Site icon Vistara News

Namma Metro : ಮೆಟ್ರೋ ಸಂಚಾರದಲ್ಲಿ ಮತ್ತೆ ವ್ಯತ್ಯಯ; ಒಂದೆರಡು ದಿನವಲ್ಲ, ಏಳು ದಿನ! ಯಾವಾಗ ಅಂತ ಇಲ್ಲಿದೆ ವಿವರ

Namma Metro purple line

ಬೆಂಗಳೂರು: ನಮ್ಮ ಮೆಟ್ರೋದ (Namma Metro) ನೇರಳೆ ಮಾರ್ಗ (Purple line) ವಿಸ್ತರಣೆಯ ಅಂತಿಮ ಪ್ರಕ್ರಿಯೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇನ್ನು ಕೆಲವು ದಿನ ಸಂಚಾರದಲ್ಲಿ ವ್ಯತ್ಯಯವಾಗಲಿದೆ (Metro operations disturbance). ಮುಂದಿನ 15 ದಿನದ ಅವಧಿಯಲ್ಲಿ ಏಳು ದಿನ ಸಂಚಾರದಲ್ಲಿ ಕೆಲವು ಬದಲಾವಣೆಗಳು ಆಗಲಿವೆ. ವಿಸ್ತರಿತ ಕೆಂಗೇರಿ-ಚಲ್ಲಘಟ್ಟ (Kengeri Challaghatta) ಹಾಗೂ ಬೈಯಪ್ಪನಹಳ್ಳಿ- ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ (Baiyappanahalli- KR Pura Metro stations) ನಡುವಿನ ಸಿಗ್ನಲಿಂಗ್‌ ಪರೀಕ್ಷೆಗಾಗಿ (Signalling test) ಕೆಲವೊಂದು ಮಾರ್ಗಗಳಲ್ಲಿ ಕೆಲವು ಸಮಯದಲ್ಲಿ ಮೆಟ್ರೋ ಸಂಚಾರ ಇರುವುದರಿಲ್ಲ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಕಳೆದ ಆಗಸ್ಟ್‌ 11 ಮತ್ತು 14ರಂದು ಇದೇ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಆಗಿತ್ತು.

ಯಾವಾಗ? ಯಾವ ಮಾರ್ಗದಲ್ಲಿ ಎನ್ನುವ ವಿವರ ಇಲ್ಲಿದೆ

ಆಗಸ್ಟ್‌ 16, ಗುರುವಾರ

ಕೆಂಗೇರಿ ಮತ್ತು ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣಗಳ ನಡುವೆ ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ. ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಬೆಳಗ್ಗೆ 5ರಿಂದ ರಾತ್ರಿ 11 ಗಂಟೆಯವರೆಗೆ ರೈಲು ಸೇವೆಗಳು ಇರುತ್ತವೆ.

Namma metro train

ಆಗಸ್ಟ್‌ 23 ಮತ್ತು 24, ಬುಧವಾರ, ಗುರುವಾರ

ಕೆಂಗೇರಿ – ಮೈಸೂರು ರಸ್ತೆ ಮೆಟ್ರೊ ವಿಲ್ದಾಣಗಳ ನಡುವೆ ಸಂಚಾರ ವ್ಯತ್ಯಯ

  1. ಆಗಸ್ಟ್‌ 23ರ ಬುಧವಾರ ಮತ್ತು ಆ.24ರ ಗುರುವಾರ ಕೆಂಗೇರಿ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 7 ಗಂಟೆವರೆಗೆ ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ.
  2. ಈ ಅವಧಿಯಲ್ಲಿ ಮೈಸೂರು ರಸ್ತೆ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲು ಸೇವೆ ಲಭ್ಯವಿರುತ್ತದೆ.
  3. ಬೆಳಗ್ಗೆ 7 ಗಂಟೆಯ ನಂತರ ಕೆಂಗೇರಿಯಿಂದ ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಎಂದಿನಂತೆ ಸೇವೆ ಲಭ್ಯವಿರುತ್ತದೆ.

ಆಗಸ್ಟ್‌ 20 ಭಾನುವಾರ ಆಗಸ್ಟ್‌ 29 ಮಂಗಳವಾರ

ಬೈಯಪ್ಪನಹಳ್ಳಿ – ಸ್ವಾಮಿ ವಿವೇಕಾನಂದ ಸ್ಟೇಷನ್‌ ನಡುವೆ ಸಂಚಾರ ವ್ಯತ್ಯಯ

  1. ಆ.20ರ ಭಾನುವಾರ ಮತ್ತು ಆ.29ರ ಮಂಗಳವಾರ ಬೈಯಪ್ಪನಹಳ್ಳಿ ಟರ್ಮಿನಲ್‌ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ, ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್‌ (ಕಾಡುಗೋಡಿ) ಮಾರ್ಗಗಳ ನಡುವೆ ಬೆಳಗ್ಗೆ 7 ಗಂಟೆವರೆಗೆ ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ.
  2. ಈ ಅವಧಿಯಲ್ಲಿ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋನಿಲ್ದಾಣದಿಂದ ಮಾತ್ರ ರೈಲು ಸೇವೆ ಲಭ್ಯವಿರುತ್ತದೆ.

