ಬೆಂಗಳೂರು : ನೂತನ ಆಯುಕ್ತರಾಗಿ ಈಗ ಪ್ರತಾಪ್ ರೆಡ್ಡಿ ಅಧಿಕಾರ ವಹಿಸಿಕೊಂಡಿದ್ದಾರೆ. 14 ಸೆಪ್ಟೆಂಬರ್ 1991 ರಲ್ಲಿ ಪೊಲೀಸ್ ಇಲಾಖೆಗೆ ಸೇರಿ ವೃತ್ತಿ ಜೀವನವನ್ನು ಶುರು ಮಾಡಿದ ಇವರು ಅನೇಕ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ | ಪ್ರತಾಪ್ ರೆಡ್ಡಿ ಬೆಂಗಳೂರು ಕಮಿಷನರ್: ದಯಾನಂದ್, ಅಲೋಕ್ ಕುಮಾರ್ ಕೈತಪ್ಪಿದ ಅವಕಾಶ
ಸದ್ಯ ಪೊಲೀಸ್ ಆಯುಕ್ತರಾಗಿ ಸದ್ಯ ಸೇವೆ ಆರಂಬಿಸಿದ್ದಾರೆ. ಇದಕ್ಕೂ ಮೊದಲು ಪ್ರಮುಖವಾಗಿ ಈ ಕೆಳಕಂಡ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.
- ಎಡಿಜಿಪಿ ಆಂತರಿಕ ಭದ್ರತೆ – ಮಾರ್ಚ್ 2018
- ಐಜಿಪಿ ಆಂತರಿಕ ಭದ್ರೆತೆ-ಆಗಸ್ಟ್ 2014
- ಸೈಬರ್ ಸೆಕ್ಯೂರಿಟಿ ನಿರ್ದೇಶಕ –ಫೆಬ್ರವರಿ 2009
- ಡಿಐಜಿಪಿ, ಸಿಓಡಿ, ಬೆಂಗಳೂರು – ಜುಲೈ 2005
- ಎಸಿಪಿ-ಸೆಪ್ಟೆಂಬರ್ 1986
- ಏಎಸ್ಪಿ , ಎಸ್ಪಿ ಗುಲ್ಬರ್ಗಾ –ನವೆಂಬರ್ 1999
ಪ್ರತಾಪ್ ರೆಡ್ಡಿ ಅವರ ಸೇವೆಯನ್ನು ಗುರುತಿಸಿ ಸರ್ಕಾರ ಅನೇಕ ಪ್ರಶಸ್ತಿಗಳನ್ನು, ಮೆಡಲ್‌ಗಳನ್ನು ನೀಡಿ ಗೌರವಿಸಿದೆ.
- 1994 ರಲ್ಲಿ ಕರ್ನಾಟಕ ಮುಖ್ಯಮಂತ್ರಿಗಳ ಗೌರವಾನ್ವಿತ ಸೇವೇಗಾಗಿ ಪದಕ
- 2008 ರಲ್ಲಿ ರಾಷ್ಟ್ರಪತಿಗಳ ಗೌರವಾನ್ವಿತ ಸೇವೆಗಾಗಿ ಪದಕ
- 2015 ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ
ಇದನ್ನೂ ಓದಿ | ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಆರಂಭ ಎಂದ ನೂತನ ಆಯುಕ್ತ ಪ್ರತಾಪ್ ರೆಡ್ಡಿ
ಕಮಲ್ ಪಂತ್ 2020ರ ಜುಲೈನಲ್ಲಿ ನೇಮಕ ಆಗಿದ್ದರು. ನೇಮಕವಾರಿ ಇನ್ನೆರಡು ತಿಂಗಳೂ ಕಳೆದರೆ ಎರಡು ವರ್ಷವಾಗುತ್ತಿತ್ತು. ಈ ಸ್ಥಾನಕ್ಕೆ ಹಿರಿಯ ಅಧಿಕಾರಿಗಳಾದ ದಯಾನಂದ್, ಅಲೋಕ್ ಕುಮಾರ್ ಸೇರಿ ಅನೇಕರು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಸುದ್ದಿಯಿತ್ತು. ಇದೀಗ ಆ ಎಲ್ಲರ ಹೊರತಾಗಿ 1991ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರನ್ನು ಸರ್ಕಾರ ಆಯ್ಕೆ ಮಾಡಿದೆ.