Site icon Vistara News

ತನಿಖೆ ನಡೆದಿದ್ದು ಎಟಿಎಂ ರಾಬರಿ ಕೇಸ್‌: ಸಿಕ್ಕಿದ್ದು ಖತರ್ನಾಕ್‌ ಗ್ಯಾಂಗ್‌

ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಏಪ್ರಿಲ್‌ 15ರಂದು ಚಿಕ್ಕಗೊಲ್ಲರಹಟ್ಟಿಯ ಎಟಿಎಂ ರಾಬರಿಯನ್ನು ಪೊಲೀಸರು ಬೇಧಿಸಿದ್ದು, ಬಾಂಗ್ಲಾ ಅಕ್ರಮ ವಲಸಿಗರ ದೊಡ್ಡದೊಂದು ಜಾಲವೇ ಬೆಳಕಿಗೆ ಬಂದಿದೆ.

ಆರೋಪಿಗಳು ರಾಬರಿ ಮಾಡಿ ₹18 ಲಕ್ಷ ದೋಚಿದ್ದರು. ಈ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ತನಿಖೆ ವೇಳೆ ಬಾಂಗ್ಲಾದೇಶೀಯರು ಭಾಗಿಯಾಗಿರುವುದು ಪತ್ತೆಯಾಯಿತು. ಒಟ್ಟು 122 ಅರೋಪಿಗಳು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಭಾರತಕ್ಕೆ ಆಗಮಿಸಿ ಅಧಾರ್ ಕಾರ್ಡ್ ಸಹ ಮಾಡಿಸಿದ್ದಾರೆ. ಕೆಲವರು ಭಾರತದ ಪಾಸ್‌ಪೋರ್ಟ್‌ ಸಹ ಮಾಡಿಸಿಕೊಂಡಿದ್ದಾರೆ. ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಹಲವು ನಕಲು ದಾಖಲೆಗಳನ್ನು ಹೊಂದಿದ್ದಾರೆ.

ನಕಲಿ ದಾಖಲೆ ರ‍್ಯಾಕೆಟ್‌

ಅಕ್ರಮ ವಲಸಿಗರಿಗೆ ಇಂಥ ದಾಖಲೆ ಕೊಡಿಸುವ ಜಾಲವೇ ಇರುವುದು ಇದರಿಂದ ಪತ್ತೆಯಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಆನೇಕ ಕಡೆಗಳಲ್ಲಿ ಇಂತಹ ಜಾಲ ಇದೆ. ಕೇವಲ ₹500, ₹1000ಕ್ಕೆ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರೋಪಿಗಳು, ಇದಕ್ಕೆ ಬೇಕಾದ ಬಿಬಿಎಂಪಿ ಸೀಲ್‌ಗಳನ್ನು, ಬೌರಿಂಗ್, ವಾಣಿವಿಲಾಸ್ ಸೇರಿ ವಿವಿಧ ಆಸ್ಪತ್ರೆಗಳ 5 ಸೀಲ್‌ಗಳನ್ನು ಮಾಡಿಸಿಕೊಂಡಿದ್ದಾರೆ. ಇವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅರೋಪಿಗಳು ಭಾರತೀಯ ರೂಪಾಯಿಯನ್ನು ವಿವಿಧ ರೀತಿಯಲ್ಲಿ ಚೆನ್ನೈ. ಕೋಲ್ಕತ್ತಾ. ಪಂಜಾಬ್ ಮೂಲಕ ಬಾಂಗ್ಲಾದೇಶಕ್ಕೆ ಕಳಿಸುತ್ತಿದ್ದರು. ಇದುವರೆಗೆ ಒಟ್ಟು ಹದಿಮೂರು ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಲಾಗಿರುವುದು ಪತ್ತೆಯಾಗಿದೆ. ಪತ್ತೆಯಾದ ಹದಿಮೂರು ಬ್ಯಾಂಕ್ ಖಾತೆಗಳನ್ನು ಪೊಲೀಸರು ಫ್ರೀಜ್‌ ಮಾಡಿದ್ದಾರೆ.

ಎಟಿಎಂ ರಾಬರಿ

ಸೈದುಲ್ಲಾ ಅಕೂನ್ @ ಶಾಹೀದ್ ಅಹ್ಮದ್ , ಮೊಹಮ್ಮದ್ ಅಬ್ದುಲ್ ಅಲಿಂ , ಸೈಯದ್ ಮನ್ಸೂರ್ , ಅಮೀನ್ ಸೇಠ್ , ಆಯಿಷಾ, ರಾಕೇಶ್, ಇಷ್ತಿಯಾಕ್ ಪಾಷಾ ಸೇರಿ ಒಂಬತ್ತು ಜನರನ್ನು ಬಂಧಿಸಲಾಗಿದೆ. ಇವರು ಬಾಂಗ್ಲಾದೇಶದಿಂದ ಭಾರತದ ತ್ರಿಪುರಾ ಗಡಿ ಮುಖಾಂತರ ಅಕ್ರಮವಾಗಿ ನುಸುಳಿ ಬಂದಿದ್ದ ಆರೋಪಿಗಳು.

ಸೈದುಲ್ಲಾ ಅಕೂನ್, ಮೊಹಮ್ಮದ್ ಅಬ್ದುಲ್ ಅಲಿಂ, ಸುಹೇಲ್ ಅಹಮದ್
ಮೊಹಮ್ಮದ್ ಇದಾಯತ್, ಸೈಯದ್ ಮನ್ಸೂರ್, ರಾಬಿಯಾ
ಅಮೀನ್ ಸೇತ್, ರಾಕೇಶ್ ಹೆಚ್, ಇಸ್ತಿಯಕ್ ಪಾಶ

ಇವರಲ್ಲಿ ಶಾಹೀದ್ ಅಮೀನ್ ಹಾಗೂ ಸುಮನ್ ಇಸ್ಲಾಂ ತಂದೆ ಮಗ. ಇವರಿಬ್ಬರೂ ಬಾಂಗ್ಲಾದೇಶದ ಬಾಗರೇಟ್ ಜಿಲ್ಲೆಯಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿ ಬಂದಿದ್ದರು. ಇಸ್ತಾಕ್ ಪಾಷಾ @ ಮೆಡಿಕಲ್ ಪಾಷಾ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದರು. ವೃತ್ತಿಯಲ್ಲಿ ಫಾರ್ಮಾಸಿಸ್ಟ್ ಆಗಿರುವ ಇಸ್ತಾಕ್ ಪಾಷಾ ತಾವರೆಕೆರೆಯ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದ. ಈತ ಕೊರೊನಾ ಪರೀಕ್ಷೆ ಮಾಡುವ ಕೆಲಸ ಮಾಡುತ್ತ, ಹಣಕೊಟ್ಟವರಿಗೆ ಬೇಕಾದಂತೆ ಕೊರೊನಾ ಪಾಸಿಟಿವ್, ನೆಗೆಟಿವ್ ರಿಪೋರ್ಟ್ ತಯಾರು ಮಾಡಿಕೊಡುತ್ತಿದ್ದ. ಈಗ ಪೊಲೀಸರು ಬಂಧಿತರಿಂದ ಸರ್ಕಾರಿ ಸೀಲುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ| ಕಬ್ಬನ್‌ ಪಾರ್ಕ್‌ಗೆ ಹೋಗುವವರೇ ಎಚ್ಚರ; ಪೊಲೀಸ್‌ ವೇಷದಲ್ಲಿದ್ದು ಹಣ ದೋಚ್ತಾರೆ ಖದೀಮರು !

Exit mobile version