Site icon Vistara News

Namma Metro : ಮುಂಬೈ ಲೋಕಲ್‌ ಟ್ರೈನ್‌ನಂತಾಯ್ತು ನಮ್ಮ ಮೆಟ್ರೋ; ಹತ್ತಕ್ಕಾಗಲ್ಲ, ಇಳಿಯೋಕ್ಕಾಗಲ್ಲ!

Nam Metro Rail Rush In bengaluru

ಬೆಂಗಳೂರು: ಮುಂಜಾನೆ, ಮುಸ್ಸಂಜೆ ವೇಳೆ ನಮ್ಮ ಮೆಟ್ರೋ ರೈಲಿನಲ್ಲಿ ಕಾಲಿಡಲು ಆಗದಷ್ಟು ಜನಸಂದಣಿ ಹೆಚ್ಚಾಗಿದೆ. ನಮ್ಮ ಮೆಟ್ರೋ ವಿಸ್ತೃತ ನೇರಳೆ ಮಾರ್ಗ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ವಿಸ್ತರಿತಗೊಂಡಿದ್ದೆ ತಡ ರೈಲಿನಲ್ಲಿ ಜನರು ತುಂಬಿ (Namma Metro) ತುಳುಕುತ್ತಿರುತ್ತಾರೆ. ಸದ್ಯ ಬೆಂಗಳೂರು ನಮ್ಮ ಮೆಟ್ರೋ ರೈಲು ಮುಂಬೈ ಲೋಕಲ್‌ ಟ್ರೈನ್‌ ರೀತಿ ಆಗಿದೆ ಎಂದು ವಿಡಿಯೊವೊಂದನ್ನು ಹಾಕಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಜಧಾನಿ ಬೆಂಗಳೂರಲ್ಲಿ ಬಿಎಂಟಿಸಿಯಷ್ಟೇ (Bmtc bus) ಮೆಟ್ರೋ ರೈಲು (Metro rail) ಕೂಡ ಜನರ ಜೀವನಾಡಿಯಾಗಿದೆ. ಟ್ರಾಫಿಕ್‌ ಕಿರಿಕಿರಿಗೆ (Bengaluru Traffic) ಬಹುತೇಕ ದೂರ ಪ್ರಯಾಣ ಮಾಡುವ ಮಂದಿ ಮೆಟ್ರೋ (Bengaluru Metro) ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಈಗಾಗಲೇ ಸಂಚಾರ ನಡೆಸುತ್ತಿರುವ ನಮ್ಮ ಮೆಟ್ರೋ (Namma Metro) ವಿಸ್ತೃತ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಅಧಿಕೃತವಾಗಿ ಉದ್ಘಾಟಿಸಿದ್ದಾರೆ.

ಇದನ್ನೂ ಓದಿ: Assault Case : ರಕ್ತ ಚಿಮ್ಮುವಂತೆ ಗುಂಪುಗಳ ನಡುವೆ ಹೊಡೆದಾಟ ಬಡಿದಾಟ!

ವೈಟ್‌ಫೀಲ್ಡ್‌ನಲ್ಲಿರುವ ನೂರಾರು ಐಟಿ ಕಂಪನಿಗಳ ಉದ್ಯೋಗಿಗಳು ರಾಜಧಾನಿಯ ಬೇರೆಬೇರೆಡೆಯಿಂದ ಮೆಟ್ರೋ ಮೂಲಕ ಆಗಮಿಸಲು ನೇರಳೆ ಮಾರ್ಗ ಅವಕಾಶ ಕಲ್ಪಿಸಿಕೊಟ್ಟಿದೆ. ಹಾಗೆಯೇ ಚಲ್ಲಘಟ್ಟ ಸಮೀಪವೇ ಇರುವ ಆರ್‌ಆರ್‌ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಿಧ್ಯಾರ್ಥಿಗಳು, ಸಿಬ್ಬಂದಿ, ರೋಗಿಗಳಿಗೂ ಇದರಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ವಿಸ್ತೃತ ಮಾರ್ಗದಿಂದಾಗಿ ಐಟಿ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಸಂತಸವಾಗಿದೆ.

ಮುಂಜಾನೆಯದ್ದು ನಮ್ಮ ಮೆಟ್ರೋ ರೈಲಿನೊಳಗೆ ಹೋಗಲು ಸಾಧ್ಯವಾಗದಷ್ಟು ಜನರಿಂದ ಕಿಕ್ಕಿರಿದ ದಟ್ಟಣೆಯನ್ನು ಮುಂಬೈ ಲೋಕಲ್‌ ರೈಲುಗಳಿಗೆ ಹೋಲಿಸಿದ್ದಾರೆ. ಬೆಂಗಳೂರು ಮತ್ತೊಂದು ಮುಂಬೈ ರೀತಿ ಆಗುತ್ತಿದೆ ಎಂದು ವರ್ಣಿಸಿದ್ದಾರೆ. ಇದರೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಕರಿಂದ ಪ್ಯಾಕ್‌ ಆಗಿದ್ದರೂ ಬೆಂಗಳೂರಲ್ಲಿ ಟ್ರಾಫಿಕ್‌ ಸಮಸ್ಯೆ ಮಾತ್ರ ಕಡಿಮೆ ಆಗಿಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ. ಕೆಲವರು ನಮ್ಮ ಮೆಟ್ರೋ ರೈಲನ್ನು ಮುಂಬೈ Pro ಎಂದಿದ್ದಾರೆ.

ಜನರು ಇಷ್ಟು ನೂಕುನುಗ್ಗಲಿನಲ್ಲೇ ಪ್ರಯಾಣಿಸುವಾಗ ನಮ್ಮ ಮೆಟ್ರೋ ಅಧಿಕಾರಿಗಳು ಹೆಚ್ಚುವರಿ ರೈಲುಗಳನ್ನು ಬಿಡುವಂತೆಯು ಒತ್ತಾಯ ಕೇಳಿ ಬಂದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version