ಆಗಸ್ಟ್‌ 23 ಬುಧವಾರ, ಆಗಸ್ಟ್‌ 24 ಗುರುವಾರ

ರೈಲು ಕೆಂಗೇರಿವರೆಗೆ ಹೋಗಲ್ಲ, ಮೈಸೂರು ರೋಡ್‌ನಲ್ಲೇ ಸ್ಟಾಪ್‌

  1. ಆ.23ರ ಬುಧವಾರ ಮತ್ತು ಆ.24ರ ಗುರುವಾರ ಬೆಳಗ್ಗೆ 5ರಿಂದ 7 ಗಂಟೆವರೆಗೆ ಮೈಸೂರು ರಸ್ತೆ ನಿಲ್ದಾಣದಲ್ಲಿ ರೈಲುಗಳ ಸೇವೆ ಕೊನೆಗೊಳ್ಳುತ್ತದೆ.
  2. ಇತರೆ ದಿನಗಳಲ್ಲಿ ರೈಲುಗಳು ಕೆಂಗೇರಿ ನಿಲ್ದಾಣದವರೆಗೆ ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.
  3. ಬೆಳಗ್ಗೆ 7 ಗಂಟೆ ನಂತರ ಬೈಯಪ್ಪನಹಳ್ಳಿಯಿಂದ ಕೆಂಗೇರಿ ನಿಲ್ದಾಣ ಮಾರ್ಗಗಳ ನಡುವೆ ಎಂದಿನಂತೆ ಸೇವೆಗಳು ಲಭ್ಯವಿರುತ್ತದೆ.

ಈ ಎಲ್ಲ ಬದಲಾವಣೆಗಳು ನೇರಳೆ ಮಾರ್ಗದಲ್ಲಿ ಮಾತ್ರ. ಹಸಿರು ಮಾರ್ಗದ ರೈಲು ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

Namma metro train

ಇದನ್ನೂ ಓದಿ: Namma Metro : ನೀವು ನಂಬ್ತೀರಾ? ಇನ್ನು ಸ್ವಲ್ಪ ದಿನ ಹೋದ್ರೆ ಚಾಲಕನಿಲ್ಲದೆಯೇ ಓಡುತ್ತಂತೆ ನಮ್ಮ ಮೆಟ್ರೊ!

ಫಲಪುಷ್ಪ ಪ್ರದರ್ಶನಕ್ಕೆ ಹೋಗುವವರಿಗೆ ಪೇಪರ್‌ ಟಿಕೆಟ್‌

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲಾಲ್‌ಬಾಗ್‌ನಲ್ಲಿನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕೆ ‘ನಮ್ಮ ಮೆಟ್ರೋ’ ಪೇಪರ್‌ ಟಿಕೆಟ್‌ ವ್ಯವಸ್ಥೆ ಮಾಡುತ್ತಿದೆ. ಆಗಸ್ಟ್‌ 15ರಂದು (ಮಂಗಳವಾರ) ಲಾಲ್‌ಬಾಗ್‌ನಿಂದ ಪ್ರಯಾಣಿಸಲು ‘ರಿಟರ್ನ್‌ ಜರ್ನಿ ಪೇಪರ್‌ ಟಿಕೆಟ್‌’ ಪರಿಚಯಿಸಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಆ.15 ಬೆಳಗ್ಗೆ 10ರಿಂದ ರಾತ್ರಿ 8ರತನಕ ಲಾಲ್‌ಬಾಗ್‌ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೊ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್‌ ದರ 30 ರೂ. ಇರಲಿದೆ. ಪೇಪರ್‌ ಟಿಕೆಟ್‌ ಒಂದು ಪ್ರಯಾಣಕ್ಕೆ ಮಾತ್ರ ಮಾನ್ಯ. ಅಂದು ಬೆಳಗ್ಗೆ 8ರಿಂದ ಸಂಜೆ 6ರವಧಿರೆಧಿಗೆ ಎಲ್ಲಮೆಟ್ರೊ ನಿಲ್ದಾಣಗಳಲ್ಲಿ ಪೇಪರ್‌ ಟಿಕೆಟ್‌ ಖರೀದಿಸಬಹುದಾಗಿದೆ. ಲಾಲ್‌ಬಾಗ್‌ ಮೆಟ್ರೋ ನಿಲ್ದಾಣದಲ್ಲಿ8 ಗಂಟೆವರೆಗೆ ಲಭ್ಯವಿರುತ್ತವೆ.

Exit mobile version