Site icon Vistara News

Namma Metro : ಗಮನಿಸಿ, ಸೆ. 29ರಂದು ಈ ಮಾರ್ಗದಲ್ಲಿ ಇಡೀ ದಿನ ಮೆಟ್ರೊ ರೈಲು ಸಂಚಾರ ಇರುವುದಿಲ್ಲ

Namma Metro purple line

ಬೆಂಗಳೂರು: ನೀವು ಮೆಟ್ರೋ ಪ್ರಯಾಣಿಕರೇ (Attention Metro Passengers) ಹಾಗಿದ್ದರೆ ಈ ಒಂದು ಸುದ್ದಿಯನ್ನು ನೀವು ಗಮನಿಸಲೇಬೇಕು. ಯಾಕೆಂದರೆ, ಮುಂದಿನ ಶುಕ್ರವಾರ ಅಂದರೆ ಸೆಪ್ಟೆಂಬರ್‌ 29ರಂದು ಮೆಟ್ರೋ ರೈಲಿನ ಒಂದು ಮಾರ್ಗದಲ್ಲಿ ಇಡೀ ದಿನ ಸಂಚಾರ (No metro service full day on sep 29) ಇರುವುದಿಲ್ಲ. ಸಾಮಾನ್ಯವಾಗಿ ಮೆಟ್ರೋ ಕಾಮಗಾರಿ ಪರಿಶೀಲನೆ (Metro work examination), ಸಿಗ್ನಲಿಂಗ್‌ ಕೆಲಸಗಳಿಗಾಗಿ (Signalling work) ದಿನದ ಒಂದೆರಡು ಗಂಟೆ ಸಂಚಾರ ವ್ಯತ್ಯಯವಾಗುವುದು ಇದೆ. ಆದರೆ, ಈ ಬಾರಿ ಇಡೀ ದಿನ ಬಂದ್‌ ಮಾಡಲು ನಿರ್ಧರಿಸಲಾಗಿದೆ.

ಸೆಪ್ಟೆಂಬರ್‌ 29ರಂದು ನೇರಳೆ ಮಾರ್ಗದ ಮೈಸೂರು ರೋಡ್ ಮತ್ತು ಕೆಂಗೇರಿ (Kengeri to Mysore Road) ನಡುವೆ ದಿನಪೂರ್ತಿ ಮೆಟ್ರೋ ಸಂಚಾರ ‌ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಪ್ರಕಟಿಸಿದೆ.

ಮೆಟ್ರೋ ಸಂಚಾರ ಸ್ಥಗಿತಕ್ಕೆ ಕಾರಣ ಏನು?

ಎಲ್ಲರಿಗೂ ತಿಳಿದಿರುವಂತೆ ಕೆಂಗೇರಿಯಿಂದ – ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ಮೆಟ್ರೋ ಮಾರ್ಗ ರಚನೆಯಾಗಿದೆ. ಈ ಮಾರ್ಗದ ಸುರಕ್ಷತಾ ಪರಿಶೀಲನೆಯನ್ನು ಮೆಟ್ರೋ ರೈಲ್ವೆ ಸುರಕ್ಷತಾ
ಆಯುಕ್ತರು (ದಕ್ಷಿಣ ವೃತ್ತ) ನಡೆಸುವುದರಿಂದ ಮೆಟ್ರೋ ರೈಲು ಕಾರ್ಯಾಚರಣೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಅದು ತಿಳಿಸಿದೆ.

ಸೆ. 29ರಂದು ಕೆಂಗೇರಿ ಮತ್ತು ಮೈಸೂರು‌ ರೋಡ್‌ ನಿಲ್ದಾಣಗಳ ನಡುವೆ ದಿನಪೂರ್ತಿ ರೈಲು ಸೇವೆಗಳು ಲಭ್ಯವಿರುವುದಿಲ್ಲ ಎಂದು ಮೆಟ್ರೋ ಪ್ರಕಟಣೆ ತಿಳಿಸಿದೆ. ಅಂದರೆ, ಮೈಸೂರು ರೋಡ್‌, ನಾಯಂಡಹಳ್ಳಿ, ಆರ್‌ಆರ್‌ ನಗರ, ಜ್ಞಾನಭಾರತಿ, ಪಟ್ಟಣಗೆರೆ ಮತ್ತು ಕೆಂಗೇರಿ ಬಸ್‌ ಟರ್ಮಿನಲ್‌ ನಿಲ್ದಾಣದವರೆಗೆ ರೈಲು ಓಡುವುದಿಲ್ಲ.

