Site icon Vistara News

Murder Case | 24 ಬಾರಿ ಕಲ್ಲು ಎತ್ತಿಹಾಕಿ ಯುವಕನ ಕೊಲೆ; ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಇಲ್ಲಿನ ಕೆ.ಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬನನ್ನು ಗುಂಪೊಂದು ಕಲ್ಲಿನ ಜಜ್ಜಿ ಕೊಲೆ (Murder Case) ಮಾಡಿದ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ಕೆ.ಪಿ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಹುಡುಕಾಟ ನಡೆಸಿದ್ದರು. ಎರಡು ದಿನಗಳ ಬಳಿಕ ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರೇಮವ್ವ, ಅಕ್ಕಮಹಾದೇವಿ, ಮಂಜುನಾಥ್, ಕಿರಣ್, ಚೆನ್ನಪ್ಪ ಹಾಗೂ ಕಾಶಿನಾಥ್ ಬಂಧಿತ ಆರೋಪಿಗಳಾಗಿದ್ದು, ಕೆ.ಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಮಂಜುನಾಥ್ ಎಂಬಾತನನ್ನು ಕೊಲೆ ಮಾಡಿ ಪರಾರಿ ಆಗಿದ್ದರು. ತಲೆ ಮೇಲೆ ಸುಮಾರು 24 ಬಾರಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು.

ಪ್ರಕರಣದ ಎ1 ಆರೋಪಿ ಸರೋಜಾ ಎಂಬಾಕೆ ಜತೆ ಮಂಜುನಾಥ್ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಕಾರಣಾಂತರಗಳಿಂದ ಇಬ್ಬರು ಕೆಲ ದಿನಗಳ ಹಿಂದಷ್ಟೇ ದೂರ ಆಗಿದ್ದರಂತೆ. ಆದರೂ, ಸರೋಜಾಗೆ ಪದೇಪದೆ ಕರೆ ಮಾಡುತ್ತಿದ್ದಂತೆ. ಹೀಗಾಗಿ ಮಾತನಾಡುವ‌ ನೆಪದಲ್ಲಿ ಕರೆ ಮಾಡಿ ಕರೆಸಿ ಬಳಿಕ ಎಲ್ಲರೂ ಸೇರಿ ಕೊಲೆ ಮಾಡಿದ್ದಾರೆ. ಸದ್ಯ ಆರೋಪಿ ಸರೋಜಾ ತಲೆಮರೆಸಿಕೊಂಡಿದ್ದು, ಈಕೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ | Road accident | ರೋಡ್‌ ಹಂಪ್‌ ಗೊತ್ತಾಗದೆ ಹಾರಿ ಬಿದ್ದು ಟಾಟಾ ಏಸ್‌ಗೆ ಬಡಿದ ಸ್ಕೂಟರ್‌: ಇಬ್ಬರು ಸ್ಥಳದಲ್ಲೇ ಸಾವು

Exit mobile version