Site icon Vistara News

Namma Metro: ಟಿಸಿಎಸ್‌ ಮ್ಯಾರಥಾನ್‌ ಹಿನ್ನೆಲೆ ಭಾನುವಾರ ಮುಂಜಾನೆ 3.35ರಿಂದಲೇ ಮೆಟ್ರೋ ರೈಲು ಸೇವೆ

Namma Metro

ಬೆಂಗಳೂರು: ನಗರದಲ್ಲಿ ಏಪ್ರಿಲ್​ 28ರಂದು ಭಾನುವಾರ ಬೆಳಗ್ಗೆ ಆಯೋಜಿಸಿರುವ ಟಿಸಿಎಸ್‌ ವರ್ಲ್ಡ್ 10K ಮ್ಯಾರಥಾನ್‌ನಲ್ಲಿ ಭಾಗವಹಿಸುವವರಿಗೆ ನಮ್ಮ ಮೆಟ್ರೋ (Namma Metro) ಸಿಹಿ ಸುದ್ದಿ ನೀಡಿದೆ. ನಗರದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್​ ಷಾ ಪರೇಡ್ ಮೈದಾನದಲ್ಲಿ ಟಿಸಿಎಸ್‌ ವರ್ಲ್ಡ್ 10K ಮ್ಯಾರಥಾನ್ (TCS World 10K Bengaluru 2024) ಶುರುವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ನಮ್ಮ ಮೆಟ್ರೋ ರೈಲು ಸೇವೆ ಮುಂಜಾನೆ 3.35ರಿಂದಲೇ ಆರಂಭವಾಗಲಿದೆ.

ಸಾಮಾನ್ಯವಾಗಿ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ. ಆದರೆ, ಟಿಸಿಎಸ್‌ ಮ್ಯಾರಥಾನ್‌ ಪ್ರಯುಕ್ತ ಮುಂಜಾನೆ 3:35ರಿಂದ 4.25ರವರೆಗೆ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ.

ಮೆಟ್ರೊ ರೈಲಿನ ಎಲ್ಲ ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ, ನಾಗಸಂದ್ರದಿಂದ ರೇಷ್ಮೆ ಸಂಸ್ಥೆ. ಚಲ್ಲಘಟ್ಟದಿಂದ ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ವರೆಗೆ ರೈಲುಗಳು ಸಂಚರಿಸಲಿವೆ. ಮುಂಜಾನೆ 3.35 ರಿಂದ 4.25 ಗಂಟೆಯ ಸಮಯದಲ್ಲಿ 10 ನಿಮಿಷಗಳ ಆವರ್ತನದಲ್ಲಿ ರೈಲು ಸಂಚರಿಸಲಿದೆ ಎಂದು ನಮ್ಮ ಮೆಟ್ರೊ ಮಾಹಿತಿ ನೀಡಿದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಂ.ಜಿ ರಸ್ತೆ ಕಡೆಗೆ ಮೊದಲ ರೈಲು ಸೇವೆಯು ಬೆಳಗ್ಗೆ 4.10 ಗಂಟೆಗೆ ಪ್ರಾರಂಭವಾಗಲಿದೆ. ನಂತರ 10 ನಿಮಿಷಗಳ ಅಂತರದಿಂದ ಬೆಳಿಗ್ಗೆ 5.00 ಗಂಟೆಯವರೆಗೆ ರೈಲುಗಳು ಸಂಚರಿಸಲಿದೆ. ಆ ನಂತರ ರೈಲುಗಳು ಜನರ ದಟ್ಟಣೆಯ ಅನುಗುಣವಾಗಿ ಚಲಿಸುತ್ತವೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: Namma Metro : ನಮ್ಮ ಮೆಟ್ರೊ ವಿಸ್ತೃತ ನೇರಳೆ ಮಾರ್ಗ ಲೋಕಾರ್ಪಣೆ ಮಾಡಿದ ಮೋದಿ; ಏನಿದರ ವಿಶೇಷತೆ?

