ಬೆಂಗಳೂರು: ಸೈಟ್ ವಿಚಾರಕ್ಕೆ ಗಲಾಟೆ ಶುರುವಾಗಿ ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಬೆಂಗಳೂರಿನ ಕೊಡಿಗೆಹಳ್ಳಿ ಬಳಿಯ ಎನ್‌ಟಿಐ ಲೇಔಟ್‌ನಲ್ಲಿ (Bengaluru Crime) ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪ್ರಕಾಶ್ ಮೃತ ದುರ್ದೈವಿ.
ಪ್ರಕಾಶ್‌ಗೆ ಸೇರಿದ ಸೈಟ್‌ವೊಂದು ಎನ್‌ಟಿಐ ಕಾಲೋನಿಯಲ್ಲಿದೆ. ಈ ಸೈಟ್ ಸಂಬಂಧ ತಕರಾರು ಇರುವುದರಿಂದ ಕೋರ್ಟ್‌ನಲ್ಲಿ ಕೇಸ್ ಸಹ ನಡಿತಿದೆ. ಹಲವು ದಿನಗಳಿಂದ ಪ್ರಕಾಶ್ ಹಾಗೂ ನಾಗರಾಜ್ ಎಂಬುವವರ ನಡುವೆ ಸೈಟ್ ವಿಚಾರವಾಗಿ ಗಲಾಟೆ ನಡೆಯುತ್ತಲೇ ಇತ್ತು.
ಇದೇ ವಿಚಾರಕ್ಕೆ ಸೋಮವಾರವು ನಾಗರಾಜ್ ಮತ್ತು ಪ್ರಕಾಶ್ ನಡುವೆ ಮತ್ತೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಒಬ್ಬರಿಗೊಬ್ಬರು ಕೈಕೈ ಮೀಲಾಯಿಸಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ನಾಗರಾಜ್ ಕುಟುಂಬಸ್ಥರೇ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ, ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬರ್ತ್‌ಡೇ ಪಾರ್ಟಿಯಲ್ಲಿ ಹೆಣವಾದ ಯುವಕ
ಬೆಂಗಳೂರಿನ ನೆಲಮಂಗಲ ಸಮೀಪದ ಅರಶಿನಕುಂಟೆ ಬಳಿ ಬರ್ತ್‌ಡೇ ಪಾರ್ಟಿಯಲ್ಲಿ ಯುವಕನೊರ್ವ ಹೆಣವಾಗಿದ್ದಾನೆ. ಅಶೋಕ್ ಅಲಿಯಾಸ್ ಮಂಡ್ಲಾ ಕೊಲೆಯಾದವನು. ಬೆಂಗಳೂರಿನ ಲಗ್ಗೆರೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಅಶೋಕ್ , ಸ್ನೇಹಿತನ ಬರ್ತ್‌ಡೇ ಪಾರ್ಟಿಗೆ ತೆರಳಿದ್ದ. ಕೇಕ್ ಕತ್ತರಿಸಿ, ಕುಡಿಯಲು ಶುರು ಮಾಡಿದ ಸ್ನೇಹಿತರ ನಡುವೆ ಕಿರಿಕ್ ಶುರುವಾಗಿದೆ. ಕುಡಿದ ಅಮಲಿನಲ್ಲಿ ಸ್ನೇಹಿತರ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ಸ್ಥಳಕ್ಕೆ ನೆಲಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: Hit And Run : ಹಿಂಬದಿಯಿಂದ ಡಿಕ್ಕಿ ಹೊಡೆದು, ಸವಾರನ ತಲೆ ಮೇಲೆ ಹರಿದ ಕೆಎಸ್‌ಆರ್‌ಟಿಸಿ
ಕುಡಿಯಲು ಹಣ ಕೊಡದ್ದಕ್ಕೆ ಕಲ್ಲು ಎತ್ತಿಹಾಕಿದ ಪತಿ
ಮದ್ಯಪಾನಕ್ಕೆ ಹಣ ನೀಡಿಲ್ಲವೆಂದು ಪತ್ನಿ ಮೇಲೆ ಕುಡುಕ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ಗುಡ್ಡದ ಕೊಮರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕದರಪ್ಪ (60) ಎಂಬಾತ ಪತ್ನಿ ಮೇಲೆ ಕಲ್ಲು ಎತ್ತಿ ಹಾಕಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಸಾಕಮ್ಮ (55) ಹಲ್ಲೆಗೊಳಗಾದ ದುರ್ದೈವಿ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಇದ್ದಲ ನಾಗೇನಹಳ್ಳಿ ಗ್ರಾಮದ ಕದರಪ್ಪ ಮತ್ತು ಸಾಕಮ್ಮ ದಂಪತಿ, ಕುರಿ ಮೇಯಿಸುತ್ತ ಗುಡ್ಡದ ಕೊಮರನಹಳ್ಳಿಗೆ ಬಂದಿದ್ದಾರೆ. ಈ ವೇಳೆ ಕುಡಿತಕ್ಕಾಗಿ ಹಣ ನೀಡುವಂತೆ ಪತ್ನಿಗೆ ಕದರಪ್ಪ ಪೀಡಿಸಿದ್ದಾನೆ. ಸಾಕಮ್ಮ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕಲ್ಲು ಎತ್ತಿಹಾಕಿ ಹಲ್ಲೆ ನಡೆಸಿದ್ದಾನೆ.
ತೀವ್ರಗಾಯಗೊಂಡು ನರಳಾಡುತ್ತಿದ್ದ ಸಾಕಮ್ಮನನ್ನು ಅಲ್ಲಿದ್ದ ಸಹ ಕುರಿಗಾಯಿಗಳು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಾರಣಾಂತಿಕ ಹಲ್ಲೆಯಿಂದಾಗಿ ಸಾಕಮ್ಮ ಕೋಮಾಗೆ ಹೋಗಿದ್ದಾಳೆ. ಸದ್ಯ ದಾವಣಗೆರೆ ಎಸ್‌ಎಸ್ ಹೈಟೆಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಕುಡುಕ ಕದರಪ್ಪ ಘಟನೆ ನಡೆಯುತ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಸವಾಪಟ್ಟಣ ಪೊಲೀಸರು ಮುಂದಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