Site icon Vistara News

Narayana Health: ನಾರಾಯಣ ಹೆಲ್ತ್ ಸಿಟಿಯಲ್ಲಿ 6 ತಿಂಗಳಲ್ಲಿ 300 ರೊಬೊಟಿಕ್ ಮೊಣಕಾಲಿನ ಶಸ್ತ್ರಚಿಕಿತ್ಸೆಗಳು

Narayana Health City Performs 300 Robotic Knee Replacements in Six Months

ಬೆಂಗಳೂರು: ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಆರು ತಿಂಗಳಲ್ಲಿ 300 ರೊಬೊಟಿಕ್ ಮೊಣಕಾಲಿನ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದೆ. ನಾರಾಯಣ ಹೆಲ್ತ್ ಸಿಟಿಯಲ್ಲಿ (Narayana Health) ಆರ್ಥೊಪಿಡಿಕ್ಸ್, ಸ್ಪೈನ್ ಅಂಡ್ ಟ್ರೌಮಾದ ಸೀನಿಯರ್ ಕನ್ಸಲ್ಟೆಂಟ್ ಪ್ರೊ. ಅರುಣ್ ರಂಗನಾಥನ್ ಅವರ ನೇತೃತ್ವದ ಆರ್ಥೋಪಿಡಿಕ್ ತಂಡವು ಈ ಸಾಧನೆ ಮಾಡಿದೆ.

ಮಹಾವೀರ ಚಕ್ರ ಪುರಸ್ಕೃತ ಪಿಟಿ ಎಸ್.ಕೆ. ಗುಪ್ತಾ ಅವರು 88 ವರ್ಷದ ರೋಗಿಯಾಗಿದ್ದು, ತೀವ್ರವಾದ ಮೊಣಕಾಲಿನ ಆರ್ಥ್ರೈಟಿಸ್‌ನಿಂದ ನಡೆಯಲು ಆಗದಷ್ಟು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಅವರಿಗೆ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಮರು ಜೀವನ ಪಡೆದಿದ್ದಾರೆ. ರೊಬೊಟಿಕ್ ಮೊಣಕಾಲ ಶಸ್ತ್ರಚಿಕಿತ್ಸೆಯು ಅವರಿಗೆ ಚಲನೆ ಹಾಗೂ ವಿಶ್ವಾಸ ತಂದುಕೊಟ್ಟಿದೆ.

ಈ ಸಾಧನೆಯು ನಾರಾಯಣ ಹೆಲ್ತ್ ಸಿಟಿಯಲ್ಲಿ ಆರ್ಥೊಪಿಡಿಕ್ಸ್, ಸ್ಪೈನ್ ಅಂಡ್ ಟ್ರೌಮಾದ ಸೀನಿಯರ್ ಕನ್ಸಲ್ಟೆಂಟ್ ಪ್ರೊಫೆಸರ್ ಅರುಣ್ ರಂಗನಾಥನ್ ಅವರ ನೇತೃತ್ವದ ಆರ್ಥೋಪಿಡಿಕ್ ತಂಡವು, ಕಳೆದ ಆರು ತಿಂಗಳಲ್ಲಿ ಪೂರ್ಣಗೊಳಿಸಿದ 300ನೇ ರೊಬೊಟಿಕ್ ಮೊಣಕಾಲು ಬದಲಾವಣೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

ಈ ಕುರಿತು ನಾರಾಯಣ ಹೆಲ್ತ್ ಸಿಟಿಯ ರೊಬೊಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್, ನೀ ರಿಪ್ಲೇಸ್ಮೆಂಟ್ ಸರ್ಜರಿಯ ಆರ್ಥೊಪಿಡಿಕ್ ಸರ್ಜನ್ ಡಾ. ಅಭಿನಂದನ್ ಎಸ್. ಪುನೀತ್ ಮಾತನಾಡಿ, ನಾರಾಯಣ ಹೆಲ್ತ್ ಸಿಟಿಯಲ್ಲಿ ನಮ್ಮ ಉದ್ದೇಶ ಸದಾ ನಮ್ಮ ರೋಗಿಗಳ ಸ್ವಾಸ್ಥ್ಯದ ಸುತ್ತಲೂ ಕೇಂದ್ರೀಕೃತವಾಗಿದೆ. ರೊಬೊಟಿಕ್ ಮೊಣಕಾಲು ಶಸ್ತ್ರಚಿಕಿತ್ಸೆಯ ತಂತ್ರಜ್ಞಾನ ಪರಿಚಯಿಸುವುದು ನಮಗೆ ಸಹಜ ಹೆಜ್ಜೆಯಾಗಿದ್ದು, ಅದು ಸರಿಸಾಟಿ ಇರದ ನಿಖರತೆ ಮತ್ತು ವೈಯಕ್ತಿಕಗೊಳಿಸಿದ ಆರೈಕೆ ನೀಡುತ್ತದೆ.