10K ಓಟದಲ್ಲಿ ಭಾಗವಹಿಸಲು ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮೆಟ್ರೊ ಅಧಿಕಾರಿಗಳು ವಿನಿಂತಿ ಮಾಡಿದ್ದಾರೆ. ಸಾರ್ವಜನಿಕರು ನಗದು ರಹಿತ QR ಟಿಕೆಟ್‌ಗಳನ್ನು ಖರೀದಿಸಿ ಪ್ರಯಾಣಿಸುವಂತೆ ಬಿ.ಎಂ.ಆರ್.ಸಿ.ಎಲ್ ಹೇಳಿದೆ.

ಏ.28ರಂದು ಬೆಳಗ್ಗೆ ರಾಜಧಾನಿಯ ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

ಬೆಂಗಳೂರು: ನಗರದಲ್ಲಿ ಏಪ್ರಿಲ್ 28ರಂದು ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್‌ (TCS World 10K Bengaluru 2024) ನಡೆಯುವ ಹಿನ್ನೆಲೆಯಲ್ಲಿ ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಬೆಳಗ್ಗೆ 4 ಗಂಟೆಯಿಂದ 10 ಗಂಟೆಯವರೆಗೆ ಮ್ಯಾರಥಾನ್‌ ನಡೆಯಲಿದ್ದು, ಸುಮಾರು 25,000 ಜನರು ಭಾಗವಹಿಸಲಿದ್ದಾರೆ. ಮ್ಯಾರಥಾನ್ ಸಲುವಾಗಿ ವಾಹನಗಳ ಸುಗಮ ಸಂಚಾರಕ್ಕಾಗಿ ಹಲವೆಡೆ ವಾಹನ ನಿಲುಗಡೆ ನಿರ್ಬಂಧ ಹಾಗೂ ಮಾರ್ಗ ಬದಲಾವಣೆ (Traffic Restrictions) ಮಾಡಿದ್ದು, ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಬೇಕು ಎಂದು ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗ ಮಾಹಿತಿ ನೀಡಿದೆ.

ವಾಹನ ಸಂಚಾರ ನಿರ್ಬಂಧಿಸಲಾಗಿರುವ ರಸ್ತೆಗಳು

  1. ವಿಧಾನಸೌಧದ ಕಡೆಗೆ ಸಂಚರಿಸುವ ವಾಹನಗಳನ್ನು ಕೆ.ಆರ್ ಸರ್ಕಲ್‌ನಲ್ಲಿ ಮಾರ್ಗ ಬದಲಾಯಿಸಿ ಪೊಲೀಸ್ ಕಾರ್ನರ್ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ವಿಧಾನಸೌಧದ ಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.(ಬೆಳಗ್ಗೆ 4 ರಿಂದ 8 ರವರೆಗೆ)
  2. ಬಾಳೇಕುಂದ್ರಿ ವೃತ್ತದಿಂದ ವಿಧಾನಸೌಧದ ಕಡೆಗೆ ಬರುವ ವಾಹನಗಳನ್ನು ಬಾಳೇಕುಂದ್ರಿ ಜಂಕ್ಷನ್‌ನಲ್ಲಿ ಮಾರ್ಗ ಬದಲಾಯಿಸಿ ಕನ್ನಿಂಗ್‌ಹ್ಯಾಮ್ ರಸ್ತೆ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ. (ಬೆಳಗ್ಗೆ 4 ರಿಂದ 8 ವರೆಗೆ)
  3. ಕಬ್ಬನ್‌ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಯಿಂದ ಸಿ.ಟಿ.ಓ. ವೃತ್ತದವರೆಗೆ ಎರಡೂ ಕಡೆಯಲ್ಲೂ ವಾಹನ
    ಸಂಚಾರ ನಿರ್ಬಂಧಿಸಿದೆ.(ಬೆಳಗ್ಗೆ 4 ರಿಂದ 10:30 ರವರೆಗೆ)
  4. ಕಾಫಿಬೋರ್ಡ್ ನಿಂದ ಬರುವ ಎಲ್ಲಾ ವಾಹನಗಳು ಸಿ.ಟಿ.ಓ ಸರ್ಕಲ್ ಕಡೆಗೆ ಚಲಿಸಲು ಅವಕಾಶವಿರುವುದಿಲ್ಲ. ಟ್ರಾಫಿಕ್ ಹೆಡ್‌ಕ್ವಾರ್ಟರ್ ಜಂಕ್ಷನ್‌ನಿಂದ ನೇರವಾಗಿ ಚಲಿಸುವುದು.(ಬೆಳಗ್ಗೆ 4 ರಿಂದ 10:00)

