Site icon Vistara News

Namma Metro : ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಝೀರೋ-ಕೆವೈಸಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಲಭ್ಯ

namma Metro

ಬೆಂಗಳೂರು: ಭಾರತದ ಪ್ರಮುಖ ಸಂಯೋಜಿತ ಓಮ್ನಿಚಾನಲ್ ಪೇಮೆಂಟ್ಸ್ ಪೂರೈಕೆದಾರರಲ್ಲಿ ಒಂದಾಗಿರುವ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್ ಮಂಗಳವಾರ ತಾನು ಆರ್‌ಬಿಎಲ್‌ ಬ್ಯಾಂಕ್ ಸಹಭಾಗಿತ್ವದಲ್ಲಿ ಬೆಂಗಳೂರು ಮೆಟ್ರೋ ರೇಲ್ ಕಾರ್ಪೊರೇಷನ್‌ಗಾಗಿ (Namma Metro) ಝೀರೋ-ಕೆವೈಸಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ವಿತರಣೆ ಆರಂಭಿಸಿರುವುದಾಗಿ ಘೋಷಿಸಿದೆ. ಸಂಪೂರ್ಣ ಕೆವೈಸಿ ಅಗತ್ಯವಿಲ್ಲದೇ ಇರುವುರಿಂದ ಈ ಕಾರ್ಡ್ ಅನ್ನು ಸಕ್ರಿಯಗೊಳಿಸಬಹುದಾದ್ದರಿಂದ ಬಳಕೆದಾರರಿಗೆ ಎನ್‌ಸಿಎಂಸಿಯನ್ನು ವೇಗವಾಗಿ ವಿತರಿಸಬಹುದಾಗಿದೆ. ಪ್ರಯಾಣಿಕರು ಝೀರೋ-ಕೆವೈಸಿ ಎನ್‌ಸಿಎಂಸಿಗೆ ಗರಿಷ್ಠ ರೂ.2,000 ಅನ್ನು ಟಾಪ್ ಅಪ್ ಮಾಡಬಹುದು. ಈ ಕಾರ್ಡ್ ಅನ್ನು ಮೆಟ್ರೋ, ಬಸ್, ವಾಟರ್ ಮೆಟ್ರೋ, ಪಾರ್ಕಿಂಗ್ ಮತ್ತು ಟೋಲ್‌ನಂತಹ ಎಲ್ಲಾ ಟಚ್ ಪಾಯಿಂಟ್‌ಗಳಲ್ಲಿ ಬಳಸಬಹುದು.

ಎಜಿಎಸ್ ಟ್ರಾನ್ಸಾಕ್ಟ್ 2023ರ ಮಾರ್ಚ್‌ನಿಂದ ಆರ್‌ಬಿಎಲ್‌ ಬ್ಯಾಂಕ್ ಸಹಭಾಗಿತ್ವದಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್‌ನಲ್ಲಿ ಎನ್‌ಸಿಎಂಸಿ ಅನ್ನು ನೀಡುತ್ತಿದೆ. ಇಂದಿನಿಂದ, ಕಂಪನಿಯು ಬಿಎಂಆರ್‌ಸಿಎಲ್‌ಗೆ ಇಲ್ಲಿಯವರೆಗೆ 57,000ಕ್ಕೂ ಹೆಚ್ಚು ಎನ್‌ಸಿಎಂಸಿಗಳನ್ನು ನೀಡಿದೆ.

