ಬೆಂಗಳೂರು : ರಾಜ್ಯದ ರಾಜಧಾನಿಗೂ ಹಾಗೂ ಟ್ರಾಫಿಕ್‌ಗೂ ಅದೇನೋ ಅವಿನಾಭಾವ ಸಂಬಂಧ. ಕೊರೋನಾ ಕೊಂಚ ಕಡಿಮೆ ಆದರೂ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಒದ್ದಾಡೋದು ಮಾತ್ರ ತಪ್ಪಿದ್ದಲ್ಲ. ಅಷ್ಟೇ ಅಲ್ಲದೇ ಮೆಟ್ರೋ ನಿಲ್ದಾಣದಿಂದ ಜನರಿಗೆ ಮನೆಯನ್ನ ಸೇರಲು ಕಿಲೋಮೀಟರ್‌ನಷ್ಟು ನಡೆಯೋ ಫಜೀತಿ ಮಾತ್ರ ತಪ್ಪಿದ್ದಲ್ಲ. ಆದರೆ ಇದಕ್ಕೆಲ್ಲ ಬ್ರೇಕ್ ಹಾಕಲು ಬರ್ತಾ ಇದೆ ನಿಯೋ ಮೆಟ್ರೋ.
ಏನಿದು ನಿಯೋ ಮೆಟ್ರೋ ?
ಸಾಮಾನ್ಯವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಅಂದಾಜು 14 ಮೀಟರ್ ಉದ್ದವಿರುತ್ತವೆ. ಸದ್ಯ ಬೆಂಗಳೂರು ಮೆಟ್ರೊ ರೈಲ್‌ನ ಪ್ರತಿ ಬೋಗಿ 20.8 ಉದ್ದವಿರುತ್ತದೆ. ನಗರದಲ್ಲಿ ಇದೇ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವ ನಿಯೋ ಮೆಟ್ರೋ ರೈಲು 18 ರಿಂದ 25 ಮೀ ಉದ್ದವಿದ್ದು, ಬಸ್ ಮಾದರಿಯಲ್ಲಿ ಬೋಗಿಯನ್ನು ಹೊಂದಿದೆ. ಸಾಮಾನ್ಯ ಮೆಟ್ರೋ ರೈಲಿಗಳಿಗಿಂತ ಬೋಗಿಯು ಚಿಕ್ಕದಾಗಿದ್ದು ಮತ್ತು ಹಗುರವಾಗಿರುವುದು ಇನ್ನೂ ವಿಶೇಷ. ನಿಯೋ ರಸ್ತೆಯ ಸಮತಟ್ಟಾದ ಹಾಗೂ ಏರಿಳಿತದ ಪ್ರದೇಶಗಳಲ್ಲಿ ಚಲಿಸಲಿವೆ.
ಇದನ್ನೂ ಓದಿ : ಒಂದು ವರ್ಷದಿಂದ ಕೊರೆಯುತ್ತಿದ್ದ ಸುರಂಗ ಪೂರ್ಣ, Namma Metro ದಿಂದ ಮತ್ತೊಂದು ಮೈಲಿಗಲ್ಲು
ನಿಯೋ ಸ್ಪೇಷಾಲಿಟಿ :
ಒಂದೇ ಸಮಯದಲ್ಲಿ 250 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಸಹ ಹೊಂದಿದೆ. ಈ ನಿಯೋ ರೈಲಿನ ಕೋಚ್‌ಗೆ ಟೈರ್‌ಗಳನ್ನು ಅಳವಡಿಸಲಾಗುತ್ತಿದ್ದು, ವಿದ್ಯುತ್ ರೈಲಿನ ಮಾದರಿಯಲ್ಲಿ ವಿದ್ಯುತ್ ಸಂಪರ್ಕದಲ್ಲೇ ಚಲಿಸುತ್ತದೆ. ಓವರ್ ಹೆಡ್ ಎಲೆಕ್ಟ್ರಿಕ್ ಟ್ರಾಕ್ಷನ್ ಹೊಂದಿರುವ ಟ್ರಾಲಿಬಸ್ ವ್ಯವಸ್ಥೆಗೆ ʼಟೆಕ್ ಹಳ್ಳಿ ಎಕ್ಸ್‌ಪ್ರೆಸ್ʼ ಎಂಬ ಕರೆಯುವ ಸಾಧ್ಯತೆಗಳು ಇದೆ. ಹವಾನಿಯಂತ್ರಿತ ಮತ್ತು ಸ್ವಯಂ ಚಾಲಿತ ಬಾಗಿಲು ಮುಚ್ಚುವ ವ್ಯವಸ್ಥೆ, ಲೆವೆಲ್ ಬೋರ್ಡಿಂಗ್, ಆರಾಮದಾಯಕ ಆಸನಗಳು, ಪ್ರಕಟಣೆ ವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್ ಪ್ರದರ್ಶನ ಫಲಕ ಇರಲಿದೆ.
ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಯಲ್ ಟೌನ್‌ಶಿಪ್ ಅಥಾರಿಟಿಯಿಂದ ಮೆಟ್ರೋ ನಿಯೋ ರೈಲು ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಮೇಟ್ರೋ ಫೀಡರ್ ಆಗಿಯೂ ಕೂಡ ಇದು ಕಾರ್ಯ ನಿರ್ವಹಿಸಲಿದೆ. ಮೆಟ್ರೊ ರೈಲು ಇಳಿದ ನಂತರ ಮನೆಯವರೆಗೆ ತೆರಳಲು ಸಂಪರ್ಕ ಸಾಧನಗಳಿಲ್ಲ ಎಂಬ ಕೊರಗಿಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಿದೆ.
ಖಾಸಗಿ ಸಹಭಾಗಿತ್ವ :
ಬಿಎಂಆರ್‌ಸಿಎಲ್ ನಿಯೋ ರೈಲಿಗೆ ಬೇಕಾದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಕಂಪನಿಗಳ ಎಂಪ್ಲಾಯಿಸ್‌ಗೆ ಉಚಿತ ಪ್ರಯಾಣ ನೀಡುತ್ತಿರುವುದು ವಿಶೇಷ.
ಮುಖ್ಯ ಉದ್ದೇಶ :
ಮೆಟ್ರೋ ಸೇವೆ ನಗರದ ಪ್ರತಿಯೊಂದು ದಿಕ್ಕಿನಲ್ಲಿಯೂ ವಿಸ್ತರಣೆ ಹೊಂದಿದ್ದು, ಆದರೆ ಜನವಸತಿ ಅಥವಾ ಸಣ್ಣ ಪ್ರದೇಶಗಳಿಗೆ ಮೆಟ್ರೋ ಸೇವೆ ನೀಡಲು ಸಾಧ್ಯವಿಲ್ಲ. ಇಂತಹ ಸ್ಥಳಗಳಲ್ಲಿ ನಿಯೋ ಮೆಟ್ರೋ, ಮೆಟ್ರೋ ಲೈಟ್ ಸೇರಿ ವಿವಿಧ ಸೇವೆ ಆರಂಭಿಸಲು ಈ ಮುಂಚೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಿತ್ತು. ಮೆಟ್ರೋದ ಪ್ರಮುಖ ಯೋಜನೆಗಳಲ್ಲಿ ಒಂದಾದ ಹಳದಿಮಾರ್ಗದಲ್ಲಿ (ಆರ್.ವಿ. ರಸ್ತೆ-ಬೊಮ್ಮಸಂದ್ರ) ಎರಡು ಮೆಟ್ರೋ ನಿಲ್ದಾಣಗಳು ಪ್ರಾರಂಭವಾಗಲಿದೆ. ಇಲ್ಲಿಂದಎಲೆಕ್ಟ್ರಾನಿಕ್ ಸಿಟಿ ಒಳಭಾಗದ ವಿವಿಧ ಪ್ರದೇಶಗಳಿಗೆ ಹೋಗಲು ಕಾರು, ಬಸ್ ಮತ್ತು ಇತರೆ ವಾಹನಗಳನ್ನು ಬಳಸಲಾಗುತ್ತಿದೆ.
ಇದನ್ನೂ ಓದಿ : ಕಲ್ಲಿದ್ದಲು ಕೊರತೆ, ಇನ್ನಷ್ಟು ಪವರ್ ಕಟ್ ಅನುಭವಿಸಲು ರೆಡಿಯಾಗಿ!
ಜನರಿಗೆ ಭರ್ಜರಿ ಆಫರ್ :
ಮೆಟ್ರೋದಿಂದ ಇಳಿದ ಸಾರ್ವಜನಿಕರಿಗೆ ಎಲೆಕ್ಟ್ರಾನಿಕ್ಸ್ ಸಿಟಿ ಟೌನ್‌ಶಿಪ್‌ನಲ್ಲಿರುವ ಕಂಪನಿಗಳು, ಕಚೇರಿಗಳು, ಕೈಗಾರಿಕೆಗಳು, ಕಾರ್ಖಾನೆಗಳು, ಜನವಸತಿ, ಅಪಾರ್ಟ್‌ಮೆಂಟ್‌ಗಳು ಹೋಗಲು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ಎಲ್ಸಿಟಾ) ವತಿಯಿಂದ ನಿಯೋ ಮೆಟ್ರೋ ನೆಟ್‌ವರ್ಕ್ ಸಿದ್ಧಪಡಿಸಲಾಗುತ್ತಿದೆ.
ಪ್ರತೀ ಕಿ.ಮೀ ಗೆ ಅಂದಾಜು 130 ಕೋಟಿ ರೂ. ವೆಚ್ಚದಂತೆ ಒಟ್ಟು 650 ಕೋಟಿ ರೂ ವೆಚ್ಚವಾಗುವ ಸಾದ್ಯತೆಗಳಿವೆ. ನಿಯೋ ನೆಟ್‌ವರ್ಕ್‌ನ ಮೊದಲ ಹಂತದಲ್ಲಿ ಇನ್ಪೋಸಿಸ್ ಪೌಂಡೇಷನ್, ಕೋನಪ್ಪನ ಅಗ್ರಹಾರ ನಿಲ್ದಾಣ, ಟಿಮ್ಕೆನ್, ವೆಲಂಕಣಿ, 3 ಎಂ.ಇಂಡಿಯಾ. ಎಲೆಕ್ಟ್ರಾನಿಕ್ಸ್ ಸಿಟಿ ಹಂತ-3, ವಿಪ್ರೋ, ಇಂಟರ್ ಪ್ಲೆಕ್ಸ್, ಎಲೆಕ್ಟ್ರಾನಿಕ್ಸ್, ಹ್ಯಾಪಿಯೆಸ್ಟ್ ಮೈಂಡ್ಸ್, ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ಸ್ಟೇಷನ್ ಸೇರಿ ಒಟ್ಟು 10 ನಿಲ್ದಾಣ ನಿರ್ಮಿಸಲಾಗುತ್ತಿದೆ.