ಬೆಂಗಳೂರು: ಚೀನಾ ಸೇರಿದಂತೆ ವಿದೇಶಗಳಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಹಾಗೂ ಬಿಬಿಎಂಪಿ ಮುಂದಾಗಿದೆ. ಹೀಗಾಗಿ ನ್ಯೂ ಇಯರ್ ಸೆಲೆಬ್ರೇಷನ್‌ಗಳಿಗೆ ಬ್ರೇಕ್ ಬೀಳುವ ಸಾಧ್ಯತೆ ಕಂಡುಬಂದಿದೆ.
ಹೊಸ ವರ್ಷದ ಸೆಲೆಬ್ರೇಷನ್‌ನಿಂದ ಕೋವಿಡ್ ಸಂಖ್ಯೆ ಹೆಚ್ಚಳ ಅಗುವ ಸಾಧ್ಯತೆ ಇರುವುದರಿಂದ ಡಿ.31ರ ರಾತ್ರಿಯ ಪಾರ್ಟಿಗಳಿಗೆ ಷರತ್ತುಬದ್ಧ ಅವಕಾಶ ನೀಡುವ ಸಾಧ್ಯತೆ ಇದೆ. ಮುಂದಿನ ಮೂರು ತಿಂಗಳು ಕೊರೊನಾ ಕೇಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಈಗಾಗಲೇ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಪಾಯದ ಮುನ್ಸೂಚನೆ ನೀಡಿದೆ.
ಹೊಸ ವರ್ಷಾಚರಣೆಗೆ ಇತರ ಕಡೆಗಳಿಂದಲೂ, ಹೊಸದೇಶಗಳಿಂದಲೂ ಸಿಲಿಕಾನ್ ಸಿಟಿಗೆ ಜನ ಬರುತ್ತಾರೆ. ಹೊರ ದೇಶಗಳಿಂದ ಬಂದ ನಾಗರಿಕರಿಂದ ಕೋವಿಡ್ ವೈರಸ್ ಹರಡುವ ಸಾಧ್ಯತೆಯಿದೆ. ಚಳಿಗಾಲ ಇರುವುದರಿಂದ ವೈರಸ್ ಬೇಗ ಹರಡಬಹುದು. ಮಾಸ್ಕ್ ಧಾರಣೆ ಇಲ್ಲವಾದರೆ ಸೋಂಕು ಹರಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷ ಆಚರಣೆಗೆ ಭಾರಿ ಜನಸಮೂಹ ಸೇರುವ ಪಾರ್ಟಿಗಳಿಗೆ ಅವಕಾಶ ನೀಡದಿರಲು, ಷರತ್ತುಬದ್ಧ ಅವಕಾಶ ನೀಡಲು ಬಿಬಿಎಂಪಿಯ ಅರೋಗ್ಯ ಇಲಾಖೆಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ | ಸಂಪಾದಕೀಯ | ಮತ್ತೆ ಕೋವಿಡ್ ಉಲ್ಬಣ ಸಾಧ್ಯತೆ: ಆತಂಕ ಬೇಡ, ಎಚ್ಚರ ವಹಿಸಿ