Youth Parliament: ಯಲಹಂಕ ಕೇಂದ್ರೀಯ ವಿದ್ಯಾಲಯದಲ್ಲಿ ನೆರವೇರಿದ ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆ - Vistara News

ಬೆಂಗಳೂರು

Youth Parliament: ಯಲಹಂಕ ಕೇಂದ್ರೀಯ ವಿದ್ಯಾಲಯದಲ್ಲಿ ನೆರವೇರಿದ ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆ

Youth Parliament: ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸಲು ಮತ್ತು ಸಂಸದೀಯ ವ್ಯವಸ್ಥೆಯ ಬಗ್ಗೆ ತಿಳಿವಳಿಕೆ ಮೂಡಿಸಲು ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆ ಆಯೋಜಿಸಲಾಗಿತ್ತು.

VISTARANEWS.COM


on

Dignitaries inaugurate National Youth Parliament event
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಯಲಹಂಕದ ರೈಲ್ವೆ ಗಾಲಿ ಕಾರ್ಖಾನೆಯ ಕೇಂದ್ರೀಯ ವಿದ್ಯಾಲಯದಲ್ಲಿ (Kendriya Vidyalaya RWF) ಸೆ.7 ಮತ್ತು 8ರಂದು ಬೆಂಗಳೂರು ಪ್ರಾದೇಶಿಕ ಮಟ್ಟದ 34ನೇ ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆ ಆಯೋಜಿಸಲಾಗಿತ್ತು. ರಾಷ್ಟ್ರೀಯ ಯುವ ಸಂಸತ್ತು (Youth Parliament) ರಾಷ್ಟ್ರ ಮಟ್ಟದ ಸ್ಪರ್ಧೆಯಾಗಿದ್ದು, ಇದರಲ್ಲಿ ಧಾರವಾಡ, ಮೈಸೂರು ಸೇರಿ ವಿವಿಧೆಡೆಯ ನವೋದಯ ವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸಲು ಮತ್ತು ಸಂಸದೀಯ ವ್ಯವಸ್ಥೆಯ ಬಗ್ಗೆ ತಿಳಿವಳಿಕೆ ಮೂಡಿಸಲು ಯುವ ಸಂಸತ್ತು ಆಯೋಜಿಸಲಾಗಿತ್ತು. ಇದು ಮಕ್ಕಳಿಗೆ ತಮ್ಮ ಕರ್ತವ್ಯಗಳು ಮತ್ತು ಹಕ್ಕುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ದೇಶದ ಮಾದರಿ ಪ್ರಜೆಗಳಾಗಲು ನೆರವಾಗುತ್ತದೆ.


Dignitaries in National Youth Parliament Competition

2023-24ನೇ ಸಾಲಿನ ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆಯಲ್ಲಿ ಪ್ರಾದೇಶಿಕವಾಗಿ ಅರ್ಹತೆ ಪಡೆದ ಶಾಲೆಗಳಲ್ಲಿ ಬೆಂಗಳೂರಿನ ಕೇಂದ್ರೀಯ ವಿದ್ಯಾಲಯ (ಕೆವಿ) ಡಿಆರ್‌ಡಿಒ, ಕೆವಿ ಧಾರವಾಡ, ಕೆವಿ ಹೆಬ್ಬಾಳ, ಕೆವಿ ಬೆಳಗಾವಿ ನಂ2, ಕೆವಿ ಬಿಆರ್‌ಬಿಎನ್‌ಎಂಪಿಎಲ್‌ ಮೈಸೂರು ಆತಿಥೇಯ ಹಾಗೂ ಕೆವಿ ಆರ್‌ಡಬ್ಲ್ಯೂಎಫ್ ಯಲಹಂಕ (Kendriya Vidyalaya RWF) ಯಲಹಂಕ ಹಾಗೂ ಇತರ 3 ಶಾಲೆಗಳ ವಿದ್ಯಾರ್ಥಿಗಳು ಮೊದಲ ದಿನದಲ್ಲಿ ಭಾಗವಹಿಸಿದ್ದರು.

ಸೆ.7 ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಎಂಎಲ್‌ಸಿ ಎಚ್.ಎಸ್.ಗೋಪಿನಾಥ್, ಕೆವಿಎಸ್ ಬೆಂಗಳೂರು ಪ್ರದೇಶದ ಡಿಸಿ ಧರ್ಮೇಂದ್ರ ಪಟ್ಟೆ, ಎಸಿ ಪಿ.ಸಿ. ರಾಜು ಭಾಗವಹಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

ಇದಕ್ಕೂ ಓದಿ | SBI PO Recruitment 2023: 2000 ಪ್ರೊಬೇಷನರಿ ಹುದ್ದೆ ನೇಮಕಕ್ಕೆ ಎಸ್‌ಬಿಐ ಅರ್ಜಿ ಆಹ್ವಾನ, ಸೆ.27 ಅಪ್ಲೈಗೆ ಕೊನೆ ದಿನ

ಸೆ.8ರಂದು ಎಂಎಲ್‌ಸಿ ಡಿ.ಎಸ್.ಅರುಣ್, ಕೆವಿಎಸ್ ಬೆಂಗಳೂರು ಪ್ರದೇಶದ ಡಿಸಿ ಧರ್ಮೇಂದ್ರ ಪಟ್ಟೆ, ಎಸಿ ಪಿ.ಸಿ. ರಾಜು ಉಪಸ್ಥಿತರಿದ್ದರು. ಉಳಿದ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ನಂತರ ಸಮಾರೋಪ ಸಮಾರಂಭ ನೆರವೇರಿತು. ಈ ವೇಳೆ ಉತ್ತಮ ಭಾಷಣಕಾರರನ್ನು ಘೋಷಿಸಿ ಸನ್ಮಾನಿಸಲಾಯಿತು. ಇದೇ ವೇಳೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ಐಪಿಎಸ್ ಅಧಿಕಾರಿಯಾದ ಕ್ಯಾನ್ಸರ್‌ ಪೀಡಿತ ಬಾಲಕ; ಕನಸು ಈಡೇರಿಸಿ ಮಾನವೀಯತೆ ಮೆರೆದ ಪೊಲೀಸರು

ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕ್ಯಾನ್ಸರ್‌ ಪೀಡಿತ ಬಾಲಕನ ಆಸೆಯನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಈಡೇರಿಸಿದ್ದಾರೆ.