ಅಂದರೆ ಈಗ ಬೈಯಪ್ಪನ ಹಳ್ಳಿಯಿಂದ ಕೆಂಗೇರಿಗೆ ಹೋಗುವ ರೈಲು ಮೈಸೂರು ರೋಡ್‌ ನಿಲ್ದಾಣದವರೆಗೆ ಹೋಗಿ ಮರಳುತ್ತದೆ. ಕೆಂಗೇರಿಯ ಬದಲು ಮೈಸೂರು ರೋಡ್‌ ನಿಲ್ದಾಣವೇ ಆರಂಭ ಮತ್ತು ಕೊನೆಯ ನಿಲ್ದಾಣವಾಗಿರುತ್ತದೆ.

ಈ ಕೆಳಗಿನ ಮಾರ್ಗಗಳಲ್ಲಿ ರೈಲು ಸೇವೆಗಳು ಲಭ್ಯವಿರುತ್ತದೆ

1. ಬೈಯಪ್ಪನಹಳ್ಳಿ ಟೂ ಮೈಸೂರು ರಸ್ತೆ ನಿಲ್ದಾಣಗಳ ನಡುವೆ ದಿನಪೂರ್ತಿ ಸೇವೆ ಲಭ್ಯವಿದೆ

2. ವೈಟ್ ಫೀಲ್ಡ್ (ಕಾಡುಗೋಡಿ) ಟೂ ಕೃಷ್ಣರಾಜಪುರ ವಿಲ್ದಾಣಗಳ ನಡುವೆ ದಿನಪೂರ್ತಿ ಸೇವೆ ಇದೆ.

3.ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಇದನ್ನೂ ಓದಿ: Namma Metro : ಮೆಟ್ರೋಗೆ ಚೀನಾದಿಂದ ಬರಲಿದೆ 12 ಬೋಗಿ; 2024ಕ್ಕೆ ಚಾಲಕ ರಹಿತ ಓಡಾಟ

ಶುಕ್ರವಾರ ಕರ್ನಾಟಕ ಬಂದ್‌ ಕೂಡಾ ಇದೆ

ಸೆಪ್ಟೆಂಬರ್‌ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಕಳೆದ ಸೆ. 26ರ ಬೆಂಗಳೂರು ಬಂದ್‌ ಸಂದರ್ಭದಲ್ಲಿ ಮುಂಜಾನೆಯ ಅವಧಿಯಲ್ಲಿ ಮೆಟ್ರೋ ಸಂಚಾರ ಭಾರಿ ಸಹಕಾರವನ್ನು ನೀಡಿತ್ತು. ಆದರೆ, ಬಳಿಕ ಜನ ಸಂಚಾರ ಭಾರಿ ಕಡಿಮೆಯಾಗಿತ್ತು. ಇದೀಗ ಕರ್ನಾಟಕ ಬಂದ್‌ ದಿನವೂ ಜನ ಸಂಚಾರ ಕಡಿಮೆ ಇರಬಹುದು ಎಂಬ ದೃಷ್ಟಿಯನ್ನು ಇಟ್ಟುಕೊಂಡು ಬಿಎಂಆರ್‌ಸಿಎಲ್‌ ಅಂದೇ ತನ್ನ ಸುರಕ್ಷತಾ ಪರಿಶೀಲನೆಗೆ ಮುಂದಾಗಿರಬಹುದು ಎಂದು ಭಾವಿಸಲಾಗಿದೆ.

Exit mobile version