Site icon Vistara News

Youth Parliament: ಯಲಹಂಕ ಕೇಂದ್ರೀಯ ವಿದ್ಯಾಲಯದಲ್ಲಿ ನೆರವೇರಿದ ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆ

Dignitaries inaugurate National Youth Parliament event

ಬೆಂಗಳೂರು: ಯಲಹಂಕದ ರೈಲ್ವೆ ಗಾಲಿ ಕಾರ್ಖಾನೆಯ ಕೇಂದ್ರೀಯ ವಿದ್ಯಾಲಯದಲ್ಲಿ (Kendriya Vidyalaya RWF) ಸೆ.7 ಮತ್ತು 8ರಂದು ಬೆಂಗಳೂರು ಪ್ರಾದೇಶಿಕ ಮಟ್ಟದ 34ನೇ ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆ ಆಯೋಜಿಸಲಾಗಿತ್ತು. ರಾಷ್ಟ್ರೀಯ ಯುವ ಸಂಸತ್ತು (Youth Parliament) ರಾಷ್ಟ್ರ ಮಟ್ಟದ ಸ್ಪರ್ಧೆಯಾಗಿದ್ದು, ಇದರಲ್ಲಿ ಧಾರವಾಡ, ಮೈಸೂರು ಸೇರಿ ವಿವಿಧೆಡೆಯ ನವೋದಯ ವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸಲು ಮತ್ತು ಸಂಸದೀಯ ವ್ಯವಸ್ಥೆಯ ಬಗ್ಗೆ ತಿಳಿವಳಿಕೆ ಮೂಡಿಸಲು ಯುವ ಸಂಸತ್ತು ಆಯೋಜಿಸಲಾಗಿತ್ತು. ಇದು ಮಕ್ಕಳಿಗೆ ತಮ್ಮ ಕರ್ತವ್ಯಗಳು ಮತ್ತು ಹಕ್ಕುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ದೇಶದ ಮಾದರಿ ಪ್ರಜೆಗಳಾಗಲು ನೆರವಾಗುತ್ತದೆ.

2023-24ನೇ ಸಾಲಿನ ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆಯಲ್ಲಿ ಪ್ರಾದೇಶಿಕವಾಗಿ ಅರ್ಹತೆ ಪಡೆದ ಶಾಲೆಗಳಲ್ಲಿ ಬೆಂಗಳೂರಿನ ಕೇಂದ್ರೀಯ ವಿದ್ಯಾಲಯ (ಕೆವಿ) ಡಿಆರ್‌ಡಿಒ, ಕೆವಿ ಧಾರವಾಡ, ಕೆವಿ ಹೆಬ್ಬಾಳ, ಕೆವಿ ಬೆಳಗಾವಿ ನಂ2, ಕೆವಿ ಬಿಆರ್‌ಬಿಎನ್‌ಎಂಪಿಎಲ್‌ ಮೈಸೂರು ಆತಿಥೇಯ ಹಾಗೂ ಕೆವಿ ಆರ್‌ಡಬ್ಲ್ಯೂಎಫ್ ಯಲಹಂಕ (Kendriya Vidyalaya RWF) ಯಲಹಂಕ ಹಾಗೂ ಇತರ 3 ಶಾಲೆಗಳ ವಿದ್ಯಾರ್ಥಿಗಳು ಮೊದಲ ದಿನದಲ್ಲಿ ಭಾಗವಹಿಸಿದ್ದರು.

ಸೆ.7 ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಎಂಎಲ್‌ಸಿ ಎಚ್.ಎಸ್.ಗೋಪಿನಾಥ್, ಕೆವಿಎಸ್ ಬೆಂಗಳೂರು ಪ್ರದೇಶದ ಡಿಸಿ ಧರ್ಮೇಂದ್ರ ಪಟ್ಟೆ, ಎಸಿ ಪಿ.ಸಿ. ರಾಜು ಭಾಗವಹಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

ಇದಕ್ಕೂ ಓದಿ | SBI PO Recruitment 2023: 2000 ಪ್ರೊಬೇಷನರಿ ಹುದ್ದೆ ನೇಮಕಕ್ಕೆ ಎಸ್‌ಬಿಐ ಅರ್ಜಿ ಆಹ್ವಾನ, ಸೆ.27 ಅಪ್ಲೈಗೆ ಕೊನೆ ದಿನ

ಸೆ.8ರಂದು ಎಂಎಲ್‌ಸಿ ಡಿ.ಎಸ್.ಅರುಣ್, ಕೆವಿಎಸ್ ಬೆಂಗಳೂರು ಪ್ರದೇಶದ ಡಿಸಿ ಧರ್ಮೇಂದ್ರ ಪಟ್ಟೆ, ಎಸಿ ಪಿ.ಸಿ. ರಾಜು ಉಪಸ್ಥಿತರಿದ್ದರು. ಉಳಿದ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ನಂತರ ಸಮಾರೋಪ ಸಮಾರಂಭ ನೆರವೇರಿತು. ಈ ವೇಳೆ ಉತ್ತಮ ಭಾಷಣಕಾರರನ್ನು ಘೋಷಿಸಿ ಸನ್ಮಾನಿಸಲಾಯಿತು. ಇದೇ ವೇಳೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Exit mobile version