ಬೆಂಗಳೂರು: ಕಾಟನ್ ಪೇಟೆ ಫ್ಲವರ್ ಗಾರ್ಡನ್‌ನಲ್ಲಿ ನಡೆದಿದ್ದ ರೌಡಿ ಶಿವನ ಹತ್ಯೆ (Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸ್ ಇಲಾಖೆಯ ಸೂಪರ್ ಸ್ಟಾರ್ ” ರಾಣಾ”(Dog squad) ದಿಂದ ಕೊಲೆಗಾರರ ಪತ್ತೆ ಮಾಡಿದೆ. ಚಂದ್ರಶೇಖರ್ ಅಲಿಯಾಸ್ ಚೇಟಾ, ಶೇಖರ್ ಅಲಿಯಾಸ್ ಡೋರಿ, ಮಣಿ ಅಲಿಯಾಸ್ ಮಣಿಕಂಠ ಹಾಗೂ ಕಿರಣ್ ಅಲಿಯಾಸ್ ಚಿನ್ನಪ್ಪ, ಸ್ಟೀಫನ್ ಮತ್ತು ಸಿಂಬು ಸೇರಿ 6 ಮಂದಿಯನ್ನು ಬಂಧಿಸಿದ್ದಾರೆ.
ಶೇಖರ್ ಹಾಗೂ ಸಿಂಬು ಸಂಬಂಧಿಕರಾಗಿದ್ದು, ಮೃತ ಶಿವ ಹಾಗೂ ಆರೋಪಿಗಳೆಲ್ಲ ಒಂದೇ ಏರಿಯಾದ ನಿವಾಸಗಳಾಗಿದ್ದರು. ರೌಡಿ ಶಿವ ಸಿಕ್ಕ ಸಿಕ್ಕವರಿಗೆ ಆವಾಜ್ ಹಾಕುತ್ತಾ, ಎಲ್ಲರ ಮೇಲೆ ಹಲ್ಲೆ ಮಾಡಿ ಏರಿಯಾ ಬಿಡುವಂತೆ ಮಾಡಿದ್ದ.
ಇದರಿಂದ ಸಿಟ್ಟಿಗೆದ್ದ ಆರೋಪಿಗಳ ಗ್ಯಾಂಗ್ ಶಿವನನ್ನು ಮುಗಿಸಲು ಪ್ಲಾನ್ ಮಾಡಿದ್ದರು. ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದ ಸ್ಟೀಫನ್ ಜೈಲಿನಿಂದ ಇತ್ತೀಚೆಗಷ್ಟೆ ರಿಲೀಸ್ ಆಗಿದ್ದ. ಚಂದ್ರಶೇಖರ್ ಹಾಗೂ ಸಿಂಬು ಇಬ್ಬರು ಸ್ಟೀಫನ್ ಜತೆ ಸೇರಿ ಕೊಲೆಗೆ ಪ್ಲಾನ್ ಮಾಡಿದ್ದರು.
ಹಂತಕರು ಸ್ಕೆಚ್ ಹಾಕಿದ್ದಂತೆ ಒಂಟಿಯಾಗಿ ಸಿಕ್ಕ ಶಿವನನ್ನು ಲಾಂಗು ಮಚ್ಚಿನಿಂದ ಹಲ್ಲೆ ಮಾಡಿ ಕೊಚ್ಚಿ ಕೊಲೆ ಮಾಡಿದ್ದರು. ಹತ್ಯೆ ನಂತರ ಆರೋಪಿಗಳು ಏರಿಯಾ ಬಿಟ್ಟು ಪರಾರಿ ಆಗಿದ್ದರು. ಆದರೆ ಆರೋಪಿಗಳ ಹೆಜ್ಜೆ ಗುರುತನ್ನು ರಾಣಾ (ಶ್ವಾನ ದಳ) ಜಾಡು ಹಿಡಿದಿತ್ತು. ಅದರ ಆಧಾರದ ಮೇಲೆ ಆರು ಮಂದಿಯನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:Murder Case: ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ಅಲ್ತಾಫ್ ಖಾನ್ ಈಗ ಕೊಲೆ ಆರೋಪಿ
ಶಿವರಾತ್ರಿ ದಿನವೇ ಶಿವನ ಪಾದ ಸೇರಿದ್ದ ರೌಡಿ ಶಿವ
ಮಾರ್ಚ್ 8ರ ಶಿವರಾತ್ರಿ ದಿನವೇ ಶಿವ ಅಲಿಯಾಸ್ ವರ್ತೆ ಎಂಬಾತನ ಬರ್ಬರ ಹತ್ಯೆ ಆಗಿತ್ತು. ಶಿವ ಅಲಿಯಾಸ್ ಕಾಟನ್‌ಪೇಟೆ ಶಿವ ಅಲಿಯಾಸ್ ವರ್ತೆ ಎಂಬ ಹೆಸರಿನ ಈತ ಕಾಟನ್ ಪೇಟೆ ಠಾಣೆ ರೌಡಿಶೀಟರ್ ಆಗಿದ್ದ. ಕಾಟನ್ ಪೇಟೆಯ ಅಂಜನಪ್ಪ ಗಾರ್ಡನ್‌ನಲ್ಲಿ ಹಂತಕರ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.
ಹಳೆಯ ದ್ವೇಷ ಹಾಗೂ ಸ್ಥಳೀಯ ಗ್ಯಾಂಗ್‌ಗಳ ನಡುವಿನ ತಿಕ್ಕಾಟವೇ ಈ ಕೊಲೆಗೆ ಕಾರಣ ಎಂದು ಶಂಕಿಸಲಾಗಿತ್ತು. ಲೋಕಲ್ ವ್ಯಾಪಾರಿಗಳ ಮೇಲೆ ಸ್ವಾಮ್ಯಕ್ಕೆ ಪ್ರಯತ್ನಿಸುತ್ತಿದ್ದ ಶಿವನ ಮೇಲೆ ಎದುರಾಳಿ ಗ್ಯಾಂಗ್‌ನ ಕಣ್ಣಿತ್ತು ಎನ್ನಲಾಗಿದೆ. ಸಿಸಿಟಿವಿ ಫೂಟೇಜ್‌ಗಳ ಆಧಾರದಲ್ಲಿ ಕೊಲೆಗಾರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