VISTARANEWS.COM


on

police 1
Koo

ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ 13 ವರ್ಷದ ಬಾಲಕನ, ಐಪಿಎಸ್ ಅಧಿಕಾರಿಯಾಗುವ ಕನಸನ್ನು ಈಡೇರಿಸುವ ಮೂಲಕ ಪೊಲೀಸರು ಮಾನವೀಯತೆ ಮೆರೆದ ಘಟನೆ ನಗರದಲ್ಲಿ ನಡೆದಿದೆ. ಸಣ್ಣ ವಯಸ್ಸಿನಲ್ಲೇ ಕ್ಯಾನ್ಸರ್‌ಗೆ ತುತ್ತಾಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನ (cancer-stricken boy) ಕನಸು ಈಡೇರಲು ನೆರವಾದ ಪೊಲೀಸರ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮೋಸಿನ್ ರಾಜ್‌ ಎಂಬ 13 ವರ್ಷದ ಬಾಲಕ ಐಪಿಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದ. ಆದರೆ, ಚಿಕ್ಕ ವಯಸ್ಸಿನಲ್ಲೇ ಮಾರಕ ಕ್ಯಾನ್ಸರ್‌ಗೆ ತುತ್ತಾಗಿದ್ದರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬಾಲಕನ ಆಸೆ ಬಗ್ಗೆ ತಿಳಿದುಕೊಂಡ ಬೆಂಗಳೂರು ಪೊಲೀಸ್ ಪರಿಹಾರ ಸಂಸ್ಥೆ ಹಾಗೂ ಕಿದ್ವಾಯಿ ಸಂಸ್ಥೆ, ಪೊಲೀಸರೊಂದಿಗೆ ಮಾತನಾಡಿ ಬಾಲಕನ ಆಸೆ ಈಡೇರಲು ಸಹಕರಿಸಿವೆ.

ಬಾಲಕನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ದಕ್ಷಿಣ ವಿಭಾಗದ ಪ್ರಭಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರು ಒಂದು ದಿನದ ಮಟ್ಟಿಗೆ ಬಾಲಕನಿಗೆ ಐಪಿಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟು, ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ | Exam Tips: ಮಕ್ಕಳ ಪರೀಕ್ಷೆ ಪೋಷಕರಿಗೂ ಪರೀಕ್ಷೆಯೇ? ಇಲ್ಲಿವೆ ಒತ್ತಡರಹಿತ ಎಕ್ಸಾಮ್‌ಗಾಗಿ ಟಿಪ್ಸ್!

Blast In Bengaluru: ಬೆಂಗಳೂರಿಗರೇ Be alert; ಸಂಶಯ ಬಂದರೆ ಇಲ್ಲಿಗೆ ಕಾಲ್‌ ಮಾಡಿ

ಬೆಂಗಳೂರು: ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ (Blast In Bengaluru) ಬ್ಲಾಸ್ಟ್‌ ಪ್ರಕರಣದ ಬಳಿಕ ಬೆಂಗಳೂರಲ್ಲಿ ಹೈ ಅಲರ್ಟ್ ಆಗಿರುವಂತೆ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚನೆ (rameshwaram cafe blast) ನೀಡಿದ್ದಾರೆ. ಜತೆಗೆ ಜನರು ಇಂತಹ ಸಮಯದಲ್ಲಿ ಆತಂಕಕ್ಕೆ ಒಳಗಾಗದೇ, ಅನುಮಾನಾಸ್ಪದ ವ್ಯಕ್ತಿಯನ್ನು ಕಂಡರೆ, ಯಾವುದಾರೂ ವಸ್ತು ಅಥವಾ ಬ್ಯಾಗ್‌ ಇರುವುದು ಕಂಡರೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಯಾರ ಮೇಲಾದರೂ ಸಂಶಯ ಬಂದರೆ ಕೂಡಲೇ 122ಗೆ ಸಂಖ್ಯೆಗೆ ಕರೆ ಮಾಡಿ, ಪೊಲೀಸರಿಗೆ ವಿಚಾರವನ್ನು ಮುಟ್ಟಿಸಿ. ನಾವು ನಿಮ್ಮನ್ನು ತ್ವರಿತವಾಗಿ ತಲುಪುತ್ತೇವೆ ಎಂದು ಕರ್ನಾಟಕ ರಾಜ್ಯ ಪೊಲೀಸ್‌ನ ಎಕ್ಸ್‌ ಖಾತೆಯಿಂದ ಮಾಹಿತಿ ನೀಡಿದ್ದಾರೆ.

ದಿ ರಾಮೇಶ್ವರಂ ಕೆಫೆಯಲ್ಲಿ ಕಡಿಮೆ ತೀವ್ರತೆಯ ಬಾಂಬ್‌ ಅನ್ನು ಸ್ಫೋಟಿಸಿರುವುದು ಹಲವು ಅನುಮಾನವನ್ನು ಮೂಡಿಸಿದೆ. ಪಕ್ಕಾ ನುರಿತ ಟೆರರಿಸ್ಟ್‌ಗಳಿಂದಲೇ ಈ ಕೃತ್ಯ ನಡೆದಿರುವ ಶಂಕೆ ಇದೆ. ನಗರ ಪೊಲೀಸರ ಗಮನವನ್ನು ಒಂದೇ ಕಡೆ ಕೇಂದ್ರಿಕೃತವಾಗುವಂತೆ ಈ ರೀತಿ ಹುನ್ನಾರ ಮಾಡಿದ್ದರಾ ಎಂಬ ಪ್ರಶ್ನೆ ಉದ್ಭವಿಸಿದೆ. ಕಡಿಮೆ ತೀವ್ರತೆಯ ಬಾಂಬ್‌ ಬಳಸಿ ಗಮನ ಈ ಕಡೆ ಇರುವಂತೆ ನೋಡಿಕೊಂಡು ನಂತರ ದೊಡ್ಡ ಬ್ಲಾಸ್ಟ್‌ಗೆ ಪ್ಲಾನ್‌ ಮಾಡಿರುವ ಶಂಕೆ ಇದೆ.

ಇದನ್ನೂ ಓದಿ: Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ 3 ತಿಂಗಳಿಂದಲೇ ಸ್ಕೆಚ್‌? ಮೊಬೈಲ್‌ ಬಳಸದೇ ಕೃತ್ಯ!

