Site icon Vistara News

ಟ್ರಾಫಿಕ್‌ ಕಿರಿಕ್‌ | ಹೆಬ್ಬಾಳ ಜಂಕ್ಷನ್ ಬಳಿ ಇಂದಿನಿಂದ ಹೊಸ ರೂಲ್ಸ್

traffic

ಬೆಂಗಳೂರು: ಅತಿ ಹೆಚ್ಚು ಸಂಚಾರ ದಟ್ಟಣೆಯಾಗುವ ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್‌ನಲ್ಲಿ ಇಂದಿನಿಂದ ಹೊಸ ರೂಲ್ಸ್ ಶುರು ಆಗಿದೆ. ಟ್ರಾಫಿಕ್ ಪೊಲೀಸರ ಈ ಹೊಸ ಪ್ರಯತ್ನ ಯಾವ ರೀತಿ ಫಲ ಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಏರ್ಪೋರ್ಟ್ ಸರ್ವಿಸ್ ರಸ್ತೆಯಲ್ಲಿ ಬರುವ ಎಲ್ಲ ವಾಹನಗಳು ಮುಖ್ಯ ರಸ್ತೆಗೆ ಪ್ರವೇಶ ಮಾಡದಂತೆ ನಿರ್ಬಂಧ ಹಾಕಲಾಗಿದೆ. ಎರಡು ಕಡೆಗಳಲ್ಲಿ ಮುಖ್ಯ ರಸ್ತೆಗೆ ಪ್ರವೇಶ ಮಾಡದಂತೆ ಬ್ಯಾರಿಕೇಡ್ ಹಾಕಲಾಗಿದೆ. ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಹೊಸ ಮಾರ್ಗಗಳತ್ತ ಹಾಗೂ ಬಂದ್‌ ಮಾಡಲಾದ ಹಳೇ ಮಾರ್ಗದ ಬಳಿ ನಿಂತಿರುವ ಪೊಲೀಸರು ವಾಹನ ಸವಾರರಿಗೆ ರಸ್ತೆ ಡೈವರ್ಶನ್‌ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಇದನ್ನೂ ಓದಿ| ಬೆಂಗಳೂರಿನಲ್ಲಿ ಇನ್ನೂ 4 ಹೊಸ ಫ್ಲೈಓವರ್; ಕಡಿಮೆ ಆಗಲಿದೆಯೇ ಟ್ರಾಫಿಕ್‌ ಕಿರಿಕಿರಿ?

ಸಂಚಾರ ದಟ್ಟಣೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಮಾರ್ಗ ಬದಲಾವಣೆಗೆ ಮುಂದಾಗಿರುವ ಸಂಚಾರಿ ಪೊಲೀಸರು, ನೇರವಾಗಿ ಹೆಬ್ಬಾಳ ಫ್ಲೈಓವರ್ ಕೆಳಭಾಗದ ಸಿಗ್ನಲ್‌ನಲ್ಲಿ ರ‍್ಯಾಂಪ್‌ ಮೂಲಕ ಎಡ ತಿರುವು ಪಡೆದು ನಗರಕ್ಕೆ ಪ್ರವೇಶಿಸಬೇಕು. ಅಲ್ಲಲ್ಲಿ ಪ್ರಯಾಣಿಕರು ಗೊಂದಲ್ಲಕೀಡಾಗಿದ್ದು ಕಂಡುಬಂತು. ಪ್ರತಿ ದಿನ ಓಡಾಡುವ ಜಾಗವನ್ನು ಬಿಟ್ಟು ಇನ್ನೊಂದು ಮಾರ್ಗವನ್ನು ಅನುಸರಿಸಬೇಕಾದಲ್ಲಿ ಗಲಿಬಿಲಿಗೊಂಡ ಸನ್ನಿವೇಶಗಳೂ ಎದುರಾದವು.

ಇದನ್ನೂ ಓದಿ| Traffic | ಬೆಂಗಳೂರು ಟ್ರಾಫಿಕ್‌ ಜಾಮ್‌ ಮುಕ್ತಿಗೆ ನಾನಾ ಇಲಾಖೆಗಳ ಸಮನ್ವಯ

Exit mobile version