Site icon Vistara News

ಕೊಡಿಸಿದ ಸಾಲ ಮರಳಿ ಕೇಳಿದ್ದಕ್ಕೆ ಬ್ಯಾಟ್‌ನಿಂದ ಹೊಡೆದ ಕೊಲೆ

killing

ಬೆಂಗಳೂರು: ಕೊಡಿಸಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ಬ್ಯಾಟ್‌ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ಮುನ್ನೆಕೊಳಲು ಸಮೀಪದ ಜೆಆರ್‌ಎಂ ಪರ್ಲ್‌ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

ವೆಂಕಟೇಶಪ್ಪ (65) ಕೊಲೆಯಾದ ದುರ್ದೈವಿ. ಇವರು ಶಿವಪ್ಪ ಅಲಿಯಾಸ್ ಮೇಷ್ಟ್ರು ಎಂಬವರಿಗೆ ನಂಜುಂಡರೆಡ್ಡಿ ಹಾಗೂ ಪ್ರಕಾಶ್ ಎಂಬವರ ಕಡೆಯಿಂದ ಸಾಲ‌ ಕೊಡಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಶಿವಪ್ಪ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಅದನ್ನು ಕೇಳಲೆಂದು ವೆಂಕಟೇಶಪ್ಪ ಸಾಲಗಾರರೊಂದಿಗೆ ಶಿವಪ್ಪನ ಅಪಾರ್ಟ್ಮೆಂಟ್ ಬಳಿ ಬಂದಿದ್ದರು. ಆ ವೇಳೆ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಅವರನ್ನು ಹತ್ಯೆ ಮಾಡಲಾಗಿದೆ.

ಈ ಕೊಲೆಯ ದೃಶ್ಯ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ ಜಾಗದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಶಿವಪ್ಪ ಸದ್ಯ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧಿಸುತ್ತಿದ್ದಾರೆ. ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Mother killed daughter | ಬಾತ್‌ಟಬ್‌ನಲ್ಲಿ ಮಗುವನ್ನು ಮುಳುಗಿಸಿ ಕೊಂದು ನೇಣು ಹಾಕಿಕೊಂಡ ತಾಯಿ

Exit mobile version