Site icon Vistara News

Load Shedding : ಬೆಂಗಳೂರಲ್ಲೂ ಶುರವಾಯ್ತಾ ಅನಧಿಕೃತ ಲೋಡ್‌ ಶೆಡ್ಡಿಂಗ್!

Load Shedding in bangalore

ಬೆಂಗಳೂರು: ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಕೊರತೆ (Lack of rain) ಎದುರಾಗಿದೆ. ಇದರಿಂದ ನೀರಿಗೆ ಸಂಕಷ್ಟ ಶುರುವಾಗಿದೆ. ಮುಂದೆ ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ಬರಬಹುದು ಎಂದು ಹೇಳಲಾಗುತ್ತಿದೆ. ಈ ಎಲ್ಲದರ ನಡುವೆ ಈಗ ರಾಜ್ಯದ ಜನತೆಗೆ ಮತ್ತೊಂದು ಶಾಕ್‌ ಕಾಡತೊಡಗಿದೆ. ಈಗಾಗಲೇ ಹಲವು ಕಡೆ ಅನಧಿಕೃತ ಪವರ್‌ ಕಟ್‌ (Power cut) ಶುರುವಾಗಿದೆ ಎಂಬ ಆರೋಪ ಕೇಳಿಬರುತ್ತಿತ್ತು. ಈಗ ರಾಜಧಾನಿ ಬೆಂಗಳೂರಲ್ಲಿಯೂ ಲೋಡ್ ಶೆಡ್ಡಿಂಗ್ (Load Shedding) ಶುರುವಾಯಿತಾ ಎಂಬ ಅನುಮಾನ ಮೂಡಿದೆ.

ನಿತ್ಯವೂ ಒಂದಲ್ಲಾ ಒಂದು ಕಡೆಯಲ್ಲಿ ಪವರ್ ಕಟ್ ಮಾಡಲಾಗುತ್ತಿದೆ. ಇದಕ್ಕೆ ಬೆಸ್ಕಾಂ ಬಳಿ ಕಾರಣ ಕೇಳಿದರೆ ಸಿದ್ಧ ಉತ್ತರ ಲಭ್ಯವಾಗುತ್ತಿದೆ. ವಿವಿಧ ಕಾಮಗಾರಿಗಳು ನಡೆಯುತ್ತಿದೆ. ಇದರಿಂದ ಅಡಚಣೆಯುಂಟಾಗಿದೆ ಎಂಬ ಕಾರಣ ಹೇಳಲಾಗುತ್ತಿದೆ. ಕಾಮಗಾರಿಗಳ ಹೆಸರಲ್ಲಿ ಬೆಸ್ಕಾಂ ಬೆಂಗಳೂರಿನಲ್ಲಿ ಪವರ್‌ ಕಟ್‌ (Power cut in Bengaluru) ಶುರು ಮಾಡಿದೆಯೇ ಎಂಬ ಬಗ್ಗೆ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: Chaitra Kundapura : ಬಿಜೆಪಿ ಟಿಕೆಟ್‌ ವಂಚನೆ ಜಾಲದ ಹಿಂದೆ ದೊಡ್ಡ ದೊಡ್ಡವರಿದ್ದಾರಾ?; ಚೈತ್ರಾ ಕುಂದಾಪುರ ಸ್ಫೋಟಕ ಹೇಳಿಕೆ

ಗುರುವಾರ 46 ಏರಿಯಾಕ್ಕಿಲ್ಲ ಕರೆಂಟ್!

ಗುರುವಾರ (ಸೆಪ್ಟೆಂಬರ್‌ 14) 46 ಏರಿಯಾಗಳಲ್ಲಿ ಕರೆಂಟ್ ಇಲ್ಲ ಎಂದು ಬೆಸ್ಕಾಂ ಪ್ರಕಟಣೆ ಮೂಲಕ ತಿಳಿಸಿದೆ. ಬುಧವಾರ 30ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕವನ್ನು (Electricity connection) ಕಡಿತ ಮಾಡಲಾಗಿತ್ತು. ಅಲ್ಲದೆ, ಗುರುವಾರ 46 ಏರಿಯಾ ಮಾತ್ರವಲ್ಲದೆ, ಮತ್ತಷ್ಟು ಕಡೆ ಕರೆಂಟ್‌ ತೆಗೆಯಲು ಮುಂದಾಗಲಾಗಿದೆ.

