Site icon Vistara News

Murder Case : ದುಡ್ಡು ಕೊಡೋ ಎಂದವನ ಮುಖಕ್ಕೆ ಕಡಗದಿಂದ ಗುದ್ದಿ, ಚಪ್ಪಲಿಯಿಂದ ತುಳಿದು ಕೊಂದ ಸ್ನೇಹಿತ

Kumar swamy Murdered

ಬೆಂಗಳೂರು: ಹಣ ಕೊಡುವಂತೆ ದೊಂಬಲು ಬಿದ್ದು, ಕಾಟ ಕೊಡುತ್ತಿದ್ದ ಸ್ನೇಹಿತನ ಪ್ರಾಣವನ್ನೇ ತೆಗೆದಿದ್ದಾನೆ. ಕಳೆದ ಫೆಬ್ರವರಿ 2ರಂದು ಕ್ಯಾತಸಂದ್ರ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನ ಬರ್ಬರ ಕೊಲೆಯಾಗಿತ್ತು. ಹತ್ಯೆಯಾದವನ ಗುರುತು ಪತ್ತೆಯಾಗಿರಲಿಲ್ಲ. ತನಿಖೆಗೊಂಡ ಪೊಲೀಸರಿಗೆ ನಂತರ ದಿನದಲ್ಲಿ ಹತ್ಯೆಯಾದವನು ವಿಜಯನಗರದ ಕೂಡ್ಲಗಿ ಮೂಲದ ಕುಮಾರಸ್ವಾಮಿ ಎಂಬುದು (Murder case) ಪತ್ತೆಯಾಗಿತ್ತು.

ಆದರೆ ಆರೋಪಿ ಸುಳಿವು ಮಾತ್ರ ಸಿಕ್ಕಿಲಿಲ್ಲ. ಹೀಗಾಗಿ ಆರೋಪಿ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ತನಿಖೆ ನಡೆಸಿದಾಗ ಬಳ್ಳಾರಿಯ ಸುನೀಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಕುಮಾರಸ್ವಾಮಿ ಪದೇಪದೆ ಹಣಕ್ಕಾಗಿ ಪೀಡಿಸುತ್ತಿದ್ದ ಹೀಗಾಗಿ ಹತ್ಯೆ ಮಾಡಿದ್ದಾಗಿ ಸುನೀಲ್‌ ಬಾಯ್ಬಿಟ್ಟಿದ್ದಾನೆ.

ಕುಮಾರಸ್ವಾಮಿ ಹಾಗೂ ಸುನೀಲ್‌ ಇಬ್ಬರು ಪರಿಚಿತರಾಗಿದ್ದರು. ಆಗಾಗ ಈ ಕುಮಾರಸ್ವಾಮಿ ಹಣಕ್ಕಾಗಿ ಸುನೀಲ್‌ನನ್ನು ಪೀಡಿಸುತ್ತಿದ್ದ. ಹಲವು ಬಾರಿ ಹಣ ಕೊಟ್ಟು ಸುನೀಲ್‌ ಕೂಡ ಹೈರಾಣಾಗಿದ್ದ. ಹತ್ಯೆ ನಡೆದ ದಿನವು ಕ್ಯಾತಸಂದ್ರ ರೈಲ್ವೆ ನಿಲ್ದಾಣದಲ್ಲಿದ್ದಾಗ ಮತ್ತೆ ಹಣ ಕೊಡು ಎಂದು ಹಿಂದೆ ಬಿದ್ದಿದ್ದ. ಇದರಿಂದ ಸಿಟ್ಟಿಗೆದ್ದ ಸುನಿಲ್‌, ಕೈಯಲ್ಲಿದ್ದ ಕಡಗದಿಂದ ಕುಮಾರಸ್ವಾಮಿ ಮುಖಕ್ಕೆ ಗುದ್ದಿದ್ದ. ಗುದ್ದಿದ ರಭಸಕ್ಕೆ ಫ್ಲಾಟ್ ಫಾರ್ಮ್ ಮೇಲೆ ಬಿದ್ದ ಕುಮಾರಸ್ವಾಮಿ ಮುಖಕ್ಕೆ ಚಪ್ಪಲಿ ಕಾಲಿನಿಂದ ಹಲವು ಬಾರಿ ತುಳಿದು ಸುನೀಲ್‌ ಹಲ್ಲೆ ಮಾಡಿದ್ದ.

ಗಂಭೀರ ಗಾಯಗೊಂಡ ಕುಮಾರಸ್ವಾಮಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದ. ಇನ್ನು ಕೊಲೆ ಮಾಡಿ ಆರೋಪಿ ಸುನೀಲ್ ಅಲ್ಲಿಂದ್ದ ಕಾಲ್ಕಿತ್ತಿದ್ದ. ಇದೀಗ ತನಿಖೆ ನಡೆಸಿರುವ ಗ್ರಾಮಾಂತರ ರೈಲ್ವೇ ಪೊಲೀಸರು ಸುನೀಲ್‌ನನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Fraud Case : ಸ್ನೇಹಿತರೇ ಸುಲಿಗೆಕೋರರು; ಖಾಸಗಿ ಫೋಟೊ ಇದೆಯೆಂದು ಟೆಕ್ಕಿಯಿಂದ ಲಕ್ಷ ಲಕ್ಷ ಲೂಟಿ!

Murder Case : ಬೈಕ್‌ನಲ್ಲಿ ಬರುವಾಗ ಅಟ್ಯಾಕ್; ನಡು ರಸ್ತೆಯಲ್ಲೇ ಯುವಕನ ಕೊಲೆ, ಮತ್ತೊಬ್ಬ ಗಂಭೀರ

ಧಾರವಾಡ: ಯುವಕರಿಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ದಾಳಿ (Murder Case) ಮಾಡಿದ್ದಾರೆ. ಧಾರವಾಡದ ಡೈರಿ ರಸ್ತೆಯಲ್ಲಿ ತಡರಾತ್ರಿ ನಡೆದ ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ.

ಅರವಟಗಿ ಗ್ರಾಮದ ಕಲ್ಲನಗೌಡ ಪಾಟೀಲ್ ಹತ್ಯೆಯಾದವರು. ಸುನಿಲ್ ಜಕ್ಕನ್ನವರ ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಸುನೀಲ್‌, ಕಲ್ಲನಗೌಡ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಯುವಕರ ಗ್ಯಾಂಗ್‌ ಏಕಾಏಕಿ ಅಡ್ಡಗಟ್ಟಿದೆ. ನಂತರ ರಾಡ್ ತೆಗೆದು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.

ತಲೆಗೆ ಗಂಭೀರ ಗಾಯವಾಗಿದ್ದರಿಂದ ರಕ್ತಸ್ರಾವವಾಗಿ ಕಲ್ಲನಗೌಡ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾದ ಗಾಯಗೊಂಡಿರುವ ಸುನಿಲ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ದಾಳಿಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version