರಕಾರ, ಸೀರೆಯ ಗ್ರ್ಯಾಂಡ್‌ ಲುಕ್‌ ಬಾರ್ಡರ್‌ ಹಾಗೂ ಸೆರಗಿನ ವಿನ್ಯಾಸದ ಮೇಲೆ ನಿರ್ಧರಿತವಾಗಿರುತ್ತದಂತೆ.

ಯುವತಿಯರಿಗೆ ಕಾಂಟೆಂಪರರಿ ಡಿಸೈನ್ಸ್‌

ಇನ್ನು ಯುವತಿಯರಿಗೆಂದೇ ಕಾಂಟೆಂಪರರಿ ವಿನ್ಯಾಸಗಳಲ್ಲಿ ಹೂವು-ಹಣ್ಣು, ಎಲೆ, ಪ್ರಾಣಿ-ಪಕ್ಷಿ, ಭಗವದ್ಗೀತೆ ಶ್ಲೋಕ, ಚಿತ್ರ, ವಕ್ರ-ಚಕ್ರ, ಅಡ್ಡಾ-ದಿಡ್ಡಿ , ನೇರ ಗೆರೆಗಳು, ವಿಚಿತ್ರ ರೇಖಾ ಚಿತ್ರಗಳನ್ನು ಒಳಗೊಂಡ ರೇಷ್ಮೆ ಸೀರೆಗಳು ಬಂದಿವೆ. ಸೀರೆಯ ಅಂಚು, ಪಲ್ಲು, ಬುಟ್ಟಾ , ಕುಚ್ಚುಗಳು, ಚಮಕಿ, ಮುತ್ತು-ಮಣಿಯ ಸಿಂಗಾರದಲ್ಲಿ ಮಿಂದೆದ್ದ ವಿನ್ಯಾಸಗಳು ಆಕರ್ಷಿಸುತ್ತಿವೆ.

ಲೈಟ್‌ವೇಟ್‌ ರೇಷ್ಮೆ ಸೀರೆಗಳ ನಿರ್ವಹಣೆ

ಈ ಸೀರೆಗಳ ನಿರ್ವಹಣೆ ತೀರಾ ಸುಲಭ. ಆಗಾಗ್ಗೆ ನೆರಳಿನಲ್ಲಿಹರಡಿ ಒಣಗಿಸಿ, ಮಡಿಸಿಡುವುದನ್ನು ಅಭ್ಯಾಸಮಾಡಿಕೊಳ್ಳಿ. ಸೀರೆ ಇರಿಸುವ ಜಾಗದಲ್ಲಿ ನ್ಯಾಪ್ತಾಲೀನ್‌ ಗುಳಿಗೆಗಳನ್ನು ಇರಿಸುವುದು ಹಾಗೂ ಇಸ್ತ್ರೀ ಮಾಡುವಾಗ ಕಡಿಮೆ ಉಷ್ಣತೆ ಬಳಸುವುದು ಉತ್ತಮ ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್‌ಗಳು.

ಲೈಟ್‌ವೇಟ್‌ ರೇಷ್ಮೆ ಸೀರೆ ಖರೀದಿ ಮಾಡುವವರಿಗೆ ಸಲಹೆ:

ಇದನ್ನೂ ಓದಿ | Celebrity Fashion Corner: ಫ್ಯಾಷನ್‌ ಎಂಬುದು ಹರಿಯುವ ನೀರಿನಂತೆ!

Exit mobile version