7 ಗಂಟೆ ಪವರ್‌ ಕಟ್‌!

ಕೆಪಿಟಿಸಿಎಲ್‌ (KPTCL) ಮತ್ತು ಬೆಸ್ಕಾಂನ‌ ಕಾಮಗಾರಿಗಳ ಹೆಸರಿನಲ್ಲಿ ವಿದ್ಯುತ್‌ ಸಂಪರ್ಕವನ್ನು ವ್ಯತ್ಯಯ ಮಾಡಲಾಗುತ್ತಿದೆ. ಸುಮಾರು ಏಳು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಇರಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿದೆ.

ಬೆಂಗಳೂರಿನ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಇರಲಿದೆ?

ಬೆಂಗಳೂರಿನ ಗುಡ್ಡದ ಕ್ಯಾಂಪ್​, ಚರ್ಚ್​​ ಕ್ಯಾಂಪ್ ಸೇರಿದಂತೆ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಹಳೇ ಚಿಕ್ಕನಹಳ್ಳಿ, ಹೊಸ ಚಿಕ್ಕನಹಳ್ಳಿ, ಒಬ್ಬಾಜಿಹಳ್ಳಿ, ಮಲ್ಲಾಡಿಹಳ್ಳಿ, ಹೊಸ ಕಡಲೇಬಾಳು, ಹಳೇ ಕಡಲೇಬಾಳು, ಆರ್. ನುಲೇನೂರು, ಬಸಾಪುರ, ಗೌಡಿಹಳ್ಳಿ, ಗೊಲ್ಲರಹಳ್ಳಿ, ಕುಂಟೇಗೌಡನಹಳ್ಳಿ, ಸೂರಪ್ಪನಹಟ್ಟಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್​.ಎಚ್. ಪಾಳ್ಯ, ಬೋರಸಂದ್ರ, ಬ್ಯಾಡರಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ ನಡೆಯಲಿದೆ.

ದಾಸರಹಳ್ಳಿ, ಹುಂಜನಾಳ, ವೆಂಕಟಾಪುರ, ಗೌಡಿಹಳ್ಳಿ, ಗೊಲ್ಲರಹಳ್ಳಿ, ವೆಂಕಟೇಶಪುರ, ಹುಲಿಕೆರೆ, ಬೈಲದನಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ದುರ್ಗದಹಳ್ಳಿ, ತಿಪ್ಪನಹಳ್ಳಿ, ಬೋರಸಂದ್ರ, ಕಲ್ಲಶೆಟ್ಟಿಹಳ್ಳಿ, ಬ್ಯಾಡರಹಳ್ಳಿ, ರಾಜಾಜಿನಗರ 8ನೇ ಅಡ್ಡರಸ್ತೆ, ರಾಜಾಜಿನಗರ 19ನೇ ಅಡ್ಡರಸ್ತೆ, ಹಂಪಿನಗರ, ಆರ್‌ಪಿಸಿ ಲೇಔಟ್‌, ಅತ್ತಿಗುಪ್ಪೆ ಸೇರಿ ಒಟ್ಟು 46 ಕಡೆಗಳಲ್ಲಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Weather report : ಬೆಂಗಳೂರಲ್ಲಿ ಸಂಜೆಗೆ ಮಳೆ ಅಬ್ಬರ; ಕರಾವಳಿಗೆ ಯೆಲ್ಲೋ ಅಲರ್ಟ್‌!

ಹೀಗಾಗಿ ರಾಜಧಾನಿಯಲ್ಲಿ ಅನಧಿಕೃತವಾಗಿ ಲೋಡ್‌ ಶೆಡ್ಡಿಂಗ್‌ ಮಾಡುವ ಮೂಲಕ ವಿದ್ಯುತ್‌ ಉಳಿತಾಯಕ್ಕೆ ಮುಂದಾಗಲಿದೆಯೇ ಎಂಬ ಬಗ್ಗೆ ಅನುಮಾನ ಮೂಡತೊಡಗಿದೆ.

Exit mobile version