ಬೆಂಗಳೂರು: ಹೊಸ ವರ್ಷಾಚರಣೆ (New year Celebration) ಎಂದರೆ ಕುಡಿದು, ಕುಣಿದು ಕುಪ್ಪಳಿಸುವುದು ಎಂದೇ ಯುವಜನರು ಭಾವಿಸಿದಂತಿದೆ. ಬೆಂಗಳೂರಿನ ಎಂ.ಜಿ. ರೋಡ್ (MG Road), ಬ್ರಿಗೇಡ್ ರಸ್ತೆ, ಕೋರಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ಭಾನುವಾರ ರಾತ್ರಿಯ ಸನ್ನಿವೇಶವನ್ನು (Night Parties) ನೋಡಿದರೆ ಹೀಗನಿಸುವುದು ಸಹಜ.
ಬೆಂಗಳೂರಿನ ಕೋರಮಂಗಲದಲ್ಲಿ ಭಾನುವಾರ ರಾತ್ರಿ ಸಾವಿರಾರು ಯುವಜನರು ಸೇರಿ ಸಂಭ್ರಮ ಆಚರಿಸಿದ್ದರು. ರಾತ್ರಿಯಾಗುತ್ತಿದ್ದಂತೆಯೇ ಪಬ್‌ಗಳಲ್ಲಿ ಕುಡಿದು ಮತ್ತೇರಿಸಿಕೊಂಡಿದ್ದ ಯುವಕ-ಯುವತಿಯರು ಬೀದಿಗೆ ಇಳಿದಿದ್ದರು. ಪ್ರಮುಖವಾಗಿ ಉತ್ತರ ಭಾರತದ ಯುವತಿಯರಂತೂ ಮೈಮೇಲೆ ಪರಿವೆಯೇ ಇಲ್ಲದಂತೆ ಓಲಾಡುತ್ತಿದ್ದರು.
ಅದರ ನಡುವೆ ಒಬ್ಬ ಯುವತಿಯಂತೂ ಕುಡಿದು ಹೆಜ್ಜೆ ಇಡಲಾಗದೆ ಅಲ್ಲೇ ಕಟ್ಟಡವೊಂದರ ಮೆಟ್ಟಿಲ ಮೇಲೆ ಬಿದ್ದುಕೊಂಡಿದ್ದರು. ಆಕೆಗೆ ಎದ್ದು ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆಕೆಯ ಕೆಲವು ಗೆಳೆಯರು ಆಕೆಯನ್ನು ಅಲ್ಲಿಂದ ಎತ್ತಿಕೊಂಡು ಹೋಗಲು ಪ್ರಯತ್ನ ನಡೆಸಿದರೂ ಫಲ ನೀಡಲಿಲ್ಲ. ಆಕೆ ಏಳುತ್ತಾ ಬೀಳುತ್ತಾ ಇದ್ದಾಗ ಪೊಲೀಸರು ಬಂದರು.
ಇದನ್ನೂ ಓದಿ : New Year Celebration: ನಶೆ ಏರಿದೆ… ಮಿತಿ ಮೀರಿದೆ! ರಾಜಧಾನಿಯ ನ್ಯೂ ಇಯರ್ ಸೆಲೆಬ್ರೇಷನ್ ಹೀಗಿತ್ತು!
ಮಹಿಳಾ ಪೊಲೀಸರು ಆಕೆಯನ್ನು ಎತ್ತಲು ಪ್ರಯತ್ನಿಸಿದರೆ ಆಕೆ ಕೊಸರಿಕೊಳ್ಳುತ್ತಿದ್ದಳು. ಬಿದ್ದಲ್ಲೇ ಹೊರಳಾಡುತ್ತಿದ್ದ ಆಕೆಯನ್ನು ಅದು ಹೇಗೋ ಬಲವಂತದಿಂದ ಎತ್ತಿಕೊಂಡು ಹೋಗಲು ಕೊನೆಗೂ ಯಶಸ್ವಿಯಾದರು.
ಬೆಂಗಳೂರಿನ ಹಲವು ಕಡೆಗಳಲ್ಲಿ ಈ ರೀತಿ ಯುವಜನರ ಹುಚ್ಚಾಟಗಳು ನಡೆದಿದ್ದವರು. ಇದರಿಂದಾಗಿ ಅವರು ಪೊಲೀಸರ ಬೆತ್ತದ ರುಚಿಯನ್ನೂ ಚೆನ್ನಾಗಿ ಅನುಭವಿಸಿದರು.