ಬೆಂಗಳೂರು: ಪ್ರೀತಿಸಿ, ಮದುವೆ ಆಗುವುದಾಗಿ ನಂಬಿಸಿ ಕಾನ್ಸ್‌ಟೇಬಲ್ ಲೈಂಗಿಕವಾಗಿ ಬಳಸಿಕೊಂಡು (Love Case) ವಂಚಿಸಿರುವ ಆರೋಪ ಕೇಳಿ ಬಂದಿದೆ. ಬಸವನಗುಡಿ ಠಾಣೆಯ (basavanagudi police station) ಮುಂದೆ ಯುವತಿ ಪ್ರತಿಭಟನೆ ನಡೆಸುತ್ತಿದ್ದಾಳೆ. ಬಸವನಗುಡಿ ಠಾಣೆಯ ಪೊಲೀಸ್ ಪೇದೆ ಅನೀಲ್ ಕುಮಾರ್ ಎಂಬಾತ ನಾಗವೇಣಿ ಎಂಬುವವರಿಗೆ ವಂಚಿಸಿದ್ದಾನೆ.
ಅನೀಲ್ ಕುಮಾರ್ ಹಾಗೂ ನಾಗವೇಣಿ ಇಬ್ಬರು ಕಳೆದ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದಾರೆ. ಮದುವೆ ಆಗುವುದಾಗಿ ಹೇಳಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸಿರ್ಸಿ ಸರ್ಕಲ್ ಬಳಿಯ ಪೊಲೀಸ್ ಕ್ವಾರ್ಟಸ್‌ನಲ್ಲಿ ಇತ್ತೀಚೆಗೆ ಬಲತ್ಕಾರ ಮಾಡಿದ್ದಾನೆ. ಮದುವೆಯಾಗುವಂತೆ ಕೇಳಿದ್ದರೆ ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.
ಅನೀಲ್ ಕುಮಾರ್ ಹಾಗೂ ನಾಗವೇಣಿ ಚಿತ್ರದುರ್ಗ ಮೂಲದವರು. ನಾಗವೇಣಿ ಬೆಂಗಳೂರಿನ ಉತ್ತರ ಹಳ್ಳಿಯಲ್ಲಿ ವಾಸವಿದ್ದರೆ, ಪೊಲೀಸ್ ಪೇದೆ ಅನೀಲ್ ಕುಮಾರ್ ಸಿರ್ಸಿ ಸರ್ಕಲ್ ಬಳಿಯ ಪೊಲೀಸ್ ಕ್ವಾರ್ಟಸ್‌ನಲ್ಲಿ ವಾಸವಿದ್ದಾನೆ. ಈ ಹಿಂದೆಯೇ ಅನೀಲ್ ವಾಸವಿರುವ ಕ್ವಾರ್ಟಸ್, ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಿನ್ನೆಲೆಯಲ್ಲಿ 2023ರ ಆಗಸ್ಟ್‌ನಲ್ಲಿ ನಾಗವೇಣಿ ದೂರು ನೀಡಿದ್ದಳು. ಆದರೆ ಕೋರ್ಟ್‌ನಿಂದಲೇ ನಿರೀಕ್ಷಿತ ಜಾಮೀನು (Anticipatory ) ಪಡೆದಿದ್ದ.
ನಂತರವೂ ಮದುವೆ ಆಗುವುದಾಗಿ ಭರವಸೆ ಕೊಟ್ಟಿದ್ದಾನೆ. ಆದರೆ ಇದೀಗ ಇನ್ನೊಬ್ಬರ ಜತೆ ಮದುವೆಗೆ ತಯಾರಿ ನಡೆಸಿದ್ದಾನೆ. ಇದನ್ನೂ ಪ್ರಶ್ನಿಸಲು ಹೋದರೆ ಅನಿಲ್‌ಕುಮಾರ್ ಬೆದರಿಕೆ ಹಾಕುತ್ತಿದ್ದನಂತೆ. ಹೀಗಾಗಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಅನಿಲ್ ಕರ್ತವ್ಯದಲ್ಲಿ ಇದ್ದಾಗಲೇ ಬಂದ ನಾಗವೇಣಿ ಪ್ರತಿಭಟಿಸಿದ್ದಾಳೆ. ಸ್ಟೇಷನ್‌ಗೆ ನಾಗವೇಣಿ ಬರುತ್ತಿದ್ದಂತೆ ಅನಿಲ್‌ಕುಮಾರ್ ಎಸ್ಕೇಪ್ ಆಗಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