Site icon Vistara News

Love Case: ಪ್ರೀತಿಸಿದವಳು ದೂರಾದಳೆಂದು ಮನನೊಂದ; ಕತ್ತರಿಯಿಂದ ತಿವಿದುಕೊಂಡು ಯುವಕ ಸಾವು

love failure Young man dies

ಬೆಂಗಳೂರು/ದಾವಣಗೆರೆ: ಪ್ರಿಯತಮೆ ದೂರ ಆಗಿದ್ದಕ್ಕೆ ನೊಂದ ಪ್ರಿಯಕರ (Love Case) ಮೃತಪಟ್ಟಿದ್ದಾನೆ. ದಾವಣಗೆರೆ ಮೂಲದ ಚೇತನ್ (21) ಮೃತ ದುರ್ದೈವಿ. ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ (Bengaluru News) ಈ ಘಟನೆ ನಡೆದಿದೆ.

ದಾವಣಗೆರೆ ಮೂಲದ ಚೇತನ್ ಎರಡು ವರ್ಷದಿಂದ ಜನನಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಪಿಯುಸಿ ಓದುವಾಗಲೇ ಜನನಿಯ ಪರಿಚಯವಾಗಿತ್ತು. ಇವರಿಬ್ಬರ ಪರಿಚಯವು ನಂತರ ಪ್ರೀತಿಗೆ ತಿರುಗಿತ್ತು. ಆದರೆ ಇವರಿಬ್ಬರ ಪ್ರೀತಿ ವಿಷಯವು ಹುಡುಗಿ ಕಡೆಯವರಿಗೆ ಗೊತ್ತಾಗಿತ್ತು.

ಹೀಗಾಗಿ ಯುವತಿಯ ಚಿಕ್ಕಪ್ಪ ಈ ಮದುವೆಗೆ ಒಪ್ಪಿರಲಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಚೇತನ್‌ನ್ನು ಭೇಟಿಯಾದಾಗ, ನಮ್ಮಿಬ್ಬರ ಮದುವೆಗೆ ನಮ್ಮ ಚಿಕ್ಕಪ್ಪ ಒಪ್ಪುತ್ತಿಲ್ಲ. ನೀನು ಬೇರೆ ಹುಡುಗಿನಾ ಮದುವೆ ಆಗು ಎಂದಿದ್ದಾಳೆ. ಪ್ರೀತಿಸಿದವಳು ದೂರವಾಗಿದಕ್ಕೆ ಚೇತನ್‌ ಮನನೊಂದಿದ್ದ.

ಇದನ್ನೂ ಓದಿ: Love Case : ತಂಗಿಯನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚಾಕು ಹಾಕಿದ ಅಣ್ಣ

ನಿನ್ನೆ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಜನನಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದ. ಈ ವೇಳೆ ಜನನಿ ಸಿಗದಿದ್ದರೆ ಸಾಯುವುದಾಗಿ ಹೇಳಿದ್ದಾನೆ. ಜನನಿ ಪೋಷಕರೊಟ್ಟಿಗೆ ಮಾತಿನ ಚಕಮಕಿ ನಡೆಯುವಾಗಲೇ ಚೇತನ್‌ ಕತ್ತರಿಯಿಂದ ಹೊಟ್ಟೆಗೆ ತಿವಿದುಕೊಂಡಿದ್ದಾನೆ.

ಇತ್ತ ಜನನಿ ಕುಟುಂಬಸ್ಥರು ಚೇತನ್ ತಂದೆ ತಾಯಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೋಷಕರು ಆಟೋದಲ್ಲಿ ಬಿದ್ದಿರುವ ಸ್ಥಿತಿಯಲ್ಲಿದ್ದ ಚೇತನ್‌ನನ್ನು ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚೇತನ್‌ ಶುಕ್ರವಾರ ಮೃತಪಟ್ಟಿದ್ದಾನೆ. ಚೇತನ್ ಕುಟುಂಬಸ್ಥರು ಹುಡುಗಿ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ನಂದಿನಿ ಲೇಔಟ್ ಪೊಲೀಸರು ಅನುಮಾನಸ್ಪಾದ ಸಾವು ಎಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version