ಭಾರತ ಸರ್ಕಾರದ ಒಂದು ಕಾರ್ಡ್ ಒಂದು ದೇಶ ಯೋಜನೆಗೆ ಅನುಗುಣವಾಗಿ ಝೀರೋ- ಕೆವೈಸಿ ಎನ್‌ಸಿಎಂಸಿ ಅನ್ನು ಬಿಡುಗಡೆ ಮಾಡಲಾಗಿದ್ದು, ಈ ಯೋಜನೆಯು ಭಾರತದ ಸಾರಿಗೆ ಕ್ಷೇತ್ರದ ಭವಿಷ್ಯದಲ್ಲಿ ಭಾರಿ ಬದಲಾವಣೆ ಮಾಡುವ ನಿರೀಕ್ಷೆ ಇದೆ. ಪ್ರಸ್ತುತ ಕ್ಲೋಸ್ಡ್-ಲೂಪ್ ಟ್ರಾನ್ಸಿಟ್ ಕಾರ್ಡ್‌ಗಳನ್ನು ಭಾರತದಲ್ಲಿ ಮೆಟ್ರೋ ಅಥವಾ ಬಸ್ ಸಂಚಾರಕ್ಕೆ ನಿರ್ದಿಷ್ಟವಾಗಿ ಬಳಸಲಾಗುತ್ತದೆ. ಆದರೆ ಎನ್‌ಸಿಎಂಸಿಗಳನ್ನು ದೇಶದಾದ್ಯಂತ ಇರುವ ಎಲ್ಲಾ ಎನ್‌ಸಿಎಂಸಿ ಲಭ್ಯ ಇರುವ ಸ್ಥಳಗಳಲ್ಲಿ ಬಳಸಬಹುದಾಗಿದೆ. ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್‌ನ ಝೀರೋ-ಕೆವೈಸಿ ಎನ್‌ಸಿಎಂಸಿಯು ಗ್ರಾಹಕರಿಗೆ ಕೆವೈಸಿ ವೆರಿಫಿಕೇಷನ್ ತೊಂದರೆಯಿಂದ ಮುಕ್ತಗೊಳಿಸುತ್ತದೆ. ವೇಗವಾಗಿ, ಹೆಚ್ಚು ಅನುಕೂಲಕರ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ವಿವಿಧ ಸಾರಿಗೆ ವಿಭಾಗಗಳಲ್ಲಿ ಅನುಕೂಲಕರ ಮತ್ತು ಸುಲಭ ಪಾವತಿ ಮಾಡುವ ಸೌಲಭ್ಯ ಒದಗಿಸುತ್ತದೆ.

ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಎಂಡಿ ರವಿ ಬಿ ಗೋಯಲ್ ಮಾತನಾಡಿ , “ನಮ್ಮ ಗ್ರಾಹಕರಿಗೆ ಅನುಕೂಲವಾಗುವಂತಹ ಪಾವತಿ ಸೌಲಭ್ಯ ಒದಗಿಸುವ ಮೂಲಕ ಈ ವಿಭಾಗದಲ್ಲಿ ಮಹತ್ವದ ಪಾತ್ರ ವಹಿಸಲು ನಾವು ಬದ್ಧರಾಗಿದ್ದೇವೆ. ಗ್ರಾಹಕರಿಗೆ ತೊಂದರೆ ಮುಕ್ತ ಮತ್ತು ಸುಲಭವಾದ ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಿಎಂಆರ್‌ಸಿಎಲ್‌ನ ಯೋಜನೆಗೆ ನೆರವಾಗಲು ನಮಗೆ ಸಂತೋಷ ಇದೆ. ಬೆಂಗಳೂರಿನಲ್ಲಿ ನಾವು ಮೊದಲು ಎನ್‌ಸಿಎಂಸಿ ಅನ್ನು ಬಿಡುಗಡೆ ಮಾಡಿದಾಗಿನಿಂದಲೂ ಅದರ ಸರಳ ಬಳಕೆ ವಿಧಾನ ಮತ್ತು ಸುಲಭವಾಗಿ ಟಾಪ್-ಅಪ್‌ ಮಾಡುವ ಸೌಲಭ್ಯಗಳಿಂದಾಹಿ ಹೆಚ್ಚಿನ ಪ್ರಯಾಣಿಕರು ಆಸಕ್ತಿ ತೋರಿಸಿದ್ದಾರೆ. ಝೀರೋ ಕೆವೈಸಿ ಎನ್‌ಸಿಎಂಸಿಯ ವೇಗದ ವಿತರಣೆ ಮಾಡುವ ಮೂಲಕ ಹೆಚ್ಚು ಗ್ರಾಹಕರಿಗೆ ಅಚ್ಚುಮೆಚ್ಚಿನದಾಗುತ್ತದೆ ಮತ್ತು ಆ ಮೂಲಕ ಎನ್‌ಸಿಎಂಸಿ ಬಳಕೆ ಹೆಚ್ಚಾಗಲಿದೆ ಎಂಬ ನಂಬಿಕೆ ನಮಗಿದೆ’’ ಎಂದು ಹೇಳಿದರು.

ಪ್ರಯಾಣಿಕರು ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿನ ಟಿಕೆಟ್ ಕೌಂಟರ್‌ಗಳಿಂದ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ವಿತರಣೆ ಮಾಡುವ ಝೀರೋ ಕೆವೈಸಿ ಎನ್‌ಸಿಎಂಸಿಗಳನ್ನು ಖರೀದಿಸಬಹುದು ಮತ್ತು ಅನುಕೂಲಕರವಾಗಿ ಟಾಪ್ ಅಪ್ ಮಾಡಬಹುದು.

Exit mobile version