ಈ ಕೆಳಕಂಡಲ್ಲಿ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ

  1. ಇಂದಿರಾನಗರ, ಕೆ.ಆರ್.ಪುರಂ, ವೈಟ್ ಪೀಲ್ಡ್‌ನಿಂದ ಬರುವ ವಾಹನಗಳ ಸಂಚಾರವನ್ನು ಆಂಜನೇಯ ಜಂಕ್ಷನ್‌ನಲ್ಲಿ ಹಲಸೂರು ಲೇಕ್ ಕಡಗೆ ಬಲತಿರುವನ್ನು ನಿಷೇಧಿಸಲಾಗಿರುತ್ತದೆ.
  2. ಸಿಂಧಿ ಕಾಲೋನಿ ಜಂಕ್ಷನ್‌ನಲ್ಲಿ ಅಸ್ಸಾಯೇ ರಸ್ತೆಗೆ ಹೋಗುವ ಎಲ್ಲಾ ರೀತಿಯ ವಾಹನಗಳನ್ನು ನಿರ್ಬಂಧಿಸಿ ವೀಲರ್ಸ್ ರಸ್ತೆ, ಸೆಂಟ್‌ಜಾನ್ಸ್ ಚರ್ಚ್ ರಸ್ತೆ ಮುಖಾಂತರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
  3. ಕೀರ್ತಿ ಸಾಗರ್ ಜಂಕ್ಷನ್‌ನಲ್ಲಿ ಅಸ್ಸಾಯೆ ರಸ್ತೆಗೆ ಹೋಗುವ ಎಲ್ಲಾ ರೀತಿಯ ವಾಹನಗಳನ್ನು ನಿರ್ಬಂಧಿಸಿ ವೀಲರ್ಸ್ ರಸ್ತೆ, ಸೆಂಟ್‌ಜಾನ್ಸ್ ಚರ್ಚ್ ರಸ್ತೆ ಮುಖಾಂತರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
  4. ಥಾಮ್ಸ್ ಬೇಕರಿ ಜಂಕ್ಷನ್‌ನಲ್ಲಿ ಅಸ್ಸಾಯೆ ರಸ್ತೆ ಮತ್ತು ನಾಗಾ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳನ್ನು ನಿರ್ಬಂಧಿಸಿ ವೀಲರ್ಸ್ ರಸ್ತೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮುಖಾಂತರ ವಾಹನಗಳ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
    ನಾಗಾ ಜಂಕ್ಷನ್‌ನಲ್ಲಿ ಸೆಂಟ್ ಜಾನ್ಸ್ ರಸ್ತೆಗೆ ಮತ್ತು ಹಲಸೂರು ಕೆರೆ ಕಡೆಗೆ ಹೋಗುವ ವಾಹನಗಳನ್ನು ನಿರ್ಬಂಧಿಸಿ ಸೆಂಟ್ ಜಾನ್ಸ್ ಚರ್ಚ್ ರಸ್ತೆ ಹಾಗೂ ಪ್ರೊಮೈಡ್ ರಸ್ತೆ ಮುಖಾಂತರ ವಾಹನಗಳ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
  5. ಲಾವಣ್ಯ ಜಂಕ್ಷನನಲ್ಲಿ ಶ್ರೀ ಸರ್ಕಲ್ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳನ್ನು ನಿರ್ಬಂಧಿಸಿ ಎಸ್.ಸಿ. ಗಾರ್ಡನ್ ಮುಖಾಂತರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಭಾರೀ ವಾಹನಗಳ ಮಾರ್ಗ ಬದಲಾವಣೆ

ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು

  1. ಮ್ಯಾರಥಾನ್‌ನಲ್ಲಿ ಭಾಗವಹಿಸಲು ಬರುವ ವಾಹನಗಳಿಗೆ:
  2. ಕಂಠೀರವ ಕ್ರೀಡಾಂಗಣ
  3. ಒನ್ ಎಂ.ಜಿ ಮಾಲ್
  4. ಗರುಡಾ ಮಾಲ್
  5. ಆರ್ಮಿ ಪಬ್ಲಿಕ್ ಸ್ಕೂಲ್ (ಹಿರಿಯ ನಾಗರೀಕರ ಮತ್ತು ಬಸ್ಸುಗಳಿಗಾಗಿ)
  6. ಮಣಿಪಾಲ್ ಸೆಂಟರ್ (ಮಾಧ್ಯಮದ ವಾಹನಗಳಿಗೆ)

ಇದನ್ನೂ ಓದಿ | Namma Metro: ಅಡಚಡಣೆಗಾಗಿ ಕ್ಷಮಿಸಿ; ಮೆಟ್ರೋ ಕಾಮಗಾರಿಗಾಗಿ ಈ ರೂಟ್‌ನಲ್ಲಿ 1 ವರ್ಷ ವಾಹನ ಓಡಾಟವಿಲ್ಲ

ವಾಹನ ಪಾರ್ಕಿಂಗ್‌ ನಿರ್ಬಂಧಿತ ಸ್ಥಳಗಳು

  1. ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ
  2. ಕೆ.ಬಿ. ರಸ್ತೆ
  3. ನೃಪತುಂಗ ರಸ್ತೆ
  4. ಕ್ಲೀನ್ಸ್ ರಸ್ತೆ
  5. ರಾಜಭವನ ರಸ್ತೆ
  6. ಮ್ಯೂಸಿಯಂ ರಸ್ತೆ
  7. ಕಬ್ಬನ್ ರಸ್ತೆ,
  8. ಡಾ. ಬಿ.ಆ‌ರ್. ಅಂಬೇಡ್ಕರ್ ರಸ್ತೆ
  9. ಗೋಪಾಲಗೌಡ ವೃತ್ತ
  10. ಡಿಸ್ಪೆನ್ಸರಿ ರಸ್ತೆ
  11. ಡಿಕೆನ್ಸನ್ ರಸ್ತೆ
  12. ಸೆಂಟ್ ಜಾನ್ಸ್ ರಸ್ತೆ
  13. ಅಜಂತಾ ರಸ್ತೆ
  14. ಅಣ್ಣಾಸ್ವಾಮಿ ಮೊದಲಿಯಾರ್ ರಸ್ತೆ
    ಎಂ.ಜಿ.ರಸ್ತೆ
  15. ಕಮೀಷರಿಯೇಟ್ ರಸ್ತೆ
  16. ಮಗರತ್ ರಸ್ತೆ,
  17. ಬ್ರಿಗೇಡ್ ರಸ್ತೆ
  18. ಎ.ಎಸ್.ಸಿ ಸೆಂಟರ್‌ನಿಂದ ರಿಚ್ ಮಂಡ್ ಸರ್ಕಲ್
    ವರೆಗೆ
  19. ವೆಬ್ ಜಂಕ್ಷನ್‌ನಿಂದ ಅಡಿಗಾಸ್ ವರೆಗೆ
  20. ಭಾಸ್ಕರನ್ ರಸ್ತೆ
  21. ಗಂಗಾಧರ್ ಚೆಟ್ಟಿ ರಸ್ತೆ.
  22. ವಾರ್ ಮೆಮೋರಿಯಲ್ ರಸ್ತೆ,
  23. ರೆಸಿಡೆನ್ಸಿ ರಸ್ತೆ
  24. ಎ.ವಿ.ಎಂ. ರಸ್ತೆ
  25. ಗುರುದ್ವಾರ ರಸ್ತೆ
Exit mobile version