ನಾವು ನಮ್ಮ ರೋಗಿಗಳ ಜೀವನ ಉನ್ನತಗೊಳಿಸಲು ಶ್ರಮಿಸುತ್ತಿದ್ದೇವೆ ಮತ್ತು ಈ ಸುಧಾರಿತ ತಂತ್ರಜ್ಞಾನವು ನಮಗೆ ಅದನ್ನು ಸಾಧ್ಯವಾಗಿಸುತ್ತದೆ. ನಮ್ಮ ರೋಗಿಗಳು ಅವರ ಮೊಬಿಲಿಟಿ ಪಡೆಯುವುದು ಮತ್ತು ಸ್ವಾತಂತ್ರ್ಯ ಮರಳಿ ಪಡೆಯುವುದು ನಮ್ಮ ತಂಡಕ್ಕೆ ಅತ್ಯಂತ ದೊಡ್ಡ ಪುರಸ್ಕಾರವಾಗಿದೆ” ಎಂದು ತಿಳಿಸಿದರು.

ಈ ಬಗ್ಗೆ ಪ್ರೊ. ಅರುಣ್ ರಂಗನಾಥನ್ ಮಾತನಾಡಿ, “ನಮ್ಮ ಗುರಿ ರೋಗಿಗಳ ಆರ್ಥಿಕ ಹಿನ್ನೆಲೆ ಏನೇ ಇರಲಿ, ಎಲ್ಲ ರೋಗಿಗಳಿಗೂ ಅತ್ಯಾಧುನಿಕ ಮೊಣಕಾಲಿನ ಬದಲಾವಣೆ ತಂತ್ರಜ್ಞಾನ ದೊರೆಯುವಂತೆ ಮಾಡುವುದು ಎಂದ ಅವರು, ಈ ಪ್ರಕ್ರಿಯೆಯಲ್ಲಿ ರಿಯಲ್-ಟೈಮ್ ಮ್ಯಾಪಿಂಗ್ ಅನ್ನು ನಡೆಸುವ ಮೂಲಕ ರೋಗಿಯ ಮೊಣಕಾಲಿನ 3ಡಿ ಮಾಡೆಲ್ ಸೃಷ್ಟಿಸಲಾಗುತ್ತದೆ. ರೊಬೊಟಿಕ್ ಸಾಧನವು ಶಸ್ತ್ರಚಿಕಿತ್ಸೆ ನಿರ್ವಹಿಸುತ್ತದೆ, ಶಸ್ತ್ರಚಿಕಿತ್ಸಾ ತಜ್ಞರು ಅದರ ಪೂರ್ಣ ನಿಯಂತ್ರಣ ಕಾಪಾಡಿಕೊಳ್ಳುವ ಮೂಲಕ ಉತ್ತಮ ಫಲಿತಾಂಶ ಲಭ್ಯವಾಗುವಂತೆ ಮಾಡುತ್ತಾರೆ ಎಂದರು.

ಇದನ್ನೂ ಓದಿ: Bengaluru Power Cut: ಬೆಂಗಳೂರು ನಿವಾಸಿಗಳೇ ಗಮನಿಸಿ; ಜೂ.29ರಂದು ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ನಾರಾಯಣ ಹೆಲ್ತ್ ಸಿಟಿಯ ರೊಬೊಟಿಕ್ ನೀ ರೀಪ್ಲೇಸ್ಮೆಂಟ್, ನೀ ರೀಪ್ಲೇಸ್ಮೆಂಟ್ ಸರ್ಜರಿಯ ಆರ್ಥೊಪಿಡಿಕ್ ಸರ್ಜನ್ ಡಾ.ಪ್ರಶಾಂತ್ ಬಿ.ಎನ್. ಮಾತನಾಡಿ, ಜಾಯಿಂಟ್ ರೊಬೊಟ್ ಸಿಸ್ಟಂನ ಶಸ್ತ್ರಚಿಕಿತ್ಸೆಯ ನಿಖರತೆ ಹೆಚ್ಚು ಅನುಕೂಲಗಳನ್ನು ಹೊಂದಿದ್ದು ಅದರಲ್ಲಿ ಹೆಚ್ಚು ನಿಖರ ಇಂಪ್ಲಾಂಟ್ ಪ್ಲೇಸ್ಮೆಂಟ್ ಹೊಂದಿದ್ದು, ಅದು ಸಹಜವಾದ ಶಸ್ತ್ರಚಿಕಿತ್ಸೆಯ ನಂತರ ಭಾವನೆ, ಸುತ್ತಮುತ್ತಲಿನ ಜೀವಕೋಶಗಳಿಗೆ ಗಾಯದ ತೊಂದರೆ ಕಡಿಮೆ, ಸೋಂಕಿನ ತೊಂದರೆ ಕಡಿಮೆ ಮತ್ತು ಬೇಗನೆ ಪುನಶ್ಚೇತನದಿಂದ ಬಹಳ ಕಡಿಮೆ ಆಸ್ಪತ್ರೆ ವಾಸವಿರುತ್ತದೆ. ಈ ನಿಖರ ಇಂಪ್ಲಾಂಟ್ ಪ್ಲೇಸ್ಮೆಂಟ್ ಇಂಪ್ಲಾಂಟ್ ಬಾಳಿಕೆ ಹೆಚ್ಚಿಸಿ, ಭವಿಷ್ಯದ ಪುನರ್ ಪರಿಶೀಲನೆಯ ಅಗತ್ಯ ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

Exit mobile version