ಟ್ರಯಲ್‌ ಬ್ಲಾಸ್ಟ್‌ ಶಂಕೆ

ದಿ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಕ್ಕೂ ಮುನ್ನ ಟ್ರಯಲ್ ಬ್ಲಾಸ್ಟ್ ಮಾಡಿರುವ ಸಾಧ್ಯತೆ ಇದೆ. ಶಂಕಿತ ಬಾಂಬರ್ ತಂಡದಿಂದ ನಿರ್ಜನ ಹಾಗೂ ಕಾಡಿನಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಿರುವ ಶಂಕೆ ಇದೆ. ಆತ್ಯಾಧುನಿಕ ಟೈಮರ್, ತಂತಿ, ನಟ್‌ ಹಾಗೂ ಬೋಲ್ಟ್, ಡಿಟೋನೇಡರ್ ಬಳಸಿ. ಎಲ್ಲ ರೀತಿಯ ಪರೀಕ್ಷೆಯನ್ನು ನಡೆಸಿಯೇ ಕೆಫೆಯಲ್ಲಿ ಸ್ಫೋಟ ಮಾಡಿರಬಹುದು ಎನ್ನಲಾಗಿದೆ. ಬಾಂಬ್‌ ಪರೀಕ್ಷೆ ಇಲ್ಲದೇ ಏಕಾ ಏಕಿ ತಂದಿಟ್ಟಿರುವ ಸಾಧ್ಯತೆ ಕಡಿಮೆ ಇದೆ.

ಬ್ಲಾಸ್ಟ್ ಟೈಮ್ ಲೈನ್ ಹೀಗಿದೆ.

ಮಾರ್ಚ್‌ 1 2024ರ ಬೆಳಗ್ಗೆ 11:30ಕ್ಕೆ ಕೆಫೆಯೊಳಗೆ ಶಂಕಿತ ಪ್ರವೇಶಿಸಿದ್ದ. ನಂತರ 11:37ಕ್ಕೆ ರವೆ ಇಡ್ಲಿ ಪಡೆದಿದ್ದ.
11:44ಕ್ಕೆ ಹ್ಯಾಂಡ್ ವಾಶ್ ಬೆಸನ್‌ ಬಳಿ ಬಾಂಬ್ ಇದ್ದ ಬ್ಯಾಗ್‌ ಇಟ್ಟಿದ್ದ.
11:45ಕ್ಕೆ ಕೆಫೆಯಿಂದ ಹೊರಟ ಶಂಕಿತ
11:50ಕ್ಕೆ ಕೆಫೆ ಪಕ್ಕದಲ್ಲೇ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆ
11:51ಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಹತ್ತಿ ಪರಾರಿ
12:56ಕ್ಕೆ ಕೆಫೆಯಲ್ಲಿ ಬಾಂಬ್‌ ಬ್ಲಾಸ್ಟ್

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Blast in Bengaluru: ಇನ್ನು ಆರೇ ದಿನಕ್ಕೆ ವೈಟ್‌ಫೀಲ್ಡ್‌ ರಾಮೇಶ್ವರಂ ಕೆಫೆ ರೀ ಓಪನ್

Blast in Bengaluru: ಬಾಂಬ್‌ ಸ್ಫೋಟದಿಂದ ಹಾನಿಯಾದ ವೈಲ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಶಿವರಾತ್ರಿ ದಿನ (ಮಾ.8) ಮರು ಆರಂಭವಾಗಲಿದೆ ಎಂದು ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್ ತಿಳಿಸಿದ್ದಾರೆ.

VISTARANEWS.COM


on

Raghavendra rao
Koo

ಬೆಂಗಳೂರು: ಬಾಂಬ್‌ ಸ್ಫೋಟದಿಂದ ಹಾನಿಯಾದ ವೈಲ್‌ಫೀಲ್ಡ್‌ ಸಮೀಪದ ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಇನ್ನು ಆರೇ ದಿನಗಳಲ್ಲಿ ಮರು ಆರಂಭವಾಗಲಿದೆ. ಶಿವರಾತ್ರಿ ದಿನ ಮತ್ತೆ ರಾಮೇಶ್ವರಂ ಕೆಫೆ (The Rameshwaram Cafe) ಪುನರ್ಜನ್ಮ ಪಡೆಯುತ್ತದೆ. ನಮ್ಮ ಹೊಟೇಲ್ ಮತ್ತೆ ಆರಂಭವಾಗುತ್ತದೆ ಎಂದು ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ‌ ಪರವಾಗಿ ನಿಂತಿದ್ದಕ್ಕೆ ಜನರಿಗೆ ಧನ್ಯವಾದ ಹೇಳುತ್ತೇನೆ. 2012ರಲ್ಲಿ ರಾಮೇಶ್ವರಂ ಕೆಫೆ ಆರಂಭವಾಗಿತ್ತು. ನಾನು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಬಡ ಕುಟುಂಬದಿಂದ ಬಂದವನು. ಕುಮಾರಪಾರ್ಕ್ ಬಳಿ ಫುಟ್‌ಪಾತ್‌ನಲ್ಲಿ ನಮ್ಮ ಸಂಸ್ಥೆ ಶುರು ಮಾಡಿದ್ದೆವು. ಆಗಿನಿಂದ ಒಂದಲ್ಲ ಒಂದು ಕಷ್ಟ ಬರುತ್ತಿದೆ. ಪ್ರತಿ ಕಷ್ಟವನ್ನು ಎದುರಿಸಿ ಮೇಲೆ ಬಂದಿದ್ದೇವೆ. ನಮ್ಮಲ್ಲಿ ಸುಮಾರು ಎರಡು ಸಾವಿರ ಜನ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಭಾರತೀಯರಿಗೆ ಇದು ಹೊಸದಲ್ಲ, ನಮ್ಮನ್ನ ತುಳಿಯೋದಕ್ಕೆ ಬರುವವರು ಜಾಸ್ತಿ, ನಾವು ಸಮಸ್ಯೆಗಳನ್ನು ಎದುರಿಸಿ ಮೇಲೆ ಬರಬೇಕು. ನಾವು ಎಪಿಜೆ ಅಬ್ದುಲ್ ಕಲಾಂ ಅವರನ್ನು ಪ್ರೇರಣೆಯಾಗಿ ತೆಗೆದುಕೊಂಡ್ ಕೆಫೆ ಶರು ಮಾಡಿದ್ದೇವೆ. ಎಲ್ಲರಿನ್ನೂ ನಮ್ಮ ಹೊಟೇಲ್ ಸ್ವಾಗತಿಸಿ ಆಶ್ರಯ ನೀಡಿದೆ. ನಾನು ಹೊಟೇಲ್ ಶುರು ಮಾಡೋ ಮುನ್ನ ಬೇರೆ ಹೊಟೇಲ್‌ನಲ್ಲಿ ಕೆಲಸ ಮಾಡಿದ್ದೇನೆ. ನನಗೆ ಊಟ ಹಾಕಿದ ಹೊಟೇಲ್, ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ ಎಂದು ತಿಳಿಸಿದರು.

