Site icon Vistara News

Namma Metro : ಹಳಿಯಲ್ಲಿ ಯುವಕನ ಹುಚ್ಚಾಟ; 27 ನಿಮಿಷ ಮೆಟ್ರೋ ಸಂಚಾರ ಸ್ಥಗಿತ

Namma Metro Purple Line Man jumps into track

ಬೆಂಗಳೂರು: ಜನರ ಹುಚ್ಚಾಟಗಳಿಂದ ಮೆಟ್ರೋ ರೈಲು (Namma Metro) ಸಂಚಾರಕ್ಕೆ ಅಡಚಣೆಯಾದ (Train operation Stopped) ಮತ್ತೊಂದು ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಯುವಕನೊಬ್ಬ ರೈಲ್ವೆ ಹಳಿಗೆ ಇಳಿದು ಹುಚ್ಚಾಟವಾಡಿದ (Man walks in metro track) ಕಾರಣ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ (Namma Metro Purple Line) ಸುಮಾರು 27 ನಿಮಿಷಗಳ ಕಾಲ ಸಂಚಾರ ಸ್ಥಗಿತಗೊಳಿಸಬೇಕಾಯಿತು.

ಬೆಂಗಳೂರಿನ ಮೆಜೆಸ್ಟಿಕ್‌ ರೈಲು ನಿಲ್ದಾಣದಿಂದ ಕೆಂಗೇರಿ ಚಲ್ಲಘಟ್ಟ ಕಡೆಗೆ ಹೋಗುವ ಮಾರ್ಗದಲ್ಲಿ ಜ್ಞಾನಭಾರತಿ ಸ್ಟೇಷನ್​ನಿಂದ ಪಟ್ಟಣಗೆರೆ ಸ್ಟೇಷನ್ ನಡುವೆ ಮೆಟ್ರೋ ಹಳಿಗೆ ಯುವಕನೊಬ್ಬ ಇಳಿದಿದ್ದ. ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ಸಕಾಲಿಕವಾಗಿ ಕ್ರಮ ಕೈಗೊಂಡು ಮೈಸೂರು ರಸ್ತೆ ನಿಲ್ದಾಣದಿಂದ ಚಲ್ಲಘಟ್ಟ ನಡುವಿನ ನೇರಳೆ ಮಾರ್ಗದಲ್ಲಿ ಸುಮಾರು ಅರ್ಧ ಗಂಟೆ ಮೆಟ್ರೋ ಸೇವೆ ಸ್ಥಗಿತಗೊಳಿಸಿದರು.

ಹಳಿ ಮೇಲೆ ಯುವಕನ ಓಡಾಟವನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಮೆಟ್ರೋ ಸೇವೆ ನಿಲ್ಲಿಸಿದರು. ಮೆಟ್ರೋ ಹಳಿಗಳಲ್ಲಿ ಹೈವೊಲ್ಟೇಜ್ ವಿದ್ಯುತ್ ಇರುತ್ತದೆ. ಹೀಗಾಗಿ ವಿದ್ಯುತ್‌ ಪವರ್‌ ಆಫ್‌ ಮಾಡಿಸಲಾಯಿತು. ಕೂಡಲೇ ಯುವಕನನ್ನು ಹಳಿಗಳಿಂದ ಹಿಡಿದು ತರಲಾಯಿತು. ಮತ್ತೆ ವಿದ್ಯುತ್‌ ಪವರ್‌ ಆನ್‌ ಮಾಡಲಾಯಿತು. ಆದರೆ, ಒಮ್ಮೆ ವಿದ್ಯುತ್‌ ಆಫ್‌ ಮಾಡಿ ಆನ್‌ ಮಾಡಿ ಸಂಚಾರ ಆರಂಭವಾಗಲು 27 ನಿಮಿಷ ಬೇಕಾಯಿತು. ಮಧ್ಯಾಹ್ನ 3 ಗಂಟೆಯಿಂದ 3.27 ರವರೆಗೆ ಮೆಟ್ರೋ ಸೇವೆ ಇರಲಿಲ್ಲ.

ಇದನ್ನೂ ಓದಿ : Namma Metro: ಗಮನಿಸಿ; ಭಾನುವಾರ ಎಂದಿಗಿಂತ 1 ತಾಸು ಮೊದಲೇ ಮೆಟ್ರೋ ಸೇವೆ ಆರಂಭ

ಯುವಕನ ತೀವ್ರ ವಿಚಾರಣೆ

ಮೆಟ್ರೋ ಸಿಬ್ಬಂದಿ ಹಳಿಗಳಿಗೆ ಇಳಿದ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತ ಎಲ್ಲಿ ಹಳಿಗಳ ಮೇಲೆ ಇಳಿದಿದ್ದಾನೆ. ಅವನ ಉದ್ದೇಶವೇನಾಗಿತ್ತು ಎಂಬುದರ ವಿಚಾರಣೆ ನಡೆಯುತ್ತಿದೆ.

ಈ ಹಿಂದೆಯೂ ಹಲವು ಬಾರಿ ಹುಚ್ಚಾಟ ನಡೆದಿವೆ.

  1. ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಳಿಗೆ ಜಿಗಿದು ಅಲ್ಲೋಲ ಕಲ್ಲೋಲ ಆಗಿತ್ತು. ಹಳಿ ಮೇಲೆ ಬಿದ್ದ ತನ್ನ ಮೊಬೈಲ್ ತೆಗೆಯಲು ಹಳಿಗೆ ಜಿಗಿದಿದ್ದರು.
  2. ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ರೈಲು ಹಳಿಗೆ ಜಿಗಿದಿದ್ದ. ಆತನನ್ನು ರಕ್ಷಿಸಲಾಗಿತ್ತು.
Exit mobile version