Site icon Vistara News

Mahadayi water dispute | ಕಳಸಾ ಕಾಮಗಾರಿ ಸ್ಥಳಕ್ಕೆ ಗೋವಾ ಶಾಸಕ ವಿಜಯ ಸರದೇಸಾಯಿ ಭೇಟಿ

mahadayi

ಬೆಳಗಾವಿ: ಕಳಸಾ, ಬಂಡೂರಿ ಯೋಜನೆ ಕಾಮಗಾರಿ ನಡೆಯುವ ಸ್ಥಳಕ್ಕೆ ಗೋವಾದ ಶಾಸಕ ವಿಜಯ ಸರದೇಸಾಯಿ ಅವರು ಅನುಮತಿ ಇಲ್ಲದೆ ಪ್ರವೇಶಿಸಿದ ಘಟನೆ ನಡೆದಿದೆ.

ಖಾನಾಪುರ ತಾಲೂಕಿನ ಕಣಕುಂಬಿ ಪ್ರದೇಶಕ್ಕೆ ವಿಜಯ ಸರದೇಸಾಯಿ ಭೇಟಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾಮಗಾರಿ ನಡೆಯುವ ಸ್ಥಳಕ್ಕೆ ವಿಜಯ ಸರದೇಸಾಯಿ ರಹಸ್ಯ ಭೇಟಿ ನೀಡಿರುವುದೇಕೆ ಎಂಬ ಪ್ರಶ್ನೆ ಉಂಟಾಗಿದೆ.

ಗೋವಾ ಫಾರ್ವರ್ಡ್ ಪಾರ್ಟಿಯ ಅಧ್ಯಕ್ಷರೂ ಆಗಿರುವ ವಿಜಯ ಸರದೇಸಾಯಿ, ಯೋಜನೆಗೆ ಸಂಬಂಧಿಸಿ ಕರ್ನಾಟಕದ ವಿರುದ್ಧ ಆರೋಪಿಸಿದ್ದಾರೆ. ಕಾಮಗಾರಿಯ ಫೋಟೊಗಳನ್ನು ಗೋವಾದಲ್ಲಿ ಬಿಡುಗಡೆ ಮಾಡಿದ್ದಾರೆ.

ಗೋವಾದ ಪರಿಸರವಾದಿಗಳನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಗೋವಾ ಆಕ್ಷೇಪಿಸುತ್ತಿದೆ.

ಮಹದಾಯಿ ನ್ಯಾಯಾದೀಕರಣದಿಂದ 2015ರ ಆಗಸ್ಟ್ 14 ರಂದು ತೀರ್ಪು ಪ್ರಕಟವಾಗಿತ್ತು. ಹಾಗೂ ಈ ತೀರ್ಪಿನ ಪ್ರಕಾರ, 13.42 ಟಿಎಂಸಿ ನೀರು ರಾಜ್ಯಕ್ಕೆ ಹಂಚಿಕೆಯಾಗಬೇಕು. ಕಳಸಾ- 1.72 ಟಿಎಂಸಿ, ಬಂಡೂರಿ ನಾಲಾದಿಂದ 2.18 ಟಿಎಂಸಿ ನೀರು ಹಂಚಿಕೆಯಾಗಬೇಕು. ಕಳಸಾ ನೀರು ಬಳಕೆಗೆ ಅಣೆಕಟ್ಟೆ ನಿರ್ಮಾಣ ಅವಶ್ಯಕತೆ ಇದೆ.

ಬಂಡೂರಿ ನೀರು ಬಳಸಲು ಅಣೆಕಟ್ಟೆ ಹಾಗೂ ಅರಣ್ಯ ಪ್ರದೇಶದಲ್ಲಿ ಟನಲ್ ನಿರ್ಮಾಣದ ಅಗತ್ಯ ಇದೆ. ಅರಣ್ಯದಲ್ಲಿ ಕಾಮಗಾರಿಗೆ ಗೋವಾ ಅಡ್ಡಿಪಡಿಸುತ್ತಿದೆ.

Exit mobile version