ಈ ಘಟನೆ ಸರಿಯಾದದ್ದು ಅಲ್ಲಾ, ನಾವೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು. ಬರೋ ಶುಕ್ರವಾರ ನಮ್ಮ ಹೊಟೇಲ್ ಮತ್ತೆ ಪುರ್ನಜನ್ಮ ತಾಳುತ್ತದೆ. ಪ್ರತಿಯೊಂದು ಹಂತದಲ್ಲೂ ಹೊಡೆತ ಬಿದ್ದಿದೆ, ಅದನ್ನೆ ಮೆಟ್ಟಿಲುಗಳೆಂದು ಭಾವಿಸಿ ಮೇಲೆ ಬಂದಿದ್ದೇವೆ. ನಿನ್ನೆ ನಡೆದ ಘಟನೆ ಯಾರು ಮಾಡಿದ್ದಾರೋ ಗೊತ್ತಿಲ್ಲ. ಯಾರು ಬರುತ್ತಾರೋ ಬರಲಿ, ನಾವು ಫೇಸ್ ಮಾಡುತ್ತೇವೆ. ಬರೋ ಶಿವರಾತ್ರಿ ದಿನ ಮತ್ತೆ ರಾಮೇಶ್ವರಂ ಕೆಫೆ ಪುನರ್ಜನ್ಮ ಪಡೆಯುತ್ತೆ, ಶಿವರಾತ್ರಿಯಂದೇ ಈ ಹೊಟೇಲ್ ಆರಂಭವಾಗುತ್ತದೆ. ಪೊಲೀಸ್ ಸಿಬ್ಬಂದಿ, ಜನರು ನಮ್ಮ ಜೊತೆಯಲ್ಲಿದ್ದಾರೆ ಎಂದು ಹೇಳಿದರು.

ಈ ಹಿಂದೆ ರಾಜಾಜಿನಗರ ಬ್ರಾಂಚ್‌ನಲ್ಕಿ ಬ್ಯಾಗ್ ಸಿಕ್ಕಿತ್ತು. ಅದರಲ್ಲಿ ಮಡಿಕೆ ಇತ್ತು, ಅದರ ಬಗ್ಗೆ ಸುಬ್ರಹ್ಮಣ್ಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ನಾವು ಆಹಾರದಲ್ಲಿ ಗುಣಮಟ್ಟ ಕಾಪಾಡುತ್ತಿದ್ದೇವೆ. ಆರಂಭದಲ್ಲಿ ಹೇಗೆ ಇತ್ತೋ, ಈಗಲೂ ಅದೇ ರೀತಿ ಇದೆ ಎಂದರು.

ಇದನ್ನೂ ಓದಿ | Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌; ಟೆಕ್ನಾಲಜಿ ಬಳಸಿ ವಿದ್ರೋಹಿಗಳ ಹಿಡಿಯಲು ಸಿಎಂ ಖಡಕ್‌ ಸೂಚನೆ

ಎಲ್ಲಾ ರಾಜ್ಯಗಳಲ್ಲಿ ಹೋಟೆಲ್‌ ತೆರೆಯುತ್ತೇವೆ

ಮೆಟಲ್ ಡಿಟೆಕ್ಟರ್ ಅಳವಡಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಕೆಫೆಯನ್ನು ಸರಿಪಡಿಸಿಕೊಳ್ಳುತ್ತೇವೆ. ತುಂಬಾ ನಷ್ಟವಾಗಿದೆ, ಅದನ್ನ ತಡೆದುಕೊಳ್ಳುತ್ತೇವೆ. ಎಲ್ಲಾ ರಾಜ್ಯದಲ್ಲೂ ನಮ್ಮ ಹೊಟೇಲ್ ಆರಂಭಿಸಬೇಕು ಎಂದುಕೊಂಡಿದ್ದೇವೆ. ಹಸಿದವರಿಗೆ ಊಟ ನೀಡುವ ಸಂಸ್ಕೃತಿ ನಮ್ಮದು. ಸಿಬ್ಬಂದಿ ಖರ್ಚನ್ನು ನಾವೇ ನೋಡಿಕೊಳ್ಳುತ್ತೇವೆ. ನಾವು ಅವರ ಕುಟುಂಬದೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು.

ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದ ಪೊಲೀಸ್‌ ಕಮಿಷನರ್‌

Rameswaram cafe bomb blast case No one has been arrested

ಬೆಂಗಳೂರು: ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ (rameshwaram cafe blast) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯು ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ ಸ್ಪಷ್ಟಪಡಿಸಿದ್ದಾರೆ.

ಘಟನಾ ಸ್ಥಳದಲ್ಲಿ ದೊರೆತ ಕುರುಹುಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಅನೇಕ ಪೊಲೀಸ್ ತಂಡಗಳು ಬೇರೆ ಬೇರೆ ಆಯಾಮಗಳಿಂದ ತನಿಖೆ ಕೈಗೊಳ್ಳುತ್ತಿವೆ. ಇದೊಂದು ಭದ್ರತಾ ವಿಷಯಕ್ಕೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣವಾಗಿದೆ. ಹೀಗಾಗಿ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ವಹಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರು ಗುಣಮುಖರಾಗುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.

ರಾಮೇಶ್ವರಂ ಬ್ರಾಂಚ್‌ಗಳ ಪರಿಶೀಲನೆ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ರಾಮೇಶ್ವರಂ ಮತ್ತೊಂದು ಬ್ರಾಂಚ್‌ಗಳಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ. ಇಂದಿರಾನಗರದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಿಸಿಟಿವಿ ದೃಶ್ಯಾವಳಿಯಲ್ಲಿ ಶಂಕಿತರ ಚಲನವಲನ ಇದೇಯಾ ಎಂದು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

ಸಂಶಯ ಬಂದರೆ ಇಲ್ಲಿಗೆ ಕಾಲ್‌ ಮಾಡಿ

ಬೆಂಗಳೂರು: ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ (Blast In Bengaluru) ಬ್ಲಾಸ್ಟ್‌ ಪ್ರಕರಣದ ಬಳಿಕ ಬೆಂಗಳೂರಲ್ಲಿ ಹೈ ಅಲರ್ಟ್ ಆಗಿರುವಂತೆ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚನೆ (rameshwaram cafe blast) ನೀಡಿದ್ದಾರೆ. ಜತೆಗೆ ಜನರು ಇಂತಹ ಸಮಯದಲ್ಲಿ ಆತಂಕಕ್ಕೆ ಒಳಗಾಗದೇ, ಅನುಮಾನಾಸ್ಪದ ವ್ಯಕ್ತಿಯನ್ನು ಕಂಡರೆ, ಯಾವುದಾರೂ ವಸ್ತು ಅಥವಾ ಬ್ಯಾಗ್‌ ಇರುವುದು ಕಂಡರೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಯಾರ ಮೇಲಾದರೂ ಸಂಶಯ ಬಂದರೆ ಕೂಡಲೇ 122ಗೆ ಸಂಖ್ಯೆಗೆ ಕರೆ ಮಾಡಿ, ಪೊಲೀಸರಿಗೆ ವಿಚಾರವನ್ನು ಮುಟ್ಟಿಸಿ. ನಾವು ನಿಮ್ಮನ್ನು ತ್ವರಿತವಾಗಿ ತಲುಪುತ್ತೇವೆ ಎಂದು ಕರ್ನಾಟಕ ರಾಜ್ಯ ಪೊಲೀಸ್‌ನ ಎಕ್ಸ್‌ ಖಾತೆಯಿಂದ ಮಾಹಿತಿ ನೀಡಿದ್ದಾರೆ.

ದಿ ರಾಮೇಶ್ವರಂ ಕೆಫೆಯಲ್ಲಿ ಕಡಿಮೆ ತೀವ್ರತೆಯ ಬಾಂಬ್‌ ಅನ್ನು ಸ್ಫೋಟಿಸಿರುವುದು ಹಲವು ಅನುಮಾನವನ್ನು ಮೂಡಿಸಿದೆ. ಪಕ್ಕಾ ನುರಿತ ಟೆರರಿಸ್ಟ್‌ಗಳಿಂದಲೇ ಈ ಕೃತ್ಯ ನಡೆದಿರುವ ಶಂಕೆ ಇದೆ. ನಗರ ಪೊಲೀಸರ ಗಮನವನ್ನು ಒಂದೇ ಕಡೆ ಕೇಂದ್ರಿಕೃತವಾಗುವಂತೆ ಈ ರೀತಿ ಹುನ್ನಾರ ಮಾಡಿದ್ದರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Lok Sabha Election 2024

Lok Sabha Election 2024: ‌ಮುನಿಸು ಬಿಟ್ಟು ಬಿಎಸ್‌ವೈ ಭೇಟಿ ಮಾಡಿದ ಸೋಮಣ್ಣ! ತುಮಕೂರು ಲೋಕಸಭಾ ಸೀಟ್‌ ಫಿಕ್ಸ್?

Lok Sabha Election 2024: ‌ಲೋಕಸಭೆಗೆ ಸ್ಪರ್ಧೆ ಮಾಡಲೇಬೇಕೆಂಬ ನಿಟ್ಟಿನಲ್ಲಿ ವಿ. ಸೋಮಣ್ಣ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ಬಿಜೆಪಿ ಹೈಕಮಾಂಡ್ ಬಳಿಯೂ ಚರ್ಚೆ ಮಾಡಿದ್ದಾರೆ. ಟಿಕೆಟ್ ಫೈನಲ್ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈಗ ಬಿಎಸ್‌. ಯಡಿಯೂರಪ್ಪ ಸಹಕಾರ ಕೋರಲು ಬಂದಿದ್ದಾರೆ ಎನ್ನಲಾಗಿದೆ.

VISTARANEWS.COM


on

Lok Sabha Election 2024 V Somanna meets BS Yediyurappa and Tumkur Lok Sabha seat fixed
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ತಂತ್ರಗಾರಿಕೆಯಲ್ಲಿ ನಿರತವಾಗಿವೆ. ಇನ್ನು ಬಿಜೆಪಿ ಹೈಕಮಾಂಡ್‌ (BJP high command) ತನ್ನ ಮೊದಲ ಪಟ್ಟಿಯನ್ನು ಶನಿವಾರ (ಮಾ. 2) ಬಿಡುಗಡೆ ಮಾಡಿದೆ. ಆದರೆ, ಇದರಲ್ಲಿ ಕರ್ನಾಟಕದ ಯಾವೊಬ್ಬರ ಹೆಸರನ್ನೂ ಪ್ರಕಟ ಮಾಡಿಲ್ಲ. ಇದಕ್ಕೆ ಕಾರಣ, ಬಿಜೆಪಿ-ಜೆಡಿಎಸ್‌ ಮೈತ್ರಿಯಾಗಿದ್ದು (BJP JDS Alliance), ಇನ್ನೂ ಸೀಟು ಹಂಚಿಕೆಯಾಗಿಲ್ಲ. ಈ ನಡುವೆ ಬಿಜೆಪಿಯ ಕೆಲವು ಹಾಲಿ ಸಚಿವರು ಚುನಾವಣಾ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಈ ಸ್ಥಾನಕ್ಕೆ ಪೈಪೋಟಿಗಳು ಶುರುವಾಗಿವೆ. ಹೀಗಾಗಿ ತುಮಕೂರು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ವಿ. ಸೋಮಣ್ಣ (V Somanna) ಮುನಿಸು ಮರೆತು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬಿ.ಎಸ್.‌ ಯಡಿಯೂರಪ್ಪ ನಿವಾಸಕ್ಕೆ ಪುತ್ರ ಅರುಣ್ ಜತೆ ಆಗಮಿಸಿದ ಮಾಜಿ ಸಚಿವ ವಿ. ಸೋಮಣ್ಣ, ತುಮಕೂರು ಲೋಕಸಭಾ ಚುನಾವಣೆ ಟಿಕೆಟ್ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರ ಮನವೊಲಿಸಲು ಮುಂದಾಗಿದ್ದಾರೆ. ಸೋಮಣ್ಣ ಆಗಮನಕ್ಕೆ ಮೊದಲೇ ಹಾಲಿ ಸಂಸದ ಬಸವರಾಜ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಗಮಿಸಿದ್ದರು. ಮತ್ತೊಂದು ಕಡೆ ಮಾಜಿ ಸಚಿವ ಮಾಧುಸ್ವಾಮಿ ಪುತ್ರ ಸುದೀಪ್ ಕೂಡ ಆಗಮಿಸಿದ್ದು ವಿಶೇಷವಾಗಿತ್ತು. ಹೀಗಾಗಿ ಬಿಎಸ್‌ವೈ ಮನೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿತ್ತು.

ತುಮಕೂರು ಟಿಕೆಟ್‌ ಅಂತಿಮ?

ಸಂಸದ ಬಸವರಾಜ್ ನಿವೃತ್ತಿ ಘೋಷಣೆ ಹಿನ್ನೆಲೆಯಲ್ಲಿ ಈಗ ಅಲ್ಲಿ ಲೋಕಸಭಾ ಕ್ಷೇತ್ರಕ್ಕೆ ನೂತನ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕಿದೆ. ಇದಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಈಗಾಗಲೇ ಮಾಜಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ವಿ. ಸೋಮಣ್ಣ ಸೇರಿದಂತೆ ಹಲವರು ರೇಸ್‌ನಲ್ಲಿದ್ದಾರೆ. ಅಲ್ಲದೆ, ಶತಾಯಗತಾಯ ತಾವು ಲೋಕಸಭೆಗೆ ಸ್ಪರ್ಧೆ ಮಾಡಲೇಬೇಕೆಂಬ ನಿಟ್ಟಿನಲ್ಲಿ ವಿ. ಸೋಮಣ್ಣ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ಬಿಜೆಪಿ ಹೈಕಮಾಂಡ್ ಬಳಿಯೂ ಚರ್ಚೆ ಮಾಡಿದ್ದಾರೆ. ಟಿಕೆಟ್ ಫೈನಲ್ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈಗ ಬಿಎಸ್‌. ಯಡಿಯೂರಪ್ಪ ಸಹಕಾರ ಕೋರಲು ಬಂದಿದ್ದಾರೆ ಎನ್ನಲಾಗಿದೆ. ಹಳೆಯದನ್ನೆಲ್ಲ ಮರೆತು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.

ಶೆಟ್ಟರ್‌ರಿಂದ ಸಂದಾನ

ಈಗಾಗಲೇ ಸೋಮಣ್ಣ ಅವರು ಬಿ.ಎಸ್.‌ ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ವಿರುದ್ಧವಾಗಿ ಹಲವು ಬಾರಿ ಬಹಿರಂಗವಾಗಿ ಮಾತನಾಡಿದ್ದಾರೆ. ಈ ಸಂಬಂಧ ಯಡಿಯೂರಪ್ಪ ಬೇಸರಗೊಂಡಿದ್ದರು. ಈಗ ಮಾಜಿ ಸಿಎಂ ಜಗದೀಶ್‌ ಶೆಟ್ಟರ್ ಅವರಿಂದ ಬಿಎಸ್‌ವೈ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ನಾವು ಟಿಕೆಟ್ ಬಗ್ಗೆ ಚರ್ಚೆ ಮಾಡಿಲ್ಲ: ಸೋಮಣ್ಣ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ವಿ. ಸೋಮಣ್ಣ, ನಾವು ಟಿಕೆಟ್ ಬಗ್ಗೆ ಚರ್ಚೆ ಮಾಡಿಲ್ಲ. ನೋವುಗಳ ಬಗ್ಗೆ ಚರ್ಚೆಯಾಗಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಬೇಕು. ಬಿ.ಎಸ್.‌ ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಅವರ ಜತೆ ಚರ್ಚೆಯಾಗಿದೆ. ಯಾವುದೇ ಗೊಂದಲ ಬೇಡ ಅಂತ ಹೇಳಿದ್ದಾರೆ ಎಂದು ಹೇಳಿದರು.

ಮುಂದಿನ ಮೇ ವರೆಗೂ ಚುನಾವಣೆ ಕಾವು ಇರಲಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವ ಬಯಕೆ, ಅದಕ್ಕೆ ಪಣ ತೊಟ್ಟಿದ್ದೇವೆ. ನನ್ನ ಅಸಮಾಧಾನವನ್ನು ಈಗಾಗಲೇ ಹೊರ ಹಾಕಿದ್ದೇನೆ. ನಿಮಗೂ ಗೊತ್ತಿದೆ. ಎಲ್ಲದಕ್ಕಿಂತ ದೇಶ ದೊಡ್ಡದು. ‌ಮೋದಿಗೆ ಜತೆಯಾಗೋಣ ಎಂದು ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ನಾನೂ ಆಕಾಂಕ್ಷಿ ಅಂತ ಹೇಳಿದ್ದೇನೆ. ನಾನು ಯಾವುದಾದರೂ ಪಕ್ಷಕ್ಕೆ ಹೋಗುತ್ತೇನೆ ಎಂದು ಹೇಳಿದ್ದೆನಾ? ನೀವು ಕುಸ್ತಿ ಆಡಲ್ವಾ? ಮ್ಯಾನೇಜ್ಮೆಂಟ್ ಜತೆ ಕುಸ್ತಿ ಮಾಡಲ್ವಾ? ಕಾಂಗ್ರೆಸ್‌ಗೆ ಉತ್ತರ ಕೊಡಬೇಕಿದೆ. ಅದಕ್ಕೆ ನಿರ್ಧಾರ ಮಾಡುತ್ತಿದ್ದೇವೆ ಎಂದು ವಿ. ಸೋಮಣ್ಣ ಹೇಳಿದರು.

ಇದನ್ನೂ ಓದಿ: Lok Sabha Election 2024: ಬಿಜೆಪಿ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರಿಲ್ಲ; ರಾಜೀವ್‌ ಚಂದ್ರಶೇಖರ್‌ಗೆ ತಿರುವನಂತಪುರ ಟಿಕೆಟ್‌

ತುಮಕೂರಲ್ಲಿ ಗೆಲ್ಲೋದು ಮುಖ್ಯ

ರಾಜಕಾರಣದಲ್ಲಿ ನಾನು 45 ವರ್ಷ ಮಣ್ಣು ಹೊತ್ತಿದ್ದೇನೆ. ಅದನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ನೋಡುತ್ತಿದ್ದಾರೆ. ತುಮಕೂರಿನಲ್ಲಿ ಹಾಲಿ ಸಂಸದರು ವಯಸ್ಸಿನ ಕಾರಣ ಸ್ಪರ್ಧೆ ಮಾಡಲ್ಲ ಎಂದು ಹೇಳಿದರು. ಅದಕ್ಕೆ ಅದು ಬಿಜೆಪಿ ಸೀಟು ಆಗಿದೆ. ಜೆಡಿಎಸ್‌ ಸೀಟು ಅಂತ ನಿರ್ಧಾರ ಆಗಿಲ್ಲ. ಒಟ್ಟಿನಲ್ಲಿ ಅಲ್ಲಿ ಗೆಲ್ಲೋದು ಮುಖ್ಯ ಎಂದು ವಿ. ಸೋಮಣ್ಣ ಹೇಳಿದರು.

Continue Reading

ಕರ್ನಾಟಕ

Lalbagh Botanical Garden: ಲಾಲ್ ಬಾಗ್​ನಲ್ಲಿ ಮಿನಿ ಪಶ್ಚಿಮ ಘಟ್ಟ; ರಾಜಧಾನಿಯಲ್ಲೇ ಸಿಗಲಿದೆ ದಟ್ಟಾರಣ್ಯದ ಅನುಭವ!

ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆಯು 6 ಎಕರೆ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಬಗೆಯ ನಿತ್ಯ ಹರಿದ್ವರ್ಣ ಗಿಡಗಳನ್ನು ಬೆಳೆಸುತ್ತಿದ್ದು, ಪಶ್ಚಿಮ ಘಟ್ಟದ ರೀತಿ ಅರಣ್ಯ ಅಭಿವೃದ್ಧಿಪಡಿಸಲು ಮುಂದಾಗಿದೆ.

VISTARANEWS.COM


on

Mini Western Ghats at Lalbagh You will experience the dense forest in Bangalore
Koo

ಬೆಂಗಳೂರು: ಲಾಲ್‌ಬಾಗ್‌ ಉದ್ಯಾನವನ ರಾಜಧಾನಿಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಫ್ಲವರ್ ‍ಶೋ ಸಂದರ್ಭದಲ್ಲಿ ವಿವಿಧೆಡೆಯಿಂದ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಸುಂದರವಾದ ಬಗೆಬಗೆಯ ಹೂಗಳು, ಸಸಿಗಳು, ಅಪರೂಪದ ಮರಗಳಲ್ಲದೇ ಶೀಘ್ರದಲ್ಲೇ ನಿತ್ಯ ಹರಿದ್ವರ್ಣ ಕಾಡನ್ನೂ ನೋಡುವ ಅವಕಾಶ ಪ್ರವಾಸಿಗರಿಗೆ ಸಿಗಲಿದೆ.

ಹೌದು, ಲಾಲ್‌ಬಾಗ್‌ನಲ್ಲಿ ಸುಮಾರು 6 ಎಕರೆ ಜಾಗದಲ್ಲಿ ಪಶ್ಚಿಮ ಘಟ್ಟದಂತಹ ಅರಣ್ಯವನ್ನು ತೋಟಗಾರಿಕೆ ಇಲಾಖೆಯಿಂದ ನಿರ್ಮಿಸಲಾಗುತ್ತಿದೆ. ಹೀಗಾಗಿ ಜನರು ಇನ್ಮುಂದೆ ದಟ್ಟಾರಣ್ಯ ನೋಡಲು ಪಶ್ಚಿಮ ಘಟ್ಟಗಳಿಗೆ ಹೋಗಬೇಕಿಲ್ಲ. ಬದಲಾಗಿ ನಗರದ ಸಸ್ಯಕಾಶಿ ಲಾಲ್ ಬಾಗ್ ಬಂದ್ರೆ ಸಾಕು. ಇಲ್ಲಿ ನಿತ್ಯ ಹರಿದ್ವರ್ಣ ಕಾಡಿನ ಅನುಭವ ಪಡೆಯಬಹುದಾಗಿದೆ.

ಲಾಲ್ ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆಯು 6 ಎಕರೆ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಬಗೆಯ ನಿತ್ಯ ಹರಿದ್ವರ್ಣ ಗಿಡಗಳನ್ನು ಬೆಳೆಸುತ್ತಿದ್ದು, ಪಶ್ಚಿಮ ಘಟ್ಟದ ರೀತಿ ಅರಣ್ಯ ಅಭಿವೃದ್ಧಿಪಡಿಸಲು ಮುಂದಾಗಿದೆ. ಈಗಾಗಲೇ ಈ ಗಿಡಗಳನ್ನು ಹಾಕಿ 5 ರಿಂದ 6 ತಿಂಗಳು‌ ಕಳೆದಿದ್ದು, ಇನ್ನು ಐದು ವರ್ಷದಲ್ಲಿ ಈ ಗಿಡಗಳು ದೊಡ್ಡದಾಗಿ ಬೆಳೆಯಲಿವೆ. ಇದರಿಂದ ದಟ್ಟ ಕಾಡು ಇಲ್ಲಿ ನಿರ್ಮಾಣವಾಗಲಿವೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಕರ್ನಾಟಕದ ಏಳು ಜಿಲ್ಲೆಗಳಿಂದ ಈ ಸಸ್ಯಗಳನ್ನು ಇಲ್ಲಿಗೆ ತರಲಾಗಿದ್ದು, ಆ ಸಸ್ಯಗಳಲ್ಲಿ ಅಪರೂಪದ, ಅಳಿವಿನಂಚಿನಲ್ಲಿರುವ, ಸ್ಥಳೀಯ ಸಸ್ಯಗಳು ಇವೆ.

ಲಾಲ್‌ ಬಾಗ್‌ನಲ್ಲಿ ಬೆಳೆಸುತ್ತಿರುವ ಗಿಡಗಳು

ಬೆಂಗಳೂರಿನ ಲಾಲ್‌ಬಾಗ್‌ ಉದ್ಯಾನದಲ್ಲಿ ಈಗಾಗಲೇ 2350 ಜಾತಿ ಸಸ್ಯ, ವೃಕ್ಷಗಳಿವೆ. ಇಲ್ಲಿರುವ ಕೆಲವು ಮರಗಳು 200 ವರ್ಷಗಳಿಗಿಂತ ಹಳೆಯದಾಗಿವೆ. ಇದೀಗ ಪಶ್ಚಿಮ ಘಟ್ಟದಂತಹ ಅರಣ್ಯ ನಿರ್ಮಾಣಕ್ಕಾಗಿ ಉಳುಗೇರಿ, ಪ್ರುತ್ರಂಜೀವ, ಎಣ್ಣೆ ಮರ, ಗಾರ್ಸಿನಿಯಾ, ಮ್ಯಾಂಗೋ ಸ್ಟೀನ್, ನವಿಲಾಡಿ, ದೂಪದ ಮರ, ಡಯಾಸ್ ಸ್ಪರಸ್, ಪಾಲ್ಸ ಹಣ್ಣು,‌ ಸ್ರೋಪ್ ಪೈನ್, ಅಂಟುವಾಳ, ಮಡ್ಡಿ ದೀಪದ ಮರ, ಸ್ಫೈಸ್ ಮರಗಳು, ರುದ್ರಾಕ್ಷಿ ಮರ, ತಾರೇ ಮರ, ಆರ್​ಡಿಸಿಯಾ ಎಮಿಲಿಸಿಸ್‌ ಸೇರಿದಂತೆ ಹಲವು ಅಪರೂಪದ ಗಿಡಗಳನ್ನು ನೆಡಲಾಗಿದೆ.

ಇದನ್ನೂ ಓದಿ | Spring Tourism: ವಸಂತ ಕಾಲದಲ್ಲಿ ವೀಕ್ಷಿಸಲೇಬೇಕಾದ ಭಾರತದ ರಮ್ಯ ತಾಣಗಳಿವು!

ಈ ಅರಣ್ಯ ನಿರ್ಮಿಸಲು ಒಟ್ಟು 45 ಲಕ್ಷದಷ್ಟು ಖರ್ಚು ಮಾಡಿದ್ದು, ಸದ್ಯ ಬೊಟಾನಿಕಲ್ ಗಾರ್ಡನ್ ಬಗ್ಗೆ ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ನೋಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.‌ ಮುಂದಿನ ದಿನಗಳ‌ಲ್ಲಿ ಇಲ್ಲಿ ಮರಗಳು ದೊಡ್ಡದಾದ ನಂತರ ಪ್ರವಾಸಿಗರಿಗೆ ನೋಡಲು ಅವಕಾಶ ಸಿಗಲಿದೆ.

Continue Reading
Advertisement
Yuva Movie song
ಕರ್ನಾಟಕ4 hours ago

Yuva Rajkumar: ಅಭಿಮಾನಿಗಳಿಂದ ʼಯುವʼ ಚಿತ್ರದ ಮೊದಲ ಸಾಂಗ್‌ ರಿಲೀಸ್‌; ಮಾಸ್ ಲುಕ್‌ನಲ್ಲಿ ಯುವ ರಾಜಕುಮಾರ್

Shashi Tharoor And Rajeev Chandrasekhar
ದೇಶ4 hours ago

ಬಿಜೆಪಿ ಪಟ್ಟಿ ಪ್ರಕಟ: ತಿರುವನಂತಪುರಂನಲ್ಲಿ ರಾಜೀವ್‌ ಚಂದ್ರಶೇಖರ್‌ Vs ಶಶಿ ತರೂರ್?‌

HIGH dose injection
ಕರ್ನಾಟಕ5 hours ago

ಕೃತಕ ಗರ್ಭಧಾರಣೆಗೆ ಹೈ ಡೋಸ್ ಇಂಜೆಕ್ಷನ್‌; ಖಾಸಗಿ ಆಸ್ಪತ್ರೆ ಎಡವಟ್ಟಿಗೆ ಕಣ್ಣು‌ ಕಳೆದುಕೊಂಡ ಮಹಿಳೆ!

Narendra Modi
ದೇಶ5 hours ago

Narendra Modi: ಬಿಜೆಪಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಚುನಾವಣೆಗೆ ಮೋದಿ ಸಂದೇಶ; ಏನದು?

Sophie Devine and Smriti Mandhana warm up ahead of their fourth game
ಕ್ರಿಕೆಟ್5 hours ago

WPL Points Table: ಹೀನಾಯ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಕುಸಿತ ಕಂಡ ಆರ್​ಸಿಬಿ

Pralhad Joshi
ಕರ್ನಾಟಕ5 hours ago

ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ: ಪ್ರಲ್ಹಾದ್‌ ಜೋಶಿ ಭರವಸೆ

Nat Sciver-Brunt celebrates the dismissal of S Meghana
ಕ್ರೀಡೆ6 hours ago

WPL 2024: ಸತತ 2ನೇ ಸೋಲಿಗೆ ತುತ್ತಾದ ಆರ್​ಸಿಬಿ; ಮುಂಬೈಗೆ 7 ವಿಕೆಟ್​ ಗೆಲುವು

Banavasi Kadambotsava Minister Mankala Vaidya inspected the preparations
ಉತ್ತರ ಕನ್ನಡ6 hours ago

Uttara Kannada News: ಬನವಾಸಿ ಕದಂಬೋತ್ಸವ; ಪೂರ್ವ ಸಿದ್ಧತೆ ಪರಿಶೀಲಿಸಿದ ಸಚಿವ ಮಂಕಾಳ ವೈದ್ಯ

police 1
ಕರ್ನಾಟಕ7 hours ago

ಐಪಿಎಸ್ ಅಧಿಕಾರಿಯಾದ ಕ್ಯಾನ್ಸರ್‌ ಪೀಡಿತ ಬಾಲಕ; ಕನಸು ಈಡೇರಿಸಿ ಮಾನವೀಯತೆ ಮೆರೆದ ಪೊಲೀಸರು

Mukesh Ambani Cries
ದೇಶ7 hours ago

ಮದುವೆ ಪೂರ್ವ ಸಂಭ್ರಮದಲ್ಲಿ ಮಗನ ದುಃಖ ಕೇಳಿ ಗಳಗಳನೆ ಅತ್ತ ಮುಕೇಶ್‌ ಅಂಬಾನಿ!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameswaram cafe bomb blast case Accused caught on CCTV
ಬೆಂಗಳೂರು11 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು15 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು1 day ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ4 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ5 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

ಟ್ರೆಂಡಿಂಗ್‌