ಬೆಂಗಳೂರು: ಕೆಳಗೆ ಬಿದ್ದ ಮೊಬೈಲ್ (Mobile Phone) ತೆಗೆದುಕೊಳ್ಳಲು ಮಹಿಳೆಯೊಬ್ಬಳು ಅಪಾಯವನ್ನು ಲೆಕ್ಕಿಸದೇ ಹೈವೋಲ್ಟೇಜ್ ಇರುವ ಮೆಟ್ರೋ ಟ್ರ್ಯಾಕ್ಗೆ ಜಿಗಿದ (Namma Metro) ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದಿನೇದಿನೆ ಮೊಬೈಲ್ ಜತೆಗಿನ ನಂಟು ಜನರಲ್ಲಿ ಹೆಚ್ಚಾಗುತ್ತಿದೆ. ಮೊಬೈಲ್ ಕೈಯಲ್ಲಿ ಇದ್ದರೆ ಪ್ರಪಂಚಾನೆ ಮರೆತು ಹೋಗುವಷ್ಟು ಅತಿರೇಕಕ್ಕೆ ಜನ ತಲುಪಿದ್ದಾರೆ. ಕೈ ಹಿಡಿದ ಗಂಡನ ಬಿಟ್ಟರು, ಕೈಯಲ್ಲಿರುವ ಮೊಬೈಲ್ ಬಿಡದ ಮನಸ್ಥಿತಿ ಎಲ್ಲರಲ್ಲೂ ಇದೆ. ಬೆಳಗ್ಗೆ ಎದ್ದು ದೇವರ ಮುಖ ನೋಡುತ್ತಾರೋ ಇಲ್ವೋ ಆದರೆ ಪಕ್ಕದಲ್ಲಿರುವ ಮೊಬೈಲ್ ಕಣ್ಣಿಗೆ ಬೀಳಲೇಬೇಕು.
ಸದ್ಯ ಮೊಬೈಲ್ ಹಿಡಿಯದ ಮುಖಗಳೇ ಇಲ್ಲ ಪರಿಸ್ಥಿತಿ ನಿರ್ಮಾಣವಾಗಿದೆ. ಮೊಬೈಲ್ ಜತೆಗಿನ ನಂಟು ಒಮ್ಮೊಮ್ಮೆ ಪ್ರಾಣಕ್ಕೂ ಕಂಟಕವಾಗಬಹುದು. ಸದ್ಯ ಇಂತಹದೊಂದು ಘಟನೆ ನಮ್ಮ ಮೆಟ್ರೋ ನಿಲ್ದಾಣದೊಳಗೆ ನಡೆದಿದೆ. ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮಹಿಳೆಯೊಬ್ಬಳು ಅಪಾಯವನ್ನು ಲೆಕ್ಕಿಸದೇ ಮೆಟ್ರೋ ಟ್ರ್ಯಾಕ್ಗೆ ಜಿಗಿದ ಘಟನೆ ತಡವಾಗಿ ಬೆಳಕಿಗೆ (Bengaluru News) ಬಂದಿದೆ.
ಇದನ್ನೂ ಓದಿ: Road Accident : ಎಲೆಕ್ಟ್ರಿಕ್ ಬಸ್- ಜೀಪ್ ಮಧ್ಯೆ ಭೀಕರ ಅಪಘಾತ; ನಾಲ್ವರು ಸಾವು
ಹೊಸ ವರ್ಷದ ಮೊದಲ ದಿನದಂದು ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿಈ ಘಟನೆ ನಡೆದಿದೆ. ಜನವರಿ 1ರ ಸಂಜೆ 6:40 ರ ಸುಮಾರಿಗೆ ಮಹಿಳೆಯೊಬ್ಬರು ಇಂದಿರಾನಗರದ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದರು. ಸಂಜೆ ಟೈಂನಲ್ಲಿ ಮೆಟ್ರೋದಲ್ಲಿ ಕಾಲಿಡಲು ಆಗದಷ್ಟು ರಶ್ ಇತ್ತು. ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಪ್ಲಾಟ್ಫಾರಂನತ್ತ ಹೆಜ್ಜೆ ಹಾಕುವಾಗ, ಅಚಾನಕ್ ಆಗಿ ಮೊಬೈಲ್ ಟ್ರ್ಯಾಕ್ಗೆ ಬಿದ್ದಿದೆ.
ಈ ವಿಷಯವನ್ನು ಮೆಟ್ರೋ ಸಿಬ್ಬಂದಿಗೆ ತಿಳಿಸುವುದು ಬಿಟ್ಟು ಮೊಬೈಲ್ಗಾಗಿ ಅಪಾಯವನ್ನು ಲೆಕ್ಕಿಸಿದೇ ತಾನೇ, ಟ್ರ್ಯಾಕ್ಗೆ ಜಿಗಿದಿದ್ದಾಳೆ. ಇತ್ತ ಮಹಿಳೆ ಟ್ರ್ಯಾಕ್ಗೆ ಜಿಗಿದಿರುವುದನ್ನು ಕಂಡ ಕೂಡಲೇ ಮೆಟ್ರೋ ಸಿಬ್ಬಂದಿ ವಿದ್ಯುತ್ ಸಂಪರ್ಕವನ್ನು ತೆಗೆದಿದ್ದಾರೆ. ನಂತರ ಇತರೆ ಸಹ ಪ್ರಯಾಣಿಕರ ಸಹಾಯದಿಂದ ಮಹಿಳೆಯನ್ನು ಟ್ರ್ಯಾಕ್ ಮೇಲಿಂದ ಎತ್ತಲಾಗಿದೆ.
ಮಹಿಳೆಯಿಂದಾಗಿ ಸುಮಾರು 15 ನಿಮಿಷ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ಬಿಎಂಆರ್ಸಿಎಲ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಈ ವಿಚಾರವಾಗಿ ಮಾಹಿತಿ ನೀಡಿರುವ ಬಿಎಂಆರ್ಸಿಎಲ್, ವಿದ್ಯುತ್ ತೆಗೆದ ನಂತರ ಎಲ್ಲವನ್ನೂ ರೀ ಸೆಟ್ ಮಾಡಲು ಸುಮಾರು 15 ನಿಮಿಷ ಬೇಕಾಯಿತು. ನಿನ್ನೆ ಪೀಕ್ ಅವರ್ನಲ್ಲೇ ಈ ರೀತಿ ಸಮಸ್ಯೆ ಆಗಿದ್ದರಿಂದ ಇತರೆ ಪ್ರಯಾಣಿಕರಿಗೆ ತೊಂದರೆಯುಂಟಾಗಿತ್ತು ಎಂದಿದೆ.
ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಬರಲು ಕೆಲವೇ ನಿಮಿಷಗಳು ಬಾಕಿ ಇದ್ದವು. ಟ್ರ್ಯಾಕ್ ಮೇಲೆ ಮಹಿಳೆ ಜಿಗಿದಿದ್ದರಿಂದ ಕ್ಷಣ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅದೃಷ್ಟವಾಶತ್ ಮಹಿಳೆ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾಳೆ. ಜತೆಗೆ ಮೆಟ್ರೋ ಪ್ರಯಾಣಿಕರು ಪ್ಲಾಟ್ಫಾರಂಗೆ ಬಂದಾಗ ಅದಷ್ಟು ಜಾಗ್ರತೆಯಿಂದ ಇರುವಂತೆ ಮನವಿ ಮಾಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