Site icon Vistara News

Nisha Narasapa: ಬಾಲನಟಿ ವಂಶಿಕಾ ಹೆಸರು ಬಳಸಿ ಫೈನಾನ್ಶಿಯರುಗಳಿಗೂ ಧೋಖಾ ಮಾಡಿದ ನಿಶಾ!

vanshika name misusing

ಬೆಂಗಳೂರು: ಬಾಲನಟಿ ವಂಶಿಕಾ (Vanshika Anjani kashyapa) ಹೆಸರು ಬಳಸಿಕೊಂಡು ಹಲವರಿಗೆ ವಂಚಿಸಿದ (fraud case) ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ಬಗೆದಷ್ಟೂ ಮತ್ತಷ್ಟು ರಹಸ್ಯಗಳು ಇದರಲ್ಲಿ ಬಯಲಾಗುತ್ತಿದೆ. ನಿಶಾ ನರಸಪ್ಪ (Nisha Narasapa) ಮತ್ತಷ್ಟು ಮಂದಿಗೆ ವಂಚಿಸಿರುವುದು ಬಯಲಾಗಿದೆ.

ನಿಮ್ಮ ಮಕ್ಕಳಿಗೆ ನಟನೆಯ ಚಾನ್ಸ್ ಕೊಡಿಸುವುದಾಗಿ ಈ ನಿಶಾ ಎಂಬಾಕೆ ಹಲವು ಪೋಷಕರನ್ನು ನಂಬಿಸಿ ವಂಚಿಸಿದ್ದಳು. ಮಕ್ಕಳ ಪೋಷಕರಲ್ಲದೇ ದೊಡ್ಡ ದೊಡ್ಡ ಫೈನಾನ್ಷಿಯರ್‌ಗಳಿಗೂ ವಂಚನೆ ಮಾಡಿರುವುದು ಈಗ ಗೊತ್ತಾಗಿದೆ. ಸುಮಾರು 30ರಿಂದ 40 ಜನ ಹೀಗೆ ನಿಶಾಗೆ ಹಣ ಕೊಟ್ಟು ಕೈ ಸುಟ್ಟಿಕೊಂಡಿದ್ದಾರೆ.

ಈಕೆ ಬಣ್ಣ ಬಣ್ಣದ ಮಾತುಗಳ ಮೂಲಕ ಮರುಳು ಮಾಡಿ ಲಕ್ಷ ಲಕ್ಷ ಹಣ ತೆಗೆದುಕೊಳ್ಳುತ್ತಿದ್ದಳು. ತೆಗೆದುಕೊಂಡ ಹಣಕ್ಕೆ ಪ್ರತಿಯಾಗಿ ಆರಂಭದಲ್ಲಿ 20 ಪರ್ಸೆಂಟ್ ಬಡ್ಡಿ ಹಣ ನೀಡಿದ್ದಳು. 10 ಲಕ್ಷ ಹಣ ಪಡೆದರೆ ಎರಡು ಲಕ್ಷ ಬಡ್ಡಿ ಹಾಕಿ ರಿಟರ್ನ್ ಮಾಡುತ್ತಿದ್ದಳು. ಇದನ್ನು ನಂಬಿ ಮತ್ತಷ್ಟು ಹಣ ನೀಡಿದವರಿಗೆ ಅಸಲೇ ಮರಳಿ ಬಂದಿಲ್ಲ.

ದೂರು ದಾಖಲಾಗುತ್ತಿದ್ದಂತೆ ನಿಶಾ ನರಸಪ್ಪ ಅಕೌಂಟ್ ಖಾಲಿ ಮಾಡಿದ್ದಾಳೆ. ಕೇವಲ ಎಂಟು ಸಾವಿರ ಇಟ್ಟಿದ್ದಾಳೆ. ನಿಶಾ ಅಕೌಂಟ್ ಡಿಟೇಲ್ಸ್ ತೆಗೆದಾಗ ಆಕೆಯ ಕೋಟಿ ಕೋಟಿ ವ್ಯವಹಾರ ಬಹಿರಂಗವಾಗಿದೆ. ಸದ್ಯ ತನಿಖೆ ಮುಂದುವರಿಸಿರುವ ಸದಾಶಿವನಗರ ಪೊಲೀಸರು, ವಂಚನೆ ಮಾಡಿ ಈಕೆ ಗಳಿಸಿರೋ ಆಭರಣ, ಆಸ್ತಿ ವಶಕ್ಕೆ ಮುಂದಾಗಿದ್ದಾರೆ.

ವಂಶಿಕಾ ಅಂಜನಿ ಕಶ್ಯಪ ಕಿರುತೆರೆಯಲ್ಲಿ ತನ್ನದೆ ಛಾಪು ಮೂಡಿಸಿ ಎಲ್ಲರ ಮನ ಗೆಲುತ್ತಿರುವ ಪೋರಿ. ತಂದೆ ನಟ ಮಾಸ್ಟರ್‌ ಆನಂದ್‌ರಂತೆ (Master anandh) ಅರಳು ಹುರಿದಂತೆ ಮಾತನಾಡುವ ವಂಶಿಕಾ (Vanshika Anjani kashyapa) ಸೋಶಿಯಲ್‌ ಮೀಡಿಯಾದಲ್ಲೂ (Social Media) ಹೆಚ್ಚು ಸದ್ದು ಮಾಡುತ್ತಿದ್ದಾಳೆ. ಈ ಬಾಲನಟಿ ವಂಶಿಕಾ ಹೆಸರನ್ನು ದುರುಪಯೋಗ (Fraud Case) ಮಾಡಿಕೊಳ್ಳಲಾಗುತ್ತಿದೆ ಎಂದು ತಾಯಿ ಯಶಸ್ವಿನಿ ಜು.13ರಂದು ಠಾಣೆ ಮೆಟ್ಟಿಲೇರಿದ್ದರು.

ವಂಶಿಕಾ ಮಾಸ್ಟರ್‌ ಆನಂದ್‌ ಹೆಸರಿನಲ್ಲಿ (Vanshika Anjani kashyapa) ಹಣ ಪೀಕಿದ ನಿಶಾ ನರಸಪ್ಪಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್‌ ಆದೇಶಿಸಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಒಂದೊಂದು ಹಳೇ ವಂಚನೆ ಕೇಸ್‌ಗಳು (Fraud Case) ಬೆಳಕಿಗೆ ಬರುತ್ತಿವೆ. ನಿಶಾ ನರಸಪ್ಪ (nisha narasapa) ವಿರುದ್ಧ ಇದೇ ಮೊದಲಲ್ಲ, ಈ ಹಿಂದೆಯೇ ವಂಚನೆ ಕೇಸ್‌ ದಾಖಲಾಗಿದೆ.

ಇದನ್ನೂ ಓದಿ: Nisha narasapa: ಬಗೆದಷ್ಟು ಬೆಳಕಿಗೆ ಬರ್ತಿದೆ ನಿಶಾ ನರಸಪ್ಪ ಮಾಡಿರುವ ಮಹಾ ಮೋಸ!

Exit mobile version