Site icon Vistara News

Vistara Awards : ಬೆಸ್ಟ್‌ ಟೀಚರ್‌ ಪ್ರಶಸ್ತಿ ನೀಡಿದ ವಿಸ್ತಾರವೇ ಬೆಸ್ಟ್‌; ಮನದುಂಬಿ ಹಾರೈಸಿದ ಹೊರಟ್ಟಿ

Basavaraja Horatti Vistara Best teacher Award

ಬೆಂಗಳೂರು: ಅಲ್ಪಾವಧಿಯಲ್ಲೇ ರಾಜ್ಯಾದ್ಯಂತ ಮನೆ ಮಾತಾಗಿ, ರಾಜ್ಯದ ಪ್ರಭಾವಶಾಲಿ ಸುದ್ದಿ ಮಾಧ್ಯಮವಾಗಿರುವ ವಿಸ್ತಾರ ನ್ಯೂಸ್‌ (Vistara News private Ltd) ನಾಡಿನ ಬೆಳಕಾಗಿರುವ ಶ್ರೇಷ್ಠ ಶಿಕ್ಷಕರನ್ನು ಗುರುತಿಸಿ ಗೌರವಿಸುವ (Vistara News Awards) ಉದ್ದೇಶದಿಂದ ರೂಪಿಸಿದ ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್ಸ್‌ -2023ಗೆ (Vistara News Best teacher award-2023) ನಾಡಿನ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ. ಅವುಗಳಿಗೆ ಕಲಶಪ್ರಾಯ ಎಂಬಂತೆ ಡಿಸೆಂಬರ್‌ 22ರಂದು ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ (Vistara Awards) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್‌ನ ಸಭಾಪತಿಗಳಾದ ಶಿಕ್ಷಣ ತಜ್ಞ ಬಸವರಾಜ ಹೊರಟ್ಟಿ (Basavaraja horatti) ಅವರು ಪತ್ರವೊಂದನ್ನು ಬರೆದು ವಿಸ್ತಾರವನ್ನು ಶ್ಲಾಘಿಸಿದ್ದಾರೆ.

ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 37 ಮಂದಿ ಸಾಧಕರ ಶಿಕ್ಷಕರು/ಶಿಕ್ಷಕಿಯರನ್ನು ಗೌರವಿಸಿದ್ದ ಬಸವರಾಜ ಹೊರಟ್ಟಿ ಅವರಿಗೆ ಈ ಕಾರ್ಯಕ್ರಮ, ಅದರ ಹಿನ್ನೆಲೆ ಮತ್ತು ವಿಸ್ತಾರ ನಡೆಸುತ್ತಿರುವ ಶಿಕ್ಷಣ ಪರ, ಸಮಾಜಪರ ಚಟುವಟಿಕೆಗಳು ಕಾರ್ಯಕ್ರಮದ ಆಚೆಗೂ ಕಾಡಿವೆ. ಹೀಗಾಗಿ ಅವರು ಅಂದು ಅನುಭವಿಸಿದ ಅನುಭೂತಿಯನ್ನು ಪತ್ರದ ಮೂಲಕ ಹೇಳಿದ್ದಾರೆ.

ಡಿ. 22ರಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ದೃಶ್ಯ

ಬಸವರಾಜ ಹೊರಟ್ಟಿ ಅವರ ಪತ್ರದ ಅಂಶಗಳು ಇಲ್ಲಿವೆ

ನಿಖರ ಜನಪರ ಎಂಬ ಧ್ಯೇಯ ಹೊಂದಿ ಅಲ್ಪ ಅವಧಿಯಲ್ಲಿಯೇ ರಾಜ್ಯದ ಪ್ರಭಾವಶಾಲಿ ಸುದ್ದಿವಾಹಿನಿ ಎನಿಸಿಕೊಂಡಿರುವ ವಿಸ್ತಾರ ನ್ಯೂಸ್ ಸುದ್ದಿ ಪ್ರಸಾರದ ಜೊತೆ ಜೊತೆಗೆ ವಿಭಿನ್ನ ಸಮಾಜಮುಖಿ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವುದು ಅಭಿನಂದನಾರ್ಹ ಸಂಗತಿಯಾಗಿದೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಅತ್ಯುತ್ತಮ ಶಾಲೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಳೆದ ಒಂದು ವರ್ಷದಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ “ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ” ಅಭಿಯಾನ ರಾಜ್ಯದ ನೂರಾರು ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ಸಹಕಾರಿಯಾಗಿದೆ ಎಂಬ ವಿಷಯ ತಿಳಿದು ಸಂತಸವಾಗಿದೆ.

ಶಾಲೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಬೋಧನೆ ಮೂಲಕ ವಿದ್ಯಾರ್ಥಿರ್ಥಿಗಳ ಮನ ಗೆದ್ದಿರುವ ಆದರ್ಶ ಶಿಕ್ಷಕರನ್ನು ಗುರುತಿಸಿ, ಇತ್ತೀಚೆಗೆ ʻʻವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್‌-2023″ ಕಾರ್ಯಕ್ರಮ ಆಯೋಜಿಸಿ ನನ್ನನ್ನು ಸಹ ಸಮಾರಂಭದಲ್ಲಿ ತೊಡಗಿಸಿಕೊಂಡು ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಅವಕಾಶ ನೀಡಿದ್ದಕ್ಕೆ ತಮಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಬಸವರಾಜ ಹೊರಟ್ಟಿ ಅವರು ಬರೆದ ಪತ್ರ

ವಿಸ್ತಾರ ವಾಹಿನಿ ಅನಗತ್ಯ ಅಬ್ಬರ ನಡೆಸದೆ ಸಮಾಜಮುಖಿ, ಮಾಹಿತಿಪೂರ್ಣ ಹಾಗೂ ಜನಸ್ನೇಹಿ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಮಾಧ್ಯಮದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ ದೇಶದ ಜೀವಾಳವೇ ಶಿಕ್ಷಣ ಆಗಿದ್ದು, ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಜವಾಬ್ದಾರಿ ಸರ್ಕಾರವು ಸೇರಿದಂತೆ ನಮ್ಮೆಲ್ಲರ ಮೇಲಿದ್ದು, ಆದರ್ಶ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಮೂಲಕ ವಿಸ್ತಾರ ಸುದ್ದಿವಾಹಿನಿ ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ.

ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಉತ್ತಮ ಸಂಸ್ಕಾರ ಹಾಗೂ ದೇಶಭಕ್ತಿಯನ್ನು ಎಲ್ಲಾ ಮಕ್ಕಳಲ್ಲಿಯೂ ಬೆಳೆಸಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಸುದ್ದಿವಾಹಿನಿಗಳು ಸಹ ಈ ಬಗ್ಗೆ ಬೆಳಕು ಚೆಲ್ಲುವುದು ಇಂದಿನ ತುರ್ತು ಅಗತ್ಯವಾಗಿದೆ ಎಂಬುದು ನನ್ನ ಮನದಾಳದ ಅಭಿಮತವಾಗಿದೆ.

ಸುದ್ದಿ ನೀಡುವುದರ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದಕ್ಕೆ ಮತ್ತೊಮ್ಮೆ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ತಮ್ಮ ವಾಹಿನಿಯಿಂದ ಇನ್ನಷ್ಟು ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳು ಮೂಡಿ ಬರಲಿ ಎಂದು ಹಾರೈಸುತ್ತೇನೆ.– ಎಂದು ಮನದುಂಬಿ ಹಾರೈಸಿದ್ದಾರೆ ಬಸವರಾಜ ಹೊರಟ್ಟಿ ಅವರು.

ಕಾರ್ಯಕ್ರಮದಲ್ಲೂ ಹೃದಯ ತುಂಬಿ ಮಾತನಾಡಿದ್ದರು ಹೊರಟ್ಟಿ

ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ, ಚಿತ್ರ ನಟಿ ತಾರಾ ಅನುರಾಧಾ, ವಿಧಾನ ಪರಿಷತ್‌ ಸದಸ್ಯ ನಾಗರಾಜ್‌ ಯಾದವ್‌ ಸೇರಿದಂತೆ ಹಲವಾರು ಶಿಕ್ಷಣ ತಜ್ಞರು ಸೇರಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೊರಟ್ಟಿ ಅವರು ತುಂಬ ಪ್ರೀತಿಯಿಂದ ಮಾತನಾಡಿದ್ದರು. ವಿಸ್ತಾರ ನ್ಯೂಸ್‌ನ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆಯವರ ಪರಿಕಲ್ಪನೆಗಳನ್ನು ಪ್ರಶಂಸಿಸಿದ್ದರು. ಇಂಥದೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗುವುದೇ ಭಾಗ್ಯ ಎಂದಿದ್ದರು.

ಶಿಕ್ಷಕ ವರ್ಗಕ್ಕೆ ಬೆಂಗಾವಲಾಗಿ ನಿಂತ ಮಾದರಿ ಸುದ್ದಿ ಸಂಸ್ಥೆ ವಿಸ್ತಾರ; ಹೊರಟ್ಟಿ ಪ್ರಶಂಸೆ

ವಿಸ್ತಾರ ನ್ಯೂಸ್‌ ಶಿಕ್ಷಕರ ಬೆನ್ನು ತಟ್ಟುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಒಂದು ಪ್ರಚಂಡ ಶಕ್ತಿಗೆ ಬೆಂಗಾವಲಾಗಿ ನಿಂತಿರುವುದನ್ನು ಜಗತ್ತಿಗೆ ಸಾರಿದೆ. ಈ ಮೂಲಕ ಇದೊಂದು ರಾಜ್ಯದ ಮಾದರಿ ಸುದ್ದಿ ಸಂಸ್ಥೆ ಎಂದು ಋಜುವಾತಾಗಿವೆ ಎಂದು ಬಸವರಾಜ ಹೊರಟ್ಟಿ ಅವರು ಸಮಾರಂಭದಲ್ಲಿ ಹೇಳಿದ್ದರು.
ಎಷ್ಟು ಹಣ ಕೊಟ್ಟರೂ ಸಿಗದ ನೆಮ್ಮದಿ ಇಲ್ಲಿ ಸಿಕ್ಕಿದೆ: ವಿಸ್ತಾರ ನ್ಯೂಸ್‌ ನೀಡಿರುವ ಈ ಪ್ರಶಸ್ತಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತೊಡಗಿಕೊಂಡಿರುವ ಇಂಥ ಸಾವಿರಾರು ಶಿಕ್ಷಕರಿಗೆ ಪ್ರೇರಣೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ನನ್ನಂಥವರಿಗೇ ಎಷ್ಟು ಹಣ ಕೊಟ್ಟರೂ ಸಿಗದಷ್ಟು ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರೆ ಶಿಕ್ಷಕರು ಎಂಥ ಸಾರ್ಥಕ ಭಾವವನ್ನು ಅನುಭವಿಸಿರಬಹುದು ಎಂದು ನೀವೇ ಯೋಚಿಸಿ ಎಂದು ಬಸವರಾಜ ಹೊರಟ್ಟಿ ಹೇಳಿದರು. ನಾನು ಶಿಕ್ಷಕನಾಗಿ ಸೇವೆಯನ್ನು ಸಲ್ಲಿಸಿ ನಂತರದ ಹೋರಾಟದ ಪ್ರತಿಫಲವಾಗಿ ಇಲ್ಲಿದ್ದೇನೆ ಎಂದು ನೆನಪಿಸಿಕೊಂಡಿದ್ದರು.

ಶಿಕ್ಷಕರು ಮಕ್ಕಳ ಬಗ್ಗೆ ತಂದೆ-ತಾಯಿಯಷ್ಟೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಪೋಷಕರು ಕೂಡಾ ಅಷ್ಟೇ ಹೊಣೆಗಾರಿಕೆಯನ್ನು ಹೊಂದಬೇಕು ಎಂದು ಅವರು ಕಿವಿಮಾತು ಹೇಳಿದರು. ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಮಾನಸಿಕ ನೆಮ್ಮದಿಯಿಂದ ಇದ್ದರೆ ಮಾತ್ರ ಉತ್ತಮ ಪಾಠ ಮಾಡಬಲ್ಲರು. ಸಮಾಜ ಮತ್ತು ಸರ್ಕಾರ ಅವರಿಗೆ ಅಂಥ ನೆಮ್ಮದಿಯನ್ನು ಒದಗಿಸಬೇಕು ಎಂದಿದ್ದರು ಬಸವರಾಜ ಹೊರಟ್ಟಿ.

ಒಂದು ಪ್ರಶಸ್ತಿಯನ್ನು ಪಡೆಯುವುದು ಎಷ್ಟು ಕಷ್ಟ.‌ ಅದಕ್ಕೆ ಎಷ್ಟು ವಶೀಲಿ ಮಾಡಬೇಕು ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ವಿಸ್ತಾರ ನ್ಯೂಸ್ ಯಾವುದೇ ಮುಲಾಜೇ ಇಲ್ಲದೆ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಆಯ್ಕೆ ಪ್ರಕ್ರಿಯೆಯನ್ನು, ಸಾಧಕರನ್ನು ಗುರುತಿಸಿದ್ದನ್ನು ಹೊರಟ್ಟಿ ಕೊಂಡಾಡಿದ್ದರು.

ಮಾಧ್ಯಮ ಸರಿಯಾಗಿ ಶ್ರಮಿಸಿದರೆ ದೇಶವನ್ನು ಬಹು ಎತ್ತರಕ್ಕೆ ಕೊಂಡೊಯ್ಯಬಹುದು. ವಿಸ್ತಾರ ನ್ಯೂಸ್‌ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಸಾಮಾಜಿಕ ಕಳಕಳಿಯನ್ನು ನಿಜಾರ್ಥದಲ್ಲಿ ಹೊಂದಿರುವ ವಿಸ್ತಾರ ನ್ಯೂಸ್‌ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದ್ದರು ಬಸವರಾಜ ಹೊರಟ್ಟಿ.

ಇದನ್ನು ಓದಿ : Vistara News Awards : ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌ ಪಡೆದ ಸಾಧಕ ಶಿಕ್ಷಕರು ಇವರೇ ನೋಡಿ..

Exit mobile version