Site icon Vistara News

ಹೋಟೆಲ್‌ನಲ್ಲಿ ಕಳ್ಳತನಕ್ಕೆ ಬಂದು ಚಿಕನ್ ಹುಡುಕಾಡಿದ, ಅದೂ ಸಿಗದೆ ವಾಪಸಾದ !

ಬೆಂಗಳೂರು : ಬ್ಯಾಡರಹಳ್ಳಿ ಬಳಿಯ ತಿಗಳರಪೇಟೆಯಲ್ಲಿ ಕಳ್ಳತನಕ್ಕೆ ಎಂದು ಬಂದು ಚಿಕನ್‌ ಹುಡುಗಾಟ ಮಾಡಿ ಅದೂ ಸಿಗದೆ ಬರೀ ಕೈಯಲ್ಲಿ ಕಳ್ಳ ವಾಪಾಸಾದ ಘಟನೆ ನಡೆದಿದೆ. ತಿಗಳರಪೇಟೆಯ ಫೈವ್ ಸ್ಟಾರ್ ಚಿಕನ್ ಸೆಂಟರ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಫೈವ್ ಸ್ಟಾರ್ ಚಿಕನ್ ಸೆಂಟರ್ ಮೇಲ್ಚಾವಣಿ ಮುರಿದು ಕಳ್ಳತನಕ್ಕೆ ಯತ್ನಿಸಿದ್ದ.

ಇದನ್ನೂ ಓದಿ : 50 ಸಿಸಿಟಿವಿ, ಮೊಬೈಲ್‌ ನೆಟ್‌ವರ್ಕ್‌ ಸಹಾಯದಿಂದ ಸಿಕ್ಕಿಬಿದ್ದ ಲಾರಿ ಕಳ್ಳ !

ಅಂಗಡಿಯ ಡ್ಯಾಶ್ ಬೋರ್ಡ್‌ನಲ್ಲಿ ದುಡ್ಡಿಲ್ಲವೆಂದು ಕಿಚನ್‌ನಲ್ಲಿ ಕಳ್ಳ ಹುಡುಕಾಟ ನಡೆಸಿದ್ದು , ನಂತರ ತಡರಾತ್ರಿ ನಾನ್-ವೆಜ್‌ಗಾಗಿ ಹುಡುಕಾಡಿದ್ದಾನೆ. ದುಡ್ಡು ಸಿಗದೇ, ಚಿಕನ್ನೂ ಸಿಗದೇ ಬರೀ ಗೈಯಲ್ಲಿ ವಾಪಾಸ್ಸಾಗಿದ್ದಾನೆ. ಈ ದೃಶ್ಯ ಸಿಸಿಟವಿಯಲ್ಲಿ ಸೆರೆ ಯಾಗಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಅಂಗಡಿ ಮಾಲೀಕ ಉಮೇಶ್‌ ಅವರಿಂದ ದೂರು ದಾಖಲಾಗಿದೆ.

Exit